ETV Bharat / sports

ದಿಢೀರ್‌ ಸ್ವದೇಶಕ್ಕೆ ತೆರಳಿದ ರಾಜಸ್ಥಾನ್ ತಂಡದ ಶಿಮ್ರಾನ್ ಹೆಟ್ಮೆಯರ್: ಇಲ್ಲಿದೆ ಕಾರಣ.. - ಶಿಮ್ರಾನ್ ಹೆಟ್ಮೆಯರ್​ಗೆ ಮೊದಲ ಮಗುವಿನ ನಿರೀಕ್ಷೆ

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಗಯಾನಾಗೆ ತೆರಳಿದ್ದು, ಶೀಘ್ರದಲ್ಲೇ ಮರಳಲಿದ್ದಾರೆ ರಾಜಸ್ಥಾನ ರಾಯಲ್ಸ್ ಟ್ವೀಟ್ ಮಾಡಿದೆ.

Shimron Hetmyer has travelled back to Guyana early morning today
ಗಯಾನಾಗೆ ತೆರಳಿದ ರಾಜಸ್ಥಾನ್ ರಾಯಲ್ಸ್ ತಂಡದ ಶಿಮ್ರಾನ್ ಹೆಟ್ಮೆಯರ್: ಇಲ್ಲಿದೆ ಕಾರಣ..
author img

By

Published : May 8, 2022, 11:31 AM IST

ಇಂಡಿಯನ್ ಪ್ರೀಮಿಯರ್​ ಲೀಗ್​ನ ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್​​ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಗಯಾನಾಗೆ ತೆರಳಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ತಂಡ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಅವರು ಮರಳಲಿದ್ದಾರೆ ಎಂದಿದೆ. ತಂಡಕ್ಕೆ ಸಾಕಷ್ಟು ಬಾರಿ ಅನಿವಾರ್ಯ ಸಂದರ್ಭಗಳಲ್ಲಿ ನೆರವಾಗಿರುವ ಹೆಟ್ಮೆಯರ್ ಕೆಲವು ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶಿಮ್ರಾನ್ ಹೆಟ್ಮೆಯರ್ ದಕ್ಷಿಣ ಅಮೆರಿಕ ವ್ಯಾಪ್ತಿಯಲ್ಲಿರುವ ಗಯಾನಾಗೆ ತೆರಳಿದ್ದಾರೆ. ಅವರು ಶೀಘ್ರದಲ್ಲೇ ಹಿಂದಿರುಗುತ್ತಾರೆ ಎಂದು ರಾಜಸ್ಥಾನ ರಾಯಲ್ಸ್ ಟ್ವೀಟ್ ಮಾಡಿದೆ. ಈ ಟ್ವೀಟ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಹೆಟ್ಮೆಯರ್ ಅವರನ್ನು ಆಟಗಾರರು ಅಪ್ಪಿಕೊಂಡು ಬೀಳ್ಕೊಡುವುದನ್ನು ನೋಡಬಹುದು.

ವಿಡಿಯೋದಲ್ಲಿ ಮಾತನಾಡಿರುವ ಹೆಟ್ಮೆಯರ್ 'ಮಕ್ಕಳು ಒಮ್ಮೆ ಮಾತ್ರ ಜನಿಸುತ್ತಾರೆ ಮತ್ತು ಇದು ನನ್ನ ಮೊದಲನೆಯ ಮಗು. ನನ್ನ ವಸ್ತುಗಳು ಇನ್ನೂ ಕೋಣೆಯಲ್ಲಿ ಉಳಿದಿವೆ. ವಿಶೇಷ ಮತ್ತು ತುರ್ತು ಪರಿಸ್ಥಿತಿಯಿಂದಾಗಿ ನಾನು ಹೊರಡುತ್ತಿದ್ದೇನೆ. ನನ್ನನ್ನು ತುಂಬಾ ಮಿಸ್ ಮಾಡಿಕೊಳ್ಳಬೇಡಿ, ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುವೆ' ಎಂದಿದ್ದಾರೆ.

ಐಪಿಎಲ್ 2022ರಲ್ಲಿ 11 ಪಂದ್ಯಗಳಲ್ಲಿ, ಹೆಟ್ಮೆಯರ್ 72.75ರ ಸರಾಸರಿಯಲ್ಲಿ 291 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆವೃತ್ತಿಯಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೆ 59 ಆಗಿದೆ. ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 190 ರನ್ ಬೆನ್ನಟ್ಟಲು ರಾಜಸ್ಥಾನಕ್ಕೆ ಸಹಾಯ ಮಾಡಲು ಹೆಟ್ಮೆಯರ್ ಕೇವಲ 16 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದ್ದರು. ರಾಜಸ್ಥಾನ್ ರಾಯಲ್ಸ್ ಪ್ರಸ್ತುತ 14 ಅಂಕಗಳೊಂದಿಗೆ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಕೌಂಟಿ ಕ್ರಿಕೆಟ್‌ನಲ್ಲಿ ಪೂಜಾರ 4ನೇ ಶತಕ; ಪಾಕ್‌ ವೇಗಿಗೆ ಸಿಕ್ಸರ್‌, ಬೌಂಡರಿ ಬಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.