ETV Bharat / sports

ನಾಲ್ಕನೇ ಸಲ ಸೊನ್ನೆ ಸುತ್ತಿದ ಬಟ್ಲರ್​: ಸೊನ್ನೆ ವೀರರ ಪಟ್ಟಿಗೆ ಸ್ಟಾರ್​ ಬ್ಯಾಟರ್​ - Four time duck in in one Ipl season

ಒಂದೇ ಸೀಸನ್​ನಲ್ಲಿ ನಾಲ್ಕು ಬಾರಿ ಸೊನ್ನೆಗೆ ಔಟ್​ ಆಗುವ ಮೂಲಕ ರಾಜಸ್ಥಾನ ರಾಯಲ್ಸ್​ ಬ್ಯಾಟರ್​ ಜೋಸ್​ ಬಟ್ಲರ್​ ಕೆಟ್ಟ ದಾಖಲೆಗೆ ಪಾತ್ರರಾದರು. ಇದಕ್ಕೂ ಮೊದಲು 6 ಮಂದಿ ಇಷ್ಟೇ ಬಾರಿ ಸೊನ್ನೆಗೆ ಔಟಾಗಿದ್ದರು.

ಸೊನ್ನೆ ವೀರರ ಪಟ್ಟಿಗೆ ಸ್ಟಾರ್​ ಬ್ಯಾಟರ್​
ಸೊನ್ನೆ ವೀರರ ಪಟ್ಟಿಗೆ ಸ್ಟಾರ್​ ಬ್ಯಾಟರ್​
author img

By

Published : May 15, 2023, 5:42 PM IST

ಜೈಪುರ (ರಾಜಸ್ಥಾನ): ಇಂಗ್ಲೆಂಡ್​ನ ಹೊಡಿಬಡಿ ಆಟಗಾರ ಜೋಸ್​ ಬಟ್ಲರ್​ ಇಂಡಿಯನ್ಸ್​ ಪ್ರೀಮಿಯರ್​ ಲೀಗ್​ನ(ಐಪಿಎಲ್) 16 ನೇ ಋತುವಿನಲ್ಲಿ ಜೋಶ್​ ಕಳೆದುಕೊಂಡಿದ್ದಾರೆ. ರಾಜಸ್ಥಾನ ತಂಡದ ಪರವಾಗಿ ತಮ್ಮ ಬ್ಯಾಟಿಂಗ್​ ಖದರ್​ ತೋರಿಸುವಲ್ಲಿ ವಿಫಲರಾಗಿದ್ದಲ್ಲದೇ, ಒಂದೇ ಸೀಸನ್​ನಲ್ಲಿ 4 ಬಾರಿ ಸೊನ್ನೆ ಸುತ್ತಿ ಅನಗತ್ಯ ದಾಖಲೆಗೆ ಒಳಗಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಬಟ್ಲರ್​ ಸೊನ್ನೆಗೆ ಪೆವಿಲಿಯನ್​ ಸೇರಿದರು. ಇದರಿಂದ ಐಪಿಎಲ್ 2023 ರ ಆವೃತ್ತಿಯೊಂದರಲ್ಲಿ ನಾಲ್ಕನೇ ಬಾರಿಗೆ ರನ್​ ಗಳಿಸದೇ ಔಟಾಗಿ ಕೆಟ್ಟ ದಾಖಲೆ ನಿರ್ಮಿಸಿದರು. ಪಂದ್ಯದಲ್ಲಿ ಆರ್​ಸಿಬಿಯ ವೇಯ್ನ್ ಪಾರ್ನೆಲ್ ಅವರ ಎಸೆತದಲ್ಲಿ ಡಕ್‌ಗೆ ಔಟಾದರು.

ನಾಲ್ಕು ಸೊನ್ನೆ ಸುತ್ತಿದವರು: ಈ ಹಿಂದೆ ಒಂದೇ ಐಪಿಎಲ್ ಋತುವಿನಲ್ಲಿ ನಾಲ್ಕು ಬಾರಿ ಡಕ್ ಆದ ಬ್ಯಾಟರ್​ಗಳಾದ ಹರ್ಷಲ್ ಗಿಬ್ಸ್ (ಡೆಕ್ಕನ್ ಚಾರ್ಜರ್ಸ್, 2009), ಮಿಥುನ್ ಮನ್ಹಾಸ್ (ಪುಣೆ ವಾರಿಯರ್ಸ್, 2011), ಮನೀಶ್ ಪಾಂಡೆ (ಪುಣೆ ವಾರಿಯರ್ಸ್, 2012), ಶಿಖರ್ ಧವನ್ (ದೆಹಲಿ ಕ್ಯಾಪಿಟಲ್ಸ್, 2020), ಇಯಾನ್ ಮಾರ್ಗನ್ (ಕೋಲ್ಕತ್ತಾ ನೈಟ್ ರೈಡರ್ಸ್, 2021) ಮತ್ತು ನಿಕೋಲಸ್ ಪೂರನ್ (ಸನ್ ರೈಸರ್ಸ್ ಹೈದರಾಬಾದ್, 2021) ಅವರ ಪಟ್ಟಿಗೆ ಬಟ್ಲರ್​ ಸೇರಿಕೊಂಡರು.

ಚೇಸಿಂಗ್​​ ಫೋಬಿಯಾ: ಇನ್ನೂ, ಈ ಋತುವಿನಲ್ಲಿ ಜೋಸ್​ ಬಟ್ಲರ್ ಆಡಿದ 13 ಪಂದ್ಯಗಳಲ್ಲಿ 30.15 ಸರಾಸರಿಯಲ್ಲಿ ಒಟ್ಟು 4 ಅರ್ಧ ಶತಕಗಳೊಂದಿಗೆ 392 ರನ್ ಗಳಿಸಿದ್ದಾರೆ. ಗುರಿ ಬೆನ್ನಟ್ಟುವ ವೇಳೆ ರನ್​ ಬ್ಯಾಟಿಂಗ್​ ಝಳಪಿಸುತ್ತಿಲ್ಲ. ರನ್​ ಗಳಿಸಲು ಪರದಾಡುತ್ತಿರುವ ಬಟ್ಲರ್ ಚೇಸಿಂಗ್ ವೇಳೆಯೇ 4 ಬಾರಿ ಸೊನ್ನೆ ಸುತ್ತಿದ್ದಾರೆ. ಅಲ್ಲದೇ, ಐದು ಪಂದ್ಯಗಳಲ್ಲಿ 19,0,40,0,0,0 ಸ್ಕೋರ್‌ ಮಾಡಿದ್ದಾರೆ.

ಇನ್ನೂ, ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್​ಗೆ 171 ರನ್​ ಗಳಿಸಿತು. ಆರಂಭಿಕರಾದ ವಿರಾಟ್ ಕೊಹ್ಲಿ (18) ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (44 ಎಸೆತಗಳಲ್ಲಿ 55) ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿದರು.

ನಂತರ, ಡು ಪ್ಲೆಸಿಸ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್ (33 ಎಸೆತಗಳಲ್ಲಿ 54) ಸೇರಿಕೊಂಡು ರಾಯಲ್ಸ್​ ಮೇಲೆ ದಾಳಿ ನಡೆಸಿದರು. ಎರಡನೇ ವಿಕೆಟ್‌ಗೆ 69 ರನ್‌ಗಳ ಜೊತೆಯಾಟ ನೀಡಿದರು. ಕೊನೆಯಲ್ಲಿ ಅನುಜ್ ರಾವತ್ 11 ಎಸೆತಗಳಲ್ಲಿ ಔಟಾಗದೇ 29 ರನ್​ ಮಾಡಿ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ನೆರವಾದರು. ರಾಯಲ್ಸ್​ ಪರವಾಗಿ ಆ್ಯಡಂ ಝಂಪಾ, ಕೆಎಂ ಆಸಿಫ್ ತಲಾ 2 ವಿಕೆಟ್​ ಪಡೆದರು.

ಮೂರನೇ ಕನಿಷ್ಠ ಮೊತ್ತಕ್ಕೆ ಔಟ್​: ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್​ ಐಪಿಎಲ್​ ಇತಿಹಾಸದಲ್ಲಿಯೇ ಮೂರನೇ ಅತಿ ಕನಿಷ್ಠ ಮೊತ್ತಕ್ಕೆ ಔಟ್​ ಆಯಿತು. 10.3 ಓವರ್​ಗಳಲ್ಲಿ 59 ರನ್​ಗೆ ಎಲ್ಲ ವಿಕೆಟ್​ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಜೋ ರೂಟ್ (10) ಶಿಮ್ರಾನ್ ಹೆಟ್ಮೆಯರ್ (35) ರನ್​ ಗಳಿಸಿದ್ದೇ ಅತ್ಯಧಿಕ ಮೊತ್ತವಾಗಿತ್ತು. ಆರ್​ಸಿಬಿಯ ವೇಯ್ನ್ ಪಾರ್ನೆಲ್ 3, ಮೈಕಲ್ ಬ್ರೇಸ್‌ವೆಲ್ ಮತ್ತು ಕರಣ್​ ಶರ್ಮಾ ತಲಾ ವಿಕೆಟ್​ ಪಡೆದರು. ರಾಯಲ್ಸ್​ ಬ್ಯಾಟರ್​ಗಳನ್ನು ಉಡೀಸ್​ ಮಾಡಿದರು.

ಈ ಗೆಲುವಿನೊಂದಿಗೆ ಆರ್‌ಸಿಬಿ 6 ಗೆಲುವು, 6 ಸೋಲು ಕಾಣುವ ಮೂಲಕ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ. ದೊಡ್ಡ ಅಂತರದಲ್ಲಿ ಜಯಿಸಿ ರನ್​ರೇಟ್​ ಕೂಡ ಹೆಚ್ಚಿಸಿಕೊಂಡು ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿತು. ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ 13 ಪಂದ್ಯಗಳಲ್ಲಿ 6 ಗೆಲುವು, 7 ಸೋಲಿನೊಂದಿಗೆ 12 ಅಂಕ ಗಳಿಸಿ ಆರನೇ ಸ್ಥಾನಕ್ಕೆ ಕುಸಿದು, ನಾಕೌಟ್​ ಅವಕಾಶದಿಂದ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ.

ಓದಿ: ನಿಧಾನಗತಿ ಬೌಲಿಂಗ್​: ಕೆಕೆಆರ್​ ನಾಯಕ ರಾಣಾಗೆ 24 ಲಕ್ಷ ರೂ. ದಂಡ, ಪಂದ್ಯ ನಿಷೇಧ ಭೀತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.