ಚೆನ್ನೈ : ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಮೈದಾನದ ಅಂಪೈರ್ ತೀರ್ಮಾನವನ್ನು ಅಗೌರವ ತೋರಿದ್ದಕ್ಕೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ವಿರುದ್ಧ ಐಪಿಎಲ್ ನಿಯಾಮಾವಳಿಯ ಪ್ರಕಾರ ಕ್ರಮ ಜರುಗಿಸುವ ಸಾಧ್ಯತೆಯಿದೆ.
ಜಂಟಲ್‌ಮ್ಯಾನ್ ಆಟವಾಗಿರುವ ಕ್ರಿಕೆಟ್ನಲ್ಲಿ ಯಾವುದೇ ಕ್ರಿಕೆಟಿಗ ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದುವರೆ ದಶಕದ ಅನುಭವವಿರುವ ಒಬ್ಬ ಹಿರಿಯ ಆಟಗಾರ ಈ ರೀತಿ ಅಂಪೈರ್ ತೀರ್ಮಾನದ ವಿರುದ್ಧ ಅನುಚಿತವಾಗಿ ವರ್ತಿಸುವುದು ಭವಿಷ್ಯದ ಕ್ರಿಕೆಟಿಗರ ಮೇಲೆ ದುಷ್ಪರಿಣಾಮ ಬೀರಬಹುದು.
- — Cricket Unlimi (@CricketUnlimi) April 23, 2021 " class="align-text-top noRightClick twitterSection" data="
— Cricket Unlimi (@CricketUnlimi) April 23, 2021
">— Cricket Unlimi (@CricketUnlimi) April 23, 2021
ಶುಕ್ರವಾರ ಪಂಜಾಬ್ನ ಮೋಯಿಸಸ್ ಹೆನ್ರಿಕ್ಸ್ ಬೌಲಿಂಗ್ನಲ್ಲಿ ಚೆಂಡು ರೋಹಿತ್ ತೊಡೆಗೆ ಸೋಕಿ ಕೀಪರ್ ರಾಹುಲ್ ಕೈ ಸೇರಿತ್ತು. ಬೌಲರ್ ಮತ್ತು ಕೀಪರ್ ಅಫೀಲ್ ಮಾಡಿ ದೊಡನೆ ಅಂಫೈರ್ ಔಟ್ ಎಂದು ತೀರ್ಮಾನ ನೀಡಿದರು.
ಆದರೆ, ತಕ್ಷಣ ರಿವ್ಯೂವ್ ತೆಗೆದುಕೊಂಡ ರೋಹಿತ್, ನಂತರ ಅಂಪೈರ್ ಕಡೆ ಕೈ ತೋರಿಸುತ್ತಾ ಕೋಪದಿಂದ ವರ್ತಿಸಿದ್ದರು. ಇದು ಟಿವಿ ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು.
ಐಪಿಎಲ್ ನಿಯಾಮವಳಿಗಳ ಪ್ರಕಾರ ಅಂಪೈರ್ ತಪ್ಪು ನಿರ್ಣಯ ತೋರಿದಾಗ ಬ್ಯಾಟ್ಸ್ಮನ್ ಆ ತೀರ್ಪನ್ನು ಪ್ರಶ್ನಿಸುವ ಅಧಿಕಾರವಿಲ್ಲ. ಆದರೆ, ರೋಹಿತ್ ಅಸಮಾಧಾನ ವ್ಯಕ್ತಪಡಿಸಿರುವ ಈ ವಿಡಿಯೋ ವೈರಲ್ ಆಗಿದೆ.
ಆದರೆ, ಇನ್ನೂ ಮುಂಬೈ ನಾಯಕನ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದರ ಬಗ್ಗೆ ಐಪಿಎಲ್ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.
ಇದನ್ನು ಓದಿ:ಐಪಿಎಲ್ಗಾಗಿ ಸಿದ್ಧಪಡಿಸಿರುವ ಪಿಚ್ಗಳ ಬಗ್ಗೆ ಸ್ಟೋಕ್ಸ್, ಬ್ರೆಟ್ ಲೀ ಅಸಮಾಧಾನ