ನವದೆಹಲಿ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಅವರು ತಮ್ಮ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಅನ್ನು 5 ಬಾರಿ ಐಪಿಎಲ್ ಚಾಂಪಿಯನ್‌ಗಳನ್ನಾಗಿ ಮಾಡಿದ್ದಾರೆ. ರೋಹಿತ್ ಶರ್ಮಾ ಅವರು ಐಪಿಎಲ್‌ನಲ್ಲಿ ರನ್ಗಳ ಮಳೆ ಸುರಿಸುತ್ತಿದ್ದರು. ಜೊತೆಗೆ ಐಪಿಎಲ್ ಇತಿಹಾಸದಲ್ಲಿ ಅವರು ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ರೋಹಿತ್ 236 ಪಂದ್ಯಗಳ 231 ಇನ್ನಿಂಗ್ಸ್‌ಗಳಲ್ಲಿ 29.86 ಸರಾಸರಿಯಲ್ಲಿ 6,063 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಛಾಪು ಮೂಡಿಸಿದ್ದರು. ಅವರ ಬ್ಯಾಟಿಂಗ್ ಅಬ್ಬರಕ್ಕೆ ಬೌಲರ್‌ಗಳು ನಡುಗುತ್ತಿದ್ದರು. ಆದರೆ, ಬುಧವಾರ ಮೊಹಾಲಿ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ರೋಹಿತ್ ಶರ್ಮಾ ಹೆಸರಿಗೆ ಐಪಿಎಲ್‌ನ ಅತ್ಯಂತ ಮುಜುಗರದ ದಾಖಲೆ ಕೂಡಾ ಸೇರ್ಪಡೆಯಾಗಿದೆ.
ಇದನ್ನೂ ಓದಿ: ಐಸಿಸಿ ಏಕದಿನ ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ ಶುಭಮನ್ ಗಿಲ್ಗೆ 4ನೇ ಸ್ಥಾನ..
ಶೂನ್ಯಕ್ಕೆ ಔಟಾಗಿ ಕಳಪೆ ದಾಖಲೆ ಮಾಡಿದ ರೋಹಿತ್ ಶರ್ಮಾ: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರ ಎಂದರೆ, ಅದು ಮುಂಬೈ ಇಂಡಿಯನ್ಸ್ ನಾಯಕ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಹೆಸರು ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಕಳಪೆ ಮಟ್ಟದ ದಾಖಲೆಗೆ ಸೇರ್ಪಡೆಯಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ, ರೋಹಿತ್ ಶೂನ್ಯಕ್ಕೆ ಔಟಾದರು ಮತ್ತು ಅವರು ಹೆಚ್ಚು ಬಾರಿ ಡಕ್ ಔಟಾದ ಆಟಗಾರ ಎಂಬ ಕಳಪೆ ಖ್ಯಾತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ವೇಗವಾಗಿ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್; ಇನ್ಸ್ಟಾಗ್ರಾಮ್ನಲ್ಲಿ ನ್ಯೂ ಲುಕ್..
ರೋಹಿತ್ ಇದುವರೆಗೂ ಐಪಿಎಲ್‌ನಲ್ಲಿ 15 ಬಾರಿ ಡಕ್ ಔಟ್ ಆಗಿದ್ದಾರೆ. ಅವರಿಗಿಂತ ಮೊದಲು ದಿನೇಶ್ ಕಾರ್ತಿಕ್, ಮನ್‌ದೀಪ್ ಸಿಂಗ್ ಮತ್ತು ಸುನಿಲ್ ನಾರಾಯಣ್ ಕೂಡ 15 ಸಲ ಡಕ್‌ಔಟಾಗಿದ್ದರು. ಸದ್ಯ ರೋಹಿತ್ ಈ ಮುಜುಗರದ ದಾಖಲೆಯ ಕ್ಲಬ್ ಸೇರಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಇವರಲ್ಲದೇ ಅಂಬಟಿ ರಾಯುಡು ಕೂಡ ಐಪಿಎಲ್‌ನಲ್ಲಿ 14 ಬಾರಿ ಡಕ್ ಔಟಾಗಿದ್ದಾರೆ.
19 ಬಾರಿ ಪಂದ್ಯ ಶ್ರೇಷ್ಠ ಭಾರತೀಯ ಆಟಗಾರ ರೋಹಿತ್ ಶರ್ಮಾ: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಎನಿಸಿಕೊಂಡಿದ್ದ ಭಾರತದ ಆಟಗಾರ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಶೂನ್ಯಕ್ಕೆ ಔಟಾದ ಮುಜುಗರದ ದಾಖಲೆ ಒಂದೆಡೆಯಾದರೆ, ಮತ್ತೊಂದೆಡೆ ವಿಶೇಷ ಏಂದ್ರೆ, ಹಿಟ್‌ಮ್ಯಾನ್ ಹೆಸರಿನಲ್ಲಿ ದಾಖಲೆ ಅವರಿಗಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು (19 ಬಾರಿ) ಪಂದ್ಯ ಶ್ರೇಷ್ಠ ಭಾರತೀಯ ಆಟಗಾರ ರೋಹಿತ್. ಜೊತೆಗೆ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ ಗರಿಷ್ಠ 25 ಬಾರಿ ಪಂದ್ಯ ಶ್ರೇಷ್ಠ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ 22 ಬಾರಿ ಪಂದ್ಯ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮೊಯಿನ್ ಅಲಿ ಹಿಡಿದ ಕ್ಯಾಚ್ ನೋಡಿ ಬೆರಗಾದ ಧೋನಿ!