ಹೈದರಾಬಾದ್ (ತೆಲಂಗಾಣ): ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮಂಗಳವಾರ ಐಪಿಎಲ್ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದರು. ಮುಂಬೈ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ ಆಟಗಾರ ಇಂಡಿಯನ್ಸ್ ಪ್ರೀಮಿಯರ್ ಲೀಗ್ನಲ್ಲಿ 6 ಸಾವಿರ ರನ್ ಗಡಿ ದಾಟಿದರು. ಈ ಮೂಲಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರು.
ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದರು. ಪಂದ್ಯದಲ್ಲಿ 14 ರನ್ ಗಳಿಸಿದ್ದಾಗ ಹಿಟ್ಮ್ಯಾನ್ 6 ಸಾವಿರ ರನ್ ಗಡಿ ಮುಟ್ಟಿದರು. 18 ಎಸೆತಗಳಲ್ಲಿ 28 ರನ್ ಮಾಡಿ ಔಟಾದರು. ಇದರಿಂದ 6014 ರನ್ ದಾಖಲಿಸಿದರು. ರೋಹಿತ್ ಶರ್ಮಾ ಐಪಿಎಲ್ನಲ್ಲಿ 232 ಪಂದ್ಯಗಳನ್ನಾಡಿದ್ದಾರೆ.
ರೋಹಿತ್ ಶರ್ಮಾಗೂ ಮೊದಲು ಆರ್ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ(6844) ಪಂಜಾಬ್ ನಾಯಕ ಶಿಖರ್ ಧವನ್(6477), ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಡೇವಿಡ್ ವಾರ್ನರ್(6109) ಆರು ಸಾವಿರ ರನ್ ಗಳಿಸಿದ ಅಗ್ರ ಮೂವರು ಆಟಗಾರರಾಗಿದ್ದಾರೆ.
ಬಲಗೈ ಬ್ಯಾಟರ್ ಶರ್ಮಾ ಈವರೆಗಿನ 16 ಆವೃತ್ತಿಯ ಐಪಿಎಲ್ನಲ್ಲಿ 2 ಫ್ರಾಂಚೈಸಿ ಪರ ಬ್ಯಾಟ್ ಬೀಸಿದ್ದಾರೆ. 2008 ರಿಂದ 2010 ರವರೆಗೆ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡಿದ್ದರು. 2009 ರಲ್ಲಿ ತಂಡ ಚಾಂಪಿಯನ್ ಆಗಿತ್ತು. ಈ ವೇಳೆ ಯುವ ಆಟಗಾರನಾಗಿದ್ದ ಶರ್ಮಾ ತಂಡದಲ್ಲಿದ್ದರು. ಬಳಿಕ 2011 ರಲ್ಲಿ ಮುಂಬೈ ಇಂಡಿಯನ್ಸ್ಗೆ ಸೇರಿಕೊಂಡರು. 2013 ರ ಆವೃತ್ತಿಯ ಮಧ್ಯದಲ್ಲಿ ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ ನಾಯಕತ್ವ ಬಿಟ್ಟಾಗ ಮುಂಬೈ ಇಂಡಿಯನ್ಸ್ ಸಾರಥ್ಯ ವಹಿಸಿಕೊಂಡಿದ್ದಾರೆ.
-
We 💙 you 3000x2, 𝐑𝐎! #OneFamily #SRHvMI #MumbaiMeriJaan #MumbaiIndians #IPL2023 @ImRo45 pic.twitter.com/xHX3Lldyg8
— Mumbai Indians (@mipaltan) April 18, 2023 " class="align-text-top noRightClick twitterSection" data="
">We 💙 you 3000x2, 𝐑𝐎! #OneFamily #SRHvMI #MumbaiMeriJaan #MumbaiIndians #IPL2023 @ImRo45 pic.twitter.com/xHX3Lldyg8
— Mumbai Indians (@mipaltan) April 18, 2023We 💙 you 3000x2, 𝐑𝐎! #OneFamily #SRHvMI #MumbaiMeriJaan #MumbaiIndians #IPL2023 @ImRo45 pic.twitter.com/xHX3Lldyg8
— Mumbai Indians (@mipaltan) April 18, 2023
ಶರ್ಮಾ ಗಳಿಸಿದ 6014 ರನ್ಗಳಲ್ಲಿ ಡೆಕ್ಕನ್ ಚಾರ್ಜರ್ಸ್ ಪರವಾಗಿ 1219 ರನ್ ಮಾಡಿದ್ದರೆ, ಮುಂಬೈ ಪರವಾಗಿ 4844 ರನ್ ಗಳಿಸಿದ್ದಾರೆ. ವಿಶೇಷವೆಂದರೆ ತಂಡದ ಪರವಾಗಿ ಅತಿಹೆಚ್ಚು ರನ್ ಮಾಡಿದ ಆಟಗಾರ ಎಂಬ ಖ್ಯಾತಿಯೂ ಹೊಂದಿದ್ದಾರೆ. ಐಪಿಎಲ್ನಲ್ಲಿ ಒಂದು ತಂಡದ ಪರವಾಗಿ ನಾಯಕನಾಗಿ ಅತಿಹೆಚ್ಚು ರನ್ ಗಳಿಸಿದ ಆಟಗಾರನೂ ಹೌದು. ಐಪಿಎಲ್ನಲ್ಲಿ ಅತಿಹೆಚ್ಚು ಯಶಸ್ವಿ ನಾಯಕನಾದ ಹಿಟ್ಟರ್, ಮುಂಬೈ ಇಂಡಿಯನ್ಸ್ ತಂಡವನ್ನು 2013, 2015, 2017, 2020 ರ ಆವೃತ್ತಿಗಳಲ್ಲಿ ಚಾಂಪಿಯನ್ ಮಾಡಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.
ಇನ್ನು, ನಿನ್ನೆಯ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಹಣಾಹಣಿಯಲ್ಲಿ ಮುಂಬೈ ಮೊದಲು ಬ್ಯಾಟಿಂಗ್‌ಗೆ ಇಳಿದು, 20 ಓವರ್ಗಳಲ್ಲಿ 192 ರನ್ ಪೇರಿಸಿತು. ಗುರಿ ಬೆನ್ನತ್ತಿದ ಹೈದರಾಬಾದ್ ತಂಡ 178 ರನ್ ಗಳಿಸಿ 14 ರನ್ಗಳಿಂದ ಸೋಲು ಕಂಡಿತು.
ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್ಗೆ 41 ರನ್ ಮಾಡಿ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಕ್ಯಾಮರೂನ್ ಗ್ರೀನ್(64) ಅರ್ಧಶತಕ ಬಾರಿಸಿದರು. ಎಡಗೈ ಬ್ಯಾಟರ್ ತಿಲಕ್ ವರ್ಮಾ 37 ರನ್ ಗಳಿಸಿದರು.
ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ವೈಫಲ್ಯ ಕಂಡಿತು. ಮಯಾಂಕ್ ಅಗರ್ವಾಲ್ 48, ನಾಯಕ ಐಡನ್ ಮಾರ್ಕ್ರಮ್ 22, ಹೆನ್ರಿಚ್ ಕ್ಲಾಸಿನ್ 36 ರನ್ ಗಳಿಸಿದರು. ತಂಡ 178 ರನ್ಗಳಿಗೆ ಆಲೌಟ್ ಆಗಿ ಸೋಲು ಕಂಡಿತು.
ಓದಿ:IPL 2023: 178 ರನ್ಗೆ ಹೈದರಾಬಾದ್ ಸರ್ವಪತನ: ಮುಂಬೈಗೆ 14 ರನ್ನಿಂದ ಗೆಲುವು