ETV Bharat / sports

''Real King Virat Kohli'': ವಿರಾಟ್​ ಬ್ಯಾಟಿಂಗ್​ ಕೊಂಡಾಡಿದ ಪಾಕ್​ ಕ್ರಿಕೆಟಿಗ, ಬಾಬರ್​ ಫ್ಯಾನ್ಸ್​ಗೆ ಟಾಂಗ್​! - ಇಂಡಿಯನ್ ಪ್ರೀಮಿಯರ್ ಲೀಗ್

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಬೆಂಗಳೂರು ತಂಡ 8 ವಿಕೆಟ್​ಗಳ ಅದ್ಭುತ ಜಯ ದಾಖಲಿಸಿದೆ. ವಿರಾಟ್​ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಕ್ರಿಕೆಟ್​ ದಿಗ್ಗಜರು, ಅಭಿಮಾನಿಗಳಿಂದ ಹೊಗಳಿಕೆಗೆ ಪಾತ್ರರಾಗಿದ್ದಾರೆ.

Real King Virat Kohli : Mohammad Amir tweet after virat kohli IPL hundred
''Real King Virat Kohli'' : ವಿರಾಟ್​ ಬ್ಯಾಟಿಂಗ್​ ಬಣ್ಣಿಸಿದ ಪಾಕ್​ ಕ್ರಿಕೆಟಿಗ
author img

By

Published : May 19, 2023, 8:00 AM IST

ಹೈದರಾಬಾದ್​ : ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್) ಗುರುವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್​​ಗಳ ಅಮೋಘ ಜಯ ದಾಖಲಿಸಿತು. ಬೃಹತ್​ ಮೊತ್ತ ಬೆನ್ನಟ್ಟುವಲ್ಲಿ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಆರ್​ಸಿಬಿ ಪರ ಹೀರೋ ಆದರು. ಐಪಿಎಲ್​​ ಇತಿಹಾಸದ 6ನೇ ಶತಕ ಸಿಡಿಸಿದ ವಿರಾಟ್​ ಬ್ಯಾಟಿಂಗ್​ ವೈಭವಕ್ಕೆ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಸೇರಿದಂತೆ ಹಲವು ಕ್ರಿಕೆಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕ್ರಿಸ್‌ ಗೇಲ್ ದಾಖಲೆ ಸರಿಗಟ್ಟಿದ ಕೊಹ್ಲಿ: 187 ರನ್​ ಗೆಲುವಿನ ಗುರಿ ಪಡೆದ ರಾಯಲ್ ಚಾಲೆಂಜರ್ಸ್​​ಗೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ​ ವಿರಾಟ್ ಕೊಹ್ಲಿ 17.5 ಓವರ್​​ಗಳಲ್ಲಿ 172 ರನ್​ಗಳ ಸಿಡಿಲಬ್ಬರದ ಆರಂಭಿಕ ಜೊತೆಯಾಟ ನೀಡಿದರು. ಆರಂಭದಿಂದಲೂ ಹೈದರಾಬಾದ್​ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಪ್ಲೇಆಫ್​ಗೆ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಲು ಪ್ರಮುಖ ಕೊಡುಗೆ ನೀಡಿತು. ಅರ್ಧಶತಕದ ಗಡಿ ದಾಟಿದ ಬಳಿಕ ಮತ್ತಷ್ಟು ಆಕ್ರಮಣಕಾರಿ ಬ್ಯಾಟಿಂಗ್​ ತೋರಿದ ವಿರಾಟ್​ 63 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್​ ಸಹಿತ 100 ರನ್​ ಬಾರಿಸಿ ಔಟಾದರು. ಇದು ಐಪಿಎಲ್​ನಲ್ಲಿ ಕೊಹ್ಲಿ ಬಾರಿಸಿದ 6ನೇ ಶತಕವಾಗಿದ್ದು, ಮಾಜಿ ಆರ್​ಸಿಬಿ ಆಟಗಾರ ಕ್ರಿಸ್​ ಗೇಲ್ (6 ಶತಕ)​​ ದಾಖಲೆ ಸರಿಗಟ್ಟಿದರು. ರಾಜಸ್ಥಾನ ತಂಡದ ಜೋಸ್​ ಬಟ್ಲರ್​ 5 ಶತಕ ಸಿಡಿಸಿದ್ದು, ನಂತರದ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಈ ಬಾರಿಯ ಐಪಿಎಲ್​ನಲ್ಲಿ ಒಟ್ಟಾರೆ 6 ಅರ್ಧಶತಕ ಹಾಗೂ 1 ಶತಕ ಗಳಿಸಿದ್ದು, ಇದುವರೆಗೆ 13 ಪಂದ್ಯಗಳಿಂದ 538 ರನ್​ಗಳೊಂದಿಗೆ ಅಗ್ರ 4ನೇ ಸ್ಥಾನದಲ್ಲಿದ್ದಾರೆ. ಸಿಕ್ಸರ್​ ಮೂಲಕ ಶತಕ ತಲುಪಿದ ಕೊಹ್ಲಿ 2018ರ ನಂತರ ಐಪಿಎಲ್ ಬಳಿಕ ಮೊದಲ ಬಾರಿಗೆ ಈ ಸೀಸನ್‌ನಲ್ಲಿ 500 ರನ್‌ ಗಡಿ ದಾಟಿದ್ದಾರೆ. ಕೊಹ್ಲಿ ಅಬ್ಬರದ ಬ್ಯಾಟಿಂಗ್​ ಅನೇಕ ಕ್ರಿಕೆಟ್​ ದಿಗ್ಗಜರು ಹಾಡಿಹೊಗಳಿದ್ದಾರೆ.

ಮೊಹಮ್ಮದ್ ಅಮೀರ್ ಮೆಚ್ಚುಗೆ: ಈ ಬಗ್ಗೆ ಟ್ವೀಟ್​ ಮಾಡಿರುವ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್, ''ಎಂತಹ ಇನ್ನಿಂಗ್ಸ್, ವಿರಾಟ್​​ ಕೊಹ್ಲಿ ಏಕೈಕ ನಿಜವಾದ ಕಿಂಗ್​'' ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್​ ಜಗತ್ತಿನಲ್ಲಿ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಪಾಕ್​ ನಾಯಕ ಬಾಬರ್ ಅಜಮ್​ರನ್ನು ಅವರ ಅಭಿಮಾನಿಗಳು ಬ್ಯಾಟಿಂಗ್ ರಾಜ ಎಂದೂ ಕರೆಯುತ್ತಾರೆ. ಅವರನ್ನು ವಿರಾಟ್​ ಕೊಹ್ಲಿ ಜೊತೆಗೂ ಹೋಲಿಕೆ ಮಾಡಲಾಗುತ್ತದೆ. ಈ ನಡುವೆ ಸದ್ಯ ಪಾಕ್​ ತಂಡದಲ್ಲಿ ಸ್ಥಾನ ಪಡೆಯದ ಅಮೀರ್​ ಕೊಹ್ಲಿಯನ್ನು ನಿಜವಾದ ಕಿಂಗ್​ ಎನ್ನುವ ಮೂಲಕ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

  • It was evident that this would be Virat’s day from the very first ball when he played that cover drive.

    Virat and Faf both looked in total control, they not only played many big shots but also ran rather well between the wickets to build a successful partnership.

    186 wasn’t a… pic.twitter.com/YpIFVroZfi

    — Sachin Tendulkar (@sachin_rt) May 18, 2023 " class="align-text-top noRightClick twitterSection" data=" ">

ಇನ್ನುಳಿದಂತೆ, ಭಾರತ ತಂಡದ ಮಾಜಿ ಆಟಗಾರರಾದ ಆಲ್​ರೌಂಡರ್​​ ಯುವರಾಜ್ ಸಿಂಗ್, ಸುರೇಶ್​ ರೈನಾ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಹೈದರಾಬಾದ್​ನಲ್ಲಿ ವಿಶೇಷ ಇನ್ನಿಂಗ್ಸ್​ ಕಟ್ಟಿದ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ''ಮೊದಲ ಎಸೆತದಿಂದಲೇ ಕವರ್ ಡ್ರೈವ್ ಆಡಿದಾಗಲೇ ಇದು ವಿರಾಟ್‌ ದಿನ ಎಂಬುದು ಸ್ಪಷ್ಟವಾಗಿತ್ತು. ವಿರಾಟ್ ಮತ್ತು ಫಾಫ್ ಇಬ್ಬರೂ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಭರ್ಜರಿ ಹೊಡೆತ ಮಾತ್ರವಲ್ಲದೆ ಯಶಸ್ವಿ ಜೊತೆಯಾಟದೊಂದಿಗೆ, ಸ್ಟ್ರೈಕ್​ ಬದಲಾವಣೆ ಮೂಲಕವೂ ಉತ್ತಮ ರನ್​ ಪೇರಿಸಿದರು. ಇಬ್ಬರ ಬ್ಯಾಟಿಂಗ್​ ಎದುರು 186 ರನ್​ ದೊಡ್ಡ ಮೊತ್ತವಾಗಿರಲಿಲ್ಲ'' ಎಂದು ಸಚಿನ್​ ಟ್ವೀಟ್​ ಮಾಡಿದ್ದಾರೆ.

''All rise for the King ? ಎಂತಹ ಅದ್ಭುತ ಇನ್ನಿಂಗ್ಸ್ ವಿರಾಟ್​ ಕೊಹ್ಲಿ? ವೀಕ್ಷಿಸುವುದೇ ಒಂದು ಸತ್ಕಾರ!'' ಎಂದು ಯುವರಾಜ್​ ಸಿಂಗ್​ ಟ್ವೀಟ್​ನಲ್ಲಿ ಬಣ್ಣಿಸಿದ್ದಾರೆ. ''What a day of cricket! ಮತ್ತೊಂದು ಭವ್ಯ ಶತಕ ದಾಖಲಿಸಿದ ವಿರಾಟ್​ ಕೊಹ್ಲಿ, ಬ್ಯಾಟಿಂಗ್​ ನೈಪುಣ್ಯತೆ ಹಾಗೂ ದೃಢತೆಯನ್ನು ಪ್ರದರ್ಶಿಸಿದ್ದಾರೆ. ನಿಜವಾದ ಬ್ಯಾಟಿಂಗ್ ಪ್ರತಿಭೆ! ಫಾಫ್ ಇನ್ನಿಂಗ್ಸ್​ ಕೂಡ ಅದ್ಭುತವಾಗಿತ್ತು'' ಎಂದು ಸುರೇಶ್​ ರೈನಾ ಟ್ವೀಟ್ ಮೂಲಕ ಕೊಂಡಾಡಿದ್ದಾರೆ.

ಆರ್‌ಸಿಬಿ ಪ್ಲೇಆಫ್‌ ಹಾದಿ ಹೇಗಿದೆ?: ಹೈದಾರಾಬಾದ್​ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್​ ಕನಸು ಜೀವಂತವಾಗಿದ್ದು, ಮುಂದಿನ ಪಂದ್ಯದಲ್ಲಿ ಲೀಗ್​ ಹಂತದ ಕೊನೆಯ ಹಣಾಹಣಿಯಲ್ಲಿ ಮೇ 21ರಂದು ಆರ್​ಸಿಬಿಯು ಗುಜರಾತ್​ ವಿರುದ್ಧ ಆಡಲಿದೆ. ಈ ಪಂದ್ಯ ಗೆದ್ದರೆ ಪ್ಲೇಆಫ್ ತಲುಪಲಿದೆ. ನಿರ್ಣಾಯಕ ಹಂತಕ್ಕೇರಲು ಚೆನ್ನೈ, ಮುಂಬೈ, ಲಕ್ನೋ, ರಾಜಸ್ಥಾನ ಹಾಗೂ ಬೆಂಗಳೂರು ತಂಡಗಳ ನಡುವೆ ತೀವ್ರ ಪೈಪೋಟಿ ಇದ್ದು, ಎಲ್ಲ ತಂಡಗಳಿಗೂ ತಲಾ ಒಂದು ಪಂದ್ಯ ಬಾಕಿ ಇರುವುದರಿಂದ ರೋಚಕತೆ ಸೃಷ್ಟಿಸಿದೆ. ಗುಜರಾತ್ ಟೈಟಾನ್ಸ್​ ಪ್ಲೇಆಫ್ ಬಾಗಿಲು ತಟ್ಟಿದ ಏಕಮಾತ್ರ ಟೀಂ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.