ಅಹಮದಾಬಾದ್ : ಇಂಡಿಯನ್ ಪ್ರೀಮಿಯರ್ ಲೀಗ್ನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸೋಲು ಕಾಣುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ಫೈನಲ್ಗೆ ಲಗ್ಗೆ ಹಾಕಿದೆ. ಇದೀಗ ಗುಜರಾತ್ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಮಹತ್ವದ ಪಂದ್ಯದಲ್ಲಿ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮಾಡಿರುವ ಟ್ವೀಟ್ವೊಂದು ಎಲ್ಲರ ಮನಗೆದ್ದಿದೆ. ಆರ್ಸಿಬಿ ನಡೆಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗಲು ಶುರುವಾಗಿದೆ.
ಆರ್ಸಿಬಿ ಟ್ವೀಟ್ : ನಿಮ್ಮ ಪ್ರದರ್ಶನದಿಂದ ಶೇನ್ ವಾರ್ನ್ ಸಂತಸಗೊಂಡಿದ್ದಾರೆ. ಇಂದು ರಾತ್ರಿ ಚೆನ್ನಾಗಿ ಆಡಿದ್ದೀರಿ. ಫೈನಲ್ ಪಂದ್ಯಕ್ಕೆ ನಿಮಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ಬೆನ್ನಲ್ಲೇ ಬೆಂಗಳೂರು ತಂಡ ಈ ರೀತಿಯಾಗಿ ಟ್ವೀಟ್ ಮಾಡಿದೆ. ಅದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರು ತಂಡದ ಟ್ವೀಟ್ಗೆ ರಾಜಸ್ಥಾನ ರಾಯಲ್ಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ಹೃದಯದ ಎಮೋಜಿ ಹಾಕಿಕೊಂಡಿದೆ.
-
The Great late Shane Warne is smiling on you. Well played tonight, @rajasthanroyals and good luck for the final. 👍🏻#PlayBold #IPL2022 #RRvRCB
— Royal Challengers Bangalore (@RCBTweets) May 27, 2022 " class="align-text-top noRightClick twitterSection" data="
">The Great late Shane Warne is smiling on you. Well played tonight, @rajasthanroyals and good luck for the final. 👍🏻#PlayBold #IPL2022 #RRvRCB
— Royal Challengers Bangalore (@RCBTweets) May 27, 2022The Great late Shane Warne is smiling on you. Well played tonight, @rajasthanroyals and good luck for the final. 👍🏻#PlayBold #IPL2022 #RRvRCB
— Royal Challengers Bangalore (@RCBTweets) May 27, 2022
ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಶೇನ್ ವಾರ್ನ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ಶೇನ್ ವಾರ್ನ್ಗೋಸ್ಕರ ಕಪ್ ಗೆಲ್ಲುತ್ತೇವೆ ಎಂದು ಹೇಳಿಕೊಂಡಿತ್ತು. ಇದೀಗ ಕ್ವಾಲಿಫೈಯರ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ,ಫೈನಲ್ಗೆ ಲಗ್ಗೆ ಹಾಕಿದೆ. ನಾಳೆ ಗುಜರಾತ್ ತಂಡದ ವಿರುದ್ಧ ಅಂತಿಮ ಹೋರಾಟ ನಡೆಸಲಿದೆ.
ನಿನ್ನೆಯ ಪಂದ್ಯದಲ್ಲಿ ಬೆಂಗಳೂರು ನೀಡಿದ್ದ 157ರನ್ಗಳ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ 18.1 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ತಂಡದ ಪರ ಜೋಸ್ ಬಟ್ಲರ್ ಅಜೇಯ 106 ರನ್ ಗಳಿಕೆ ಮಾಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಇವರಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ಮೆಕಾಯ್ ಅತ್ಯುತ್ತಮ ಸಾಥ್ ನೀಡಿ, ಎದುರಾಳಿ ತಂಡದ ಪ್ರಮುಖ ವಿಕೆಟ್ ಪಡೆದಿದ್ದರು. ಎಲಿಮಿನೇಟರ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬೆಂಗಳೂರು ತಂಡ, ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ವೈಫಲ್ಯ ಅನುಭವಿಸಿ ಸೋಲುವಂತಾಯಿತು.