ನವದೆಹಲಿ: ಸೆ.19ರಿಂದ ಐಪಿಎಲ್ ಮತ್ತೆ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ದುಬೈಯಲ್ಲಿ ಅಭ್ಯಾಸ ನಡೆಸುತ್ತಿವೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎನಿಸಿರುವ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಕಠಿಣ ಅಭ್ಯಾಸದಲ್ಲಿ ತೊಡಗಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 2ನೇ ಆವೃತ್ತಿಯ ಮೊದಲ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ನೀಲಿ ಜರ್ಸಿ ತೊಟ್ಟು ಮೈದಾನಕ್ಕಿಳಿಯಲಿದ್ದಾರೆ. ಈ ಮೂಲಕ, ಕೋವಿಡ್ ವಾರಿಯರ್ಸ್ಗೆ ವಿಶೇಷ ಗೌರವ ಸಲ್ಲಿಸಲಿದ್ದಾರೆ.
-
United to help and support the frontline warriors who have worked selflessly and tirelessly to fight the Covid Pandemic. 🙌🏻🙌🏻
— Royal Challengers Bangalore (@RCBTweets) September 14, 2021 " class="align-text-top noRightClick twitterSection" data="
We are #1Team1Fight! 🔴🔵#PlayBold #WeAreChallengers #IPL2021 #KKRvRCB pic.twitter.com/W7fMXnvwrL
">United to help and support the frontline warriors who have worked selflessly and tirelessly to fight the Covid Pandemic. 🙌🏻🙌🏻
— Royal Challengers Bangalore (@RCBTweets) September 14, 2021
We are #1Team1Fight! 🔴🔵#PlayBold #WeAreChallengers #IPL2021 #KKRvRCB pic.twitter.com/W7fMXnvwrLUnited to help and support the frontline warriors who have worked selflessly and tirelessly to fight the Covid Pandemic. 🙌🏻🙌🏻
— Royal Challengers Bangalore (@RCBTweets) September 14, 2021
We are #1Team1Fight! 🔴🔵#PlayBold #WeAreChallengers #IPL2021 #KKRvRCB pic.twitter.com/W7fMXnvwrL
ಐಪಿಎಲ್ ಆರಂಭದ ವೇಳೆ ಆರ್‌ಸಿಬಿ ತಂಡ ನೀಲಿ ಜರ್ಸಿ ತೊಟ್ಟು ಮೈದಾನಕ್ಕಿಳಿಯಲು ನಿರ್ಧರಿಸಿತ್ತು. ಆದರೆ ಟೂರ್ನಿ ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ಸಾಧ್ಯವಾಗಿರಲಿಲ್ಲ. ಇದೀಗ ದುಬೈನಲ್ಲಿ ಟೂರ್ನಿ ಮತ್ತೆ ಆರಂಭವಾಗುತ್ತಿದೆ. ವೈದ್ಯರು, ನರ್ಸ್, ಅಂಗನವಾಡಿ ಕಾರ್ಯಕರ್ತರು ಸೇರಿ ಎಲ್ಲಾ ಮುಂಚೂಣಿ ಕೋವಿಡ್ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ಟೀಂ ಮುಂದಾಗಿದೆ.
ಇದಕ್ಕೂ ಮೊದಲು ಆರ್‌ಸಿಬಿ ತಂಡವು ಗೀವ್ ಇಂಡಿಯಾ ಸಂಸ್ಥೆ ಜೊತೆ ಸೇರಿ, ಆಮ್ಲಜನಕ, ಪಿಪಿಇ ಕಿಟ್, ಸ್ಯಾನಿಟೈಸರ್ ನೀಡಿ ಕೋವಿಡ್ ಹೋರಾಟಕ್ಕೆ ಕೈಜೋಡಿಸಿತ್ತು. ಕಳೆದ ಬಾರಿಯ ಐಪಿಎಲ್ನಲ್ಲಿ ‘ಗೋ ಗ್ರೀನ್’ ಅಭಿಯಾನದ ಅಂಗವಾಗಿ ಹಸಿರು ಜರ್ಸಿ ತೊಟ್ಟಿತ್ತು.
ಸೆ.20ರಂದು ಆರ್‌ಸಿಬಿ ಕೊಲ್ಕತ್ತಾ ನೈಟರ್ ರೈಡರ್ಸ್ ವಿರುದ್ಧ ಮೊದಲ ಪಂದ್ಯವಾಡುತ್ತಿದೆ.
ಇದನ್ನೂ ಓದಿ: 14 ವರ್ಷಗಳ ಸಾಧನೆಯ ನೆನಪು: ಚೊಚ್ಚಲ ಟಿ-20 ವಿಶ್ವಕಪ್ನಲ್ಲಿ ಪಾಕ್ ಮಣಿಸಿದ್ದ ಭಾರತ