ETV Bharat / sports

ನಿಧಾನಗತಿ ಬೌಲಿಂಗ್​: ಆರ್​ಸಿಬಿ ಹಂಗಾಮಿ ನಾಯಕ ವಿರಾಟ್​ ಕೊಹ್ಲಿಗೆ 24 ಲಕ್ಷ ರೂಪಾಯಿ ದಂಡ - ನಾಯಕ ವಿರಾಟ್ ಕೊಹ್ಲಿಗೆ ದಂಡ

ಆರ್​ಸಿಬಿ ಹಂಗಾಮಿ ನಾಯಕ ವಿರಾಟ್​ ಕೊಹ್ಲಿಗೆ ನಿಧಾನಗತಿ ಬೌಲಿಂಗ್​ ಕಾರಣಕ್ಕಾಗಿ ದಂಡ ವಿಧಿಸಲಾಗಿದೆ.

ನಿಧಾನಗತಿ ಬೌಲಿಂಗ್​
ನಿಧಾನಗತಿ ಬೌಲಿಂಗ್​
author img

By

Published : Apr 25, 2023, 8:36 AM IST

ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್​ ಮಾಡಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಪಂದ್ಯ ನಡೆದಿತ್ತು.

ನಿಗದಿತ ಸಮಯಕ್ಕಿಂತಲೂ ಹೆಚ್ಚು ಅವಧಿ ತೆಗೆದುಕೊಂಡಲ್ಲಿ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ. ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಅವಧಿಗಿಂತಲೂ 2 ಓವರ್​ ಹಿಂದಿತ್ತು. ಹೀಗಾಗಿ ನಾಯಕ ಕೊಹ್ಲಿಗೆ 24 ಲಕ್ಷ ರೂಪಾಯಿ, ಬದಲಿ ಆಟಗಾರ ಸೇರಿದಂತೆ ತಂಡದ ಹನ್ನೊಂದು ಆಟಗಾರರಿಗೆ 6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಂದರೆ, ಇದು ಪಂದ್ಯ ಶುಲ್ಕದ ಶೇಕಡಾ 25 ರಷ್ಟು ಆಗಿದೆ.

ಆರ್​ಸಿಬಿ ತಂಡದ ಎರಡನೇ ನಿಧಾನಗತಿ ಬೌಲಿಂಗ್​ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಲಖನೌ ಸೂಪರ್​ಜೈಂಟ್ಸ್​ ಎದುರಿನ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿದ ದಂಡನೆಗೆ ಒಳಗಾಗಿತ್ತು. ಆಗ ತಂಡದ ನಾಯಕನಾಗಿದ್ದ ಫಾಪ್​ ಡು ಪ್ಲೆಸಿಸ್​ಗೆ 12 ಲಕ್ಷ ರೂಪಾಯಿ ದಂಡ ಹಾಕಲಾಗಿತ್ತು. ಇನ್ನೊಂದು ಪಂದ್ಯದಲ್ಲಿ ಇದೇ ತಪ್ಪನ್ನು ಪುನರಾವರ್ತಿಸಿದರೆ, ತಂಡದ ನಾಯಕ ಒಂದು ಪಂದ್ಯದಿಂದ ಹೊರಬೀಳಲಿದ್ದಾರೆ.

ಮುಂದೆ ತಪ್ಪು ಮಾಡುವಂತಿಲ್ಲ: ಮುಂದಿನ ಪಂದ್ಯಗಳಲ್ಲಿ ಆರ್​ಸಿಬಿ ತಂಡದ ನಾಯಕರು ಈ ತಪ್ಪನ್ನು ಪುನರಾವರ್ತನೆ ಮಾಡುವಂತಿಲ್ಲ. ಒಂದು ವೇಳೆ ಆರ್​ಸಿಬಿ ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಮುಂದಿನ ಪಂದ್ಯದಲ್ಲೂ ಇದೇ ತಪ್ಪನ್ನು ಮಾಡಿದರೆ, ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಲಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ನಿಗದಿತ ಸಮಯದಲ್ಲಿ 20 ಓವರ್​ಗಳನ್ನು ಪೂರ್ಣಗೊಳಿಸಲೇಕಾಗಿದೆ.

ಐಸಿಸಿ ನಿಯಮವೇನು?: ಐಸಿಸಿ ನಿಯಮದ ಪ್ರಕಾರ, ಟಿ20 ಕ್ರಿಕೆಟ್​ನಲ್ಲಿ 20 ಓವರ್​ಗಳನ್ನು 1 ಗಂಟೆ 25 ನಿಮಿಷದೊಳಗೆ ಪೂರ್ಣಗೊಳಿಸಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಉಳಿದ ಓವರ್​ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್​ನಿಂದ ಒಬ್ಬ ​ಆಟಗಾರನನ್ನು 30 ಯಾರ್ಡ್​ ಸರ್ಕಲ್​ನ ಹೊರಗೆ ನಿಲ್ಲಿಸಬೇಕಾಗುತ್ತದೆ.

ಇನ್ನೂ, ಸ್ಲೋ ಓವರ್​ ರೇಟ್​ ನಿಯಮದ ಅಡಿಯಲ್ಲಿ ಮೊದಲ ತಪ್ಪಿಗೆ ನಾಯಕನನ್ನು ದೋಷಿಯನ್ನಾಗಿ ಮಾಡಲಾಗುತ್ತದೆ. ಮೊದಲ ಬಾರಿಯ ತಪ್ಪಿಗೆ 12 ಲಕ್ಷ ರೂ. ದಂಡ ಹಾಕಲಾಗುತ್ತದೆ. ಇದು ಪುನರಾವರ್ತನೆಯಾದಲ್ಲಿ 24 ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಅಲ್ಲದೆ ತಂಡದ ಇತರೆ ಆಟಗಾರರು ಪಂದ್ಯದ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡವಾಗಿ ನೀಡಬೇಕು.

ಆರ್​​ಸಿಬಿ ಇರುವ ಎರಡೂ ಅವಕಾಶಗಳಲ್ಲಿ ತಪ್ಪು ಮಾಡಿ ದಂಡನೆಗೆ ಒಳಗಾಗಿದೆ. ಮುಂದಿನ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದಲ್ಲಿ ನಾಯಕ ಫಾಫ್​ ಡು ಪ್ಲೆಸಿಸ್​ ಅಥವಾ ಹಂಗಾಮಿ ನಾಯಕನಾದಲ್ಲಿ ವಿರಾಟ್​ ಕೊಹ್ಲಿಗೆ ಒಂದು ಪಂದ್ಯದ ನಿಷೇಧ ಕಟ್ಟಿಟ್ಟಬುತ್ತಿಯಾಗಿದೆ.

ಇನ್ನು ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅರ್ಧ ಶತಕ, ಹರ್ಷಲ್ ಪಟೇಲ್​ ಅದ್ಭುತ ಬೌಲಿಂಗ್​ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ರನ್‌ಗಳಿಂದ ಸೋಲಿಸಿತ್ತು. ಪ್ಲೆಸಿಸ್ 62, ಮ್ಯಾಕ್ಸ್‌ವೆಲ್ ಅಬ್ಬರದ 77 ರನ್​ ಮಾಡಿದ್ದರು. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬಂದ ಹರ್ಷಲ್ ಪಟೇಲ್ 3 ವಿಕೆಟ್​ ಕಿತ್ತು ಪ್ರಭಾವಿಯಾದರು.

ಓದಿ: ಸನ್​​​ರೈಸರ್ಸ್​ಗೆ 7 ರನ್​​ಗಳ ಸೋಲುಣಿಸಿದ ಡೆಲ್ಲಿ ಕಾಪಿಟಲ್ಸ್​​​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.