ಅಹಮದಾಬಾದ್: ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ, ಚೊಚ್ಚಲ ಪ್ರಶಸ್ತಿ ಗೆಲ್ಲುವ ವನವಾಸ ಮುಂದುವರೆದಿದೆ. ನಿನ್ನೆಯ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಕಾಣುವ ಮೂಲಕ 15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರ ಬಿದ್ದಿದೆ.
ಪಂದ್ಯ ಮುಗಿದ ಬಳಿಕ ಆರ್ಸಿಬಿ ಪ್ಲೇಯರ್ಸ್ ಡ್ರೆಸ್ಸಿಂಗ್ ರೂಮ್ನಲ್ಲಿ ತೆರಳಿದ್ದಾಗ ನೀರವ ಮೌನ ಆವರಿಸಿತ್ತು. ಮಹತ್ವದ ಪಂದ್ಯದಲ್ಲಿ ಸೋಲು ಕಂಡಿದ್ದರಿಂದ ಬಹುತೇಕ ಎಲ್ಲ ಪ್ಲೇಯರ್ಸ್ ಮೌನವಾಗಿ ಕುಳಿತುಕೊಂಡಿದ್ದ ದೃಶ್ಯ ಕಂಡು ಬಂತು. ಈ ವೇಳೆ, ಮಾತನಾಡಿದ ತಂಡದ ಕ್ಯಾಪ್ಟನ್, ಇಲ್ಲಿಯವರೆಗೆ ಅದ್ಭುತ ಜರ್ನಿ. ಆದರೆ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ನೋವು ಕಾಡಲಿದೆ. ಫ್ರಾಂಚೈಸಿ ನಮಗೋಸ್ಕರ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಇಷ್ಟೊಂದು ದಿನ ಬಯೋ ಬಬಲ್ನಲ್ಲಿದ್ದುಕೊಂಡು ಕ್ರಿಕೆಟ್ ಆಡಿದ್ದೇವೆ. ಮುಂದಿನ ವರ್ಷ ಮತ್ತಷ್ಟು ಬಲಿಷ್ಠವಾಗಿ ಮರಳುವ ವಿಶ್ವಾಸವಿದೆ ಎಂದರು.
-
Goodbyes are hard! Especially after a tough loss when the team truly believed they’re good enough to go the distance. The squad got together and thanked everyone, including the best fans in the world. Here’s our season ender of Game Day!https://t.co/bLlMKRtWYc#PlayBold #RCB
— Royal Challengers Bangalore (@RCBTweets) May 28, 2022 " class="align-text-top noRightClick twitterSection" data="
">Goodbyes are hard! Especially after a tough loss when the team truly believed they’re good enough to go the distance. The squad got together and thanked everyone, including the best fans in the world. Here’s our season ender of Game Day!https://t.co/bLlMKRtWYc#PlayBold #RCB
— Royal Challengers Bangalore (@RCBTweets) May 28, 2022Goodbyes are hard! Especially after a tough loss when the team truly believed they’re good enough to go the distance. The squad got together and thanked everyone, including the best fans in the world. Here’s our season ender of Game Day!https://t.co/bLlMKRtWYc#PlayBold #RCB
— Royal Challengers Bangalore (@RCBTweets) May 28, 2022
ಇದನ್ನೂ ಓದಿ: 'ಕ್ಯಾಚ್ ವಿನ್ಸ್ ಮ್ಯಾಚ್' RCB ಸೋಲಿಗೆ ಕಾರಣ ಕಾರ್ತಿಕ್ ಕೈಚೆಲ್ಲಿದ ಆ ಒಂದು ಕ್ಯಾಚ್!?
ತಂಡದ ಕೋಚ್ ಸಂಜಯ್ ಬಂಗಾರ್ ಮಾತನಾಡಿ, ತಂಡದ ಪ್ರದರ್ಶನದಿಂದ ನಾವು ತೃಪ್ತರಾಗಿದ್ದೇವೆ. ಅನೇಕ ಹೊಸ ಪ್ರತಿಭೆಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಮುಂದಿನ ಆವೃತ್ತಿಯಲ್ಲಿ ಮತ್ತಷ್ಟು ಬಲಿಷ್ಠವಾಗಿ ನಾವು ಮರಳಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತಂಡಕ್ಕೆ ಹೊಸದಾಗಿ ಸೇರ್ಪಡೆಯಾದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಐಪಿಎಲ್ನಲ್ಲಿ ಐದಾರು ಫ್ರಾಂಚೈಸಿಗಳಲ್ಲಿ ಆಟವಾಡಿದ್ದೇನೆ.
ಆದರೆ, ಆರ್ಸಿಬಿ ತಂಡಕ್ಕೆ ಇರುವಷ್ಟು ಫ್ಯಾನ್ಸ್ ಫಾಲೋವರ್ಸ್ ನಾನು ಎಲ್ಲೂ ಕಂಡಿಲ್ಲ. ಈ ತಂಡದಲ್ಲಿ ಆಡಿರುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ. ಇದೇ ವೇಳೆ ತಂಡದ ಎಲ್ಲ ಪ್ಲೇಯರ್ಸ್, ಸಹಾಯಕ ಕೋಚ್ ಆರ್ಸಿಬಿ ತಂಡದ ವಿಜಯಗೀತೆ ಹಾಡಿ, ಡ್ರೆಸ್ಸಿಂಗ್ ರೂಮ್ನಿಂದ ಹೊರಗಡೆ ನಡೆದರು.
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ನಾಟಕೀಯ ರೀತಿಯಲ್ಲಿ ಪ್ಲೇ-ಆಫ್ ಪ್ರವೇಶ ಪಡೆದುಕೊಂಡಿದ್ದ ಬೆಂಗಳೂರು, ತಂಡ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ವಿರುದ್ಧ ಭರ್ಜರಿ ಜಯ ದಾಖಲು ಮಾಡಿ, ಕ್ವಾಲಿಫೈಯರ್ಗೆ ಲಗ್ಗೆ ಹಾಕಿತ್ತು. ಈ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲು ಕಂಡಿದ್ದ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಪ್ರಸಕ್ತ ಸಾಲಿನ ಐಪಿಎಲ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಆರ್ಸಿಬಿ ತಂಡಕ್ಕೆ ಅನೇಕ ಹೊಸ ಮುಖಗಳು ಸೇರಿಕೊಂಡಿದ್ದವು. ಅದರಲ್ಲಿ ಕೆಲವರು ಅದ್ಭುತ ಪ್ರದರ್ಶನ ನೀಡಿ, ಯಶಸ್ವಿಯಾಗಿದ್ದಾರೆ.