ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಭಾನುವಾರ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಹಾಗೂ 'ಮಿಸ್ಟರ್ 360' ಎಬಿ ಡಿವಿಲಿಯರ್ಸ್ ಅವರಿಗೆ ಗೌರವಾರ್ಥವಾಗಿ ಆರ್‌ಸಿಬಿ 'ಹಾಲ್ ಆಫ್ ಫೇಮ್' ನೀಡಿ ಗೌರವಿಸಲಾಯಿತು. ಇದೇ ವೇಳೆ ವಿಲಿಯರ್ಸ್ (17) ಹಾಗೂ ಗೇಲ್ (333) ಅವರ ಜೆರ್ಸಿಯನ್ನು ನಿವೃತ್ತಿಗೊಳಿಸಲಾಗಿದೆ. ಮೂರು ವರ್ಷಗಳ ಬಳಿಕ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಆರ್‌ಸಿಬಿ ಅಭಿಮಾನಿಗಳು ತವರಿನ ಅಂಗಳದಲ್ಲಿ ಇಂತಹ ಕ್ಷಣವನ್ನು ಅನುಭವಿಸಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಭಾನುವಾರವಾದ ಕಾರಣ ಇನ್ನಷ್ಟು ಅಭಿಮಾನಿಗಳ ದಂಡು ಕ್ರೀಡಾಂಗಣದತ್ತ ಹರಿದುಬಂದಿತ್ತು. ಮೈದಾನದಲ್ಲಿ ಹಾಲ್ ಆಫ್ ಫೇಮ್ ಗೌರವ ಪಡೆದ ಗೇಲ್, ಎಬಿಡಿ ಜೊತೆಗೆ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿಸ್, ಗ್ಲೇನ್ ಮ್ಯಾಕ್ಸ್ವೆಲ್ ಸೇರಿದಂತೆ ಇತರ ಆಟಗಾರರನ್ನು ಹುರಿದುಂಬಿಸಿದರು. ಈ ವೇಳೆ ಬ್ರಾಂಡ್ ಲಾಂಚ್ ಜೊತೆಗೆ ಐಪಿಎಲ್ ಆರಂಭಕ್ಕೂ ಮುನ್ನ ಪೂರ್ಣ ತಂಡವು ಅಭ್ಯಾಸದಲ್ಲಿ ನಿರತವಾಗಿದ್ದು, ಅಭಿಮಾನಿಗಳು ಕಣ್ತುಂಬಿಕೊಂಡರು.
-
#RCBUnbox from King Kohli’s POV! 👑
— Royal Challengers Bangalore (@RCBTweets) March 26, 2023 " class="align-text-top noRightClick twitterSection" data="
The love is mutual! ❤️#PlayBold #ನಮ್ಮRCB #IPL2023
pic.twitter.com/LquAHgomc4
">#RCBUnbox from King Kohli’s POV! 👑
— Royal Challengers Bangalore (@RCBTweets) March 26, 2023
The love is mutual! ❤️#PlayBold #ನಮ್ಮRCB #IPL2023
pic.twitter.com/LquAHgomc4#RCBUnbox from King Kohli’s POV! 👑
— Royal Challengers Bangalore (@RCBTweets) March 26, 2023
The love is mutual! ❤️#PlayBold #ನಮ್ಮRCB #IPL2023
pic.twitter.com/LquAHgomc4
ಗೌರವ ಸ್ವೀಕರಿಸಿ ಮಾತನಾಡಿದ ಕ್ರಿಸ್ ಗೇಲ್, ''ಮೊದಲನೆಯದಾಗಿ, ನನ್ನನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಿದ್ದಕ್ಕಾಗಿ ಆರ್ಸಿಬಿಗೆ ದೊಡ್ಡ ಧನ್ಯವಾದ. ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಪರ ಆಡಿದ ಹಲವು ಮೋಜಿನ ನೆನಪು ನನ್ನಲ್ಲಿವೆ. ನನಗೆ ಸ್ವಂತ ಮನೆಗೆ ಮರಳುತ್ತಿರುವಂತೆ ಭಾಸವಾಗುತ್ತಿದೆ. ತಂಡ, ಆಟಗಾರರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳೊಂದಿಗೆ ಮತ್ತೆ ಸೇರಲು ಸಾಧ್ಯವಾಗಿರುವುದು ಸಂತಸ ತಂದಿದೆ. ಆರ್‌ಸಿಬಿ, ಆರ್‌ಸಿಬಿ ಜಪ ಯಾವಾಗಲೂ ನನ್ನೊಂದಿಗಿರಲಿದೆ'' ಎಂದರು.
"ನನ್ನನ್ನು ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರಿಸಿರುವುದು ಬಹಳ ಹೃದಯಸ್ಪರ್ಶಿಯಾಗಿದೆ. ಆರ್ಸಿಬಿಗೆ ನನ್ನ ಹೃದಯದಲ್ಲಿ ಅತಿ ವಿಶೇಷವಾದ ಸ್ಥಾನವಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಭುತ ಕ್ಷಣವನ್ನು ಬಹಳ ಮಿಸ್ ಮಾಡಿಕೊಂಡಿದ್ದೆ. ಇದೀಗ ಆರ್‌ಸಿಬಿ ಅನ್‌ಬಾಕ್ಸ್ ಮೂಲಕ ಮತ್ತೊಮ್ಮೆ ಅಂತಹ ಅವಕಾಶ ಬಂದಿರುವುದು ರೋಮಾಂಚನಕಾರಿ'' ಎಂದು ಎಬಿ ಡಿವಿಲಿಯರ್ಸ್ ಹೇಳಿದರು.
-
Some 📸 from the Lap of honor! 👏
— Royal Challengers Bangalore (@RCBTweets) March 26, 2023 " class="align-text-top noRightClick twitterSection" data="
Our 🌟s gave a fitting tribute to our 12th Man Army! ❤️#PlayBold #ನಮ್ಮRCB #IPL2023 #RCBUnbox pic.twitter.com/k8a8Mc0iIy
">Some 📸 from the Lap of honor! 👏
— Royal Challengers Bangalore (@RCBTweets) March 26, 2023
Our 🌟s gave a fitting tribute to our 12th Man Army! ❤️#PlayBold #ನಮ್ಮRCB #IPL2023 #RCBUnbox pic.twitter.com/k8a8Mc0iIySome 📸 from the Lap of honor! 👏
— Royal Challengers Bangalore (@RCBTweets) March 26, 2023
Our 🌟s gave a fitting tribute to our 12th Man Army! ❤️#PlayBold #ನಮ್ಮRCB #IPL2023 #RCBUnbox pic.twitter.com/k8a8Mc0iIy
''ಮೂರು ವರ್ಷಗಳ ನಂತರ ಅಭಿಮಾನಿಗಳನ್ನು ಕ್ರೀಡಾಂಗಣಕ್ಕೆ ಮರಳಿ ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ. ಆರ್‌ಸಿಬಿ ಅನ್‌ಬಾಕ್ಸ್‌ನ ಭಾಗವಾಗಿ ಅದ್ಭುತ ಅಭಿಮಾನಿಗಳ ಮುಂದೆ ಅಭ್ಯಾಸ ಮಾಡುವುದು ತುಂಬಾ ಆಹ್ಲಾದಕರ ಅನುಭವವಾಗಿದೆ. ಇಂದಿನ ವಿಶೇಷ ಕ್ಷಣಕ್ಕೆ ಎಬಿ ಮತ್ತು ಕ್ರಿಸ್ ಅವರನ್ನು ಮರಳಿ ಸ್ವಾಗತಿಸಿರುವುದು ರೋಮಾಂಚನಕಾರಿಯಾಗಿದೆ. ಈ ಸಂದರ್ಭವು ಅದ್ಭುತವಾಗಿದೆ'' ಎಂದು ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದರು.
ಇದೇ ವೇಳೆ ಖ್ಯಾತ ಗಾಯಕ ಸೋನು ನಿಗಮ್ ಮತ್ತು ಜೇಸನ್ ಡೆರುಲೋ ಅವರ ಲೈವ್ ಸಂಗೀತ ಕಾರ್ಯಕ್ರಮವು ಕ್ರೀಡಾಂಗಣವನ್ನು ಮತ್ತಷ್ಟು ರಂಗೇರಿಸಿತು. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಎಬಿಡಿ ಮತ್ತು ಕ್ರಿಸ್ ಗೇಲ್ ಅವರಿಗೆ ಆರ್‌ಸಿಬಿ.. ಆರ್‌ಸಿಬಿ ಎಂಬ ಅಭಿಮಾನಿಗಳ ಅಬ್ಬರದ ಹರ್ಷೋದ್ಗಾರಗಳು ಸ್ವಾಗತಿಸಿದವು. ಬೆಂಗಳೂರು ತಂಡವು ಏಪ್ರಿಲ್ 2ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೂಲಕ ಪ್ರೀಮಿಯರ್ ಲೀಗ್ 2023ರ ಋತುವನ್ನು ಆರಂಭಿಸಲಿದೆ.
ಇದನ್ನೂ ಓದಿ: Wpl Final 2023.. ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದ ಮುಂಬೈ