ETV Bharat / sports

ಗುಜರಾತ್ ಟೈಟಾನ್ಸ್​ಗೆ ರಶೀದ್​ ಖಾನ್​ - ಶಮಿ ಟ್ರಂಪ್​ ಕಾರ್ಡ್​ : ವಿರೇಂದ್ರ ಸೆಹ್ವಾಗ್​

16ನೇ ಆವೃತ್ತಿಯ ಐಪಿಎಲ್​ನ ಮೊದಲ ಕ್ವಾಲಿಪೈಯರ್​ ಪಂದ್ಯ ನಡೆಯುತ್ತಿದ್ದು, ಎರಡೂ ತಂಡಗಳು ಸಮಾನ ಬಲ ಹೊಂದಿವೆ. ಹೀಗಾಗಿ ಕುತೂಹಲದ ಹೋರಾಟ ನಡೆಯಲಿದೆ ಎಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್ ಟೈಟಾನ್ಸ್​ಗೆ ರಶೀದ್​ ಖಾನ್
rashid-khan
author img

By

Published : May 23, 2023, 7:14 PM IST

ಚೆನ್ನೈ(ತಮಿಳುನಾಡು): ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​​ಕೆ) ನಡುವಿನ ಹಣಾಹಣಿಗೆ ವೇದಿಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ಪ್ರಮುಖ ಆಟಗಾರರ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2023 ರ ಆರಂಭಿಕ ಪಂದ್ಯದಲ್ಲಿ ಈ ಎರಡೂ ತಂಡಗಳು ಸೆಣಸಾಡಿದವು, ಇದರಲ್ಲಿ ಹಾರ್ದಿಕ್ ಪಾಂಡ್ಯ ತಂಡವು ಎಂಎಸ್ ಧೋನಿ ನೇತೃತ್ವದ ತಂಡದ ವಿರುದ್ಧ ತವರಿನಲ್ಲಿ 5 ವಿಕೆಟ್‌ಗಳಿಂದ ಜಯಗಳಿಸಿತು.

ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ನೇತೃತ್ವದ ಬಲಿಷ್ಠ ಬೌಲಿಂಗ್ ಘಟಕವನ್ನು ನೆಚ್ಚಿಕೊಂಡಿದೆ. ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ಇಬ್ಬರೂ ಐಪಿಎಲ್ 2023 ರಲ್ಲಿ ಇದುವರೆಗೆ 24 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮಂಗಳವಾರ ಪ್ರಬಲ ಆರಂಭವನ್ನು ಒದಗಿಸಲು ತಮ್ಮ ಯಶಸ್ವಿ ಆರಂಭಿಕ ಜೋಡಿಯಾದ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆಯನ್ನು ಎದುರು ನೋಡುತ್ತಿದೆ. ಗುಜರಾತ್ ಟೈಟಾನ್ಸ್ ಸ್ಪಿನ್ ಸ್ನೇಹಿ ಚೆಪಾಕ್ ಟ್ರ್ಯಾಕ್‌ನಲ್ಲಿ ತಮ್ಮ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ, ಅವರು ಅಫ್ಘಾನಿಸ್ತಾನ ಸ್ಪಿನ್ ಸಂವೇದನೆಯನ್ನು ಹಾಲಿ ಚಾಂಪಿಯನ್‌ಗಳಿಗೆ ಟ್ರಂಪ್ ಕಾರ್ಡ್ ಎಂದು ಪರಿಗಣಿಸಿದ್ದಾರೆ.

ರಶೀದ್ ಖಾನ್ ಗುಜರಾತ್‌ಗೆ ಟ್ರಂಪ್ ಕಾರ್ಡ್: ರಶೀದ್ ಖಾನ್ ಗುಜರಾತ್‌ಗೆ ಟ್ರಂಪ್ ಕಾರ್ಡ್ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಸೆಹ್ವಾಗ್ ಹೇಳಿದ್ದಾರೆ. ಗುಜರಾತ್​ಗೆ ಅಗತ್ಯ ಸಮಯಕ್ಕೆ ವಿಕೆಟ್‌ ಬೇಕಿದ್ದಾಗ ಇಬ್ಬರೂ ಉತ್ತಮವಾಗಿ ತಂದುಕೊಟ್ಟಿದ್ದಾರೆ. ಹಾರ್ದಿಕ್ ರಶೀದ್ ಅವರನ್ನು ಬಳಸಿಕೊಂಡ ರೀತಿ ಶ್ಲಾಘನೀಯ. ರಶೀದ್ ದೊಡ್ಡ ಜೊತೆಯಾಟ ನಡೆಯುತ್ತದೆ ಎಂದಾಗ ಅದನ್ನು ಮುರಿಯಲು ಲೀಗ್​ನಲ್ಲಿ ಜಿಟಿ ಸಹಕಾರಿಯಾಗಿದ್ದಾರೆ. ಈಗ ಅವರು ಈ ಋತುವಿನ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ.

ಸಿಎಸ್​ಕೆ ಮತ್ತು ಗುಜರಾತ್ ಎರಡೂ ತಂಡಗಳು ಬಲಿಷ್ಠವಾಗಿವೆ. ಈ ಸಿಸನ್​ನಲ್ಲಿ ಮೊದಲ ಪ್ಲೇಆಫ್ ಪಂದ್ಯದಲ್ಲಿ ಎರಡು ಸಧೃಡ ತಂಡಗಳು ಆಡುತ್ತಿರುವುದರಿಂದ ಫೈಟ್​ ಜೋರಾಗಿ ನಡೆಯುವ ಸಾಧ್ಯತೆ ಇದೆ. ಇದೊಂದು ರೀತಿಯಲ್ಲಿ ಡ್ರಾ ಆಗುವ ಸಾಧ್ಯತೆ ಇದೆ. ಎರಡೂ ತಂಡಗಳ ನಡುವೆ ಹೆಚ್ಚು ಸಾಮ್ಯತೆಗಳಿವೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಎರಡೂ ತಂಡಗಳು ಒಂದೇ ರೀತಿಯಲ್ಲಿ ಪಂದ್ಯದ ತಂತ್ರವನ್ನು ರೂಪಿಸುವಂತಿದೆ. ಈ ಎರಡು ನಾಯಕತ್ವ ಮತ್ತು ಆಟಗಾರರ ನಡುವಿನ ಸ್ಪರ್ಧೆ ಅತ್ಯಂತ ಆಸ್ತಿದಾಯಕವಾಗಿರುವುದರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ. ಅದರಂತೆ ಎರಡೂ ತಂಡದ ಆರಂಭಿಕ ಬ್ಯಾಟಗಳು ಲೀಗ್​ ಉದ್ದಕ್ಕೂ ಉತ್ತಮ ಜೊತೆಯಾಟವನ್ನು ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಗಿಲ್​, ಗಾಯಕ್ವಾಡ್​, ಕಾನ್ವೆಯ ಆಟ ಅತ್ಯಂತ ಮುಖ್ಯವಾಗಲಿದೆ. ಪಂದ್ಯಕ್ಕೆ ಮಹತ್ವದ ತಿರುವು ಕೊಡುವುದು ಟಾಸ್​ ಎಂಬುದು ಕಂಡಿತ. ಹೀಗಾಗಿ ಟಾಸ್​ ಗೆದ್ದವರಿಗೆ ಹೆಚ್ಚಿನ ಗೆಲ್ಲುವ ಅವಕಾಶ ಇರುತ್ತದೆ.

ಇದನ್ನೂ ಓದಿ: ಧೋನಿ ಜೊತೆಗಿನ ಅನುಭವ ಹಂಚಿಕೊಂಡ ಗುಜರಾತ್ ನಾಯಕ ಹಾರ್ದಿಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.