ಅಹಮದಾಬಾದ್: ಭಾನುವಾರ(ನಿನ್ನೆ) ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆಲ್ರೌಂಡರ್ ರಶೀದ್ ಖಾನ್ ರೋಮಾಂಚಕ ಕ್ಯಾಚ್ ಕ್ರಿಕೆಟ್‌ಲೋಕದ ಗಮನ ಸೆಳೆಯಿತು. ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಹಿರಿಯ ಕ್ರಿಕೆಟಿಗರು ಹುಬ್ಬೇರಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಯಾಚ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಯಲ್ ಚಾಲೆಂಜರ್ಸ್ ತಂಡದ ಸ್ಟಾರ್ ಬ್ಯಾಟರ್ ಹಾಗು ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ರಶೀದ್ ಖಾನ್ ಕ್ಯಾಚ್ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
-
Exceptional grab 😎
— IndianPremierLeague (@IPL) May 7, 2023 " class="align-text-top noRightClick twitterSection" data="
The @gujarat_titans needed a special effort to break the opening partnership & @rashidkhan_19 does exactly that 🙌#TATAIPL | #GTvLSG pic.twitter.com/ldRQ5OUae8
">Exceptional grab 😎
— IndianPremierLeague (@IPL) May 7, 2023
The @gujarat_titans needed a special effort to break the opening partnership & @rashidkhan_19 does exactly that 🙌#TATAIPL | #GTvLSG pic.twitter.com/ldRQ5OUae8Exceptional grab 😎
— IndianPremierLeague (@IPL) May 7, 2023
The @gujarat_titans needed a special effort to break the opening partnership & @rashidkhan_19 does exactly that 🙌#TATAIPL | #GTvLSG pic.twitter.com/ldRQ5OUae8
ಇಂಡಿಯನ್ ಪ್ರೀಮಿಯರ್ ಲೀಗ್ 2023ರ 51ನೇ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಪಂದ್ಯದಲ್ಲಿ ಗುಜರಾತ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 227 ರನ್ಗಳ ಬೃಹತ್ ಮೊತ್ತ ಕಲೆ ಹಾಕಿ ಲಕ್ನೋ ತಂಡಕ್ಕೆ 228 ರನ್ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ಲಕ್ನೋ ಉತ್ತಮ ಆರಂಭ ಪಡೆಯಿತು. ಆರಂಭಿಕ ಬ್ಯಾಟರ್‌ಗಳಾದ ಕೈಲ್ ಮೇಯರ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಬಿರುಸಿನ ಪ್ರದರ್ಶನ ತೋರಿದರು. ಪವರ್ ಪ್ಲೇ ಮುಕ್ತಾಯದ ವೇಳೆಗೆ ತಂಡದ ಸ್ಕೋರ್ 72 ಗಡಿ ತಲುಪಿತ್ತು. ಕೈಲ್ ಮೇಯರ್ಸ್ ಬ್ಯಾಟಿಂಗ್ ಬಲದಿಂದ ಲಕ್ನೋ ಗೆಲುವು ಸಾಧಿಸಲಿದೆ ಎಂದೇ ಅಂದಾಜಿಸಲಾಗಿತ್ತು.
ಆದರೆ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ವೇಗಿ ಮೋಹಿತ್ ಶರ್ಮಾ ಎರಡನೇ ಎಸೆತದ ಶಾಟ್ ಪಿಚ್ ಬಾಲ್ ಅನ್ನು ಮೆಯರ್ಸ್ ಸ್ಕ್ವೇರ್ ಲೆಗ್ ಕಡೆ ಸಕ್ಸರ್ ಸಿಡಿಸಲು ಯತ್ನಿಸಿದರು. ಫೈನ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಶೀದ್ ಖಾನ್ ವೇಗವಾಗಿ ಓಡಿ ಬಂದು ಕ್ಯಾಚ್ ಪಡೆದರು. ಈ ಮೂಲಕ ಲಕ್ನೋ ತಂಡದ ಗೆಲುವಿಗೂ ರಶೀದ್ ಬ್ರೇಕ್ ಹಾಕಿದರು.
ರಶೀದ್ ಕ್ಯಾಚ್ ಶ್ಲಾಘಿಸಿರುವ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ರಶೀದ್ ಖಾನ್ ಅವರನ್ನು ಟ್ಯಾಗ್ ಮಾಡಿ, "ನಾನು ನೋಡಿದ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದಾಗಿದೆ. ಬ್ರಿಲಿಯಂಟ್ @rashid.khan19," ಎಂದು ಫೋಟೋ ಹಂಚಿಕೊಂಡಿದ್ದಾರೆ.
11 ಪಂದ್ಯಗಳನ್ನು ಆಡಿರುವ ಗುಜರಾತ್ ಟೈಟಾನ್ಸ್ 8ರಲ್ಲಿ ಗೆಲುವು ಸಾಧಿಸಿ 3 ರಲ್ಲಿ ಸೋಲು ಕಂಡಿದೆ. 16 ಅಂಕಗಳಿಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲಕ್ನೋ 11 ಪಂದ್ಯಗಳನ್ನು ಆಡಿ 5ರಲ್ಲಿ ಗೆದ್ದು 5 ರಲ್ಲಿ ಸೋತಿದೆ. 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್'ರೈಸ್'! 4 ವಿಕೆಟ್ಗಳ ರೋಚಕ ಜಯ
ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಜೆರೆಮಿ ಲಾಲ್ರಿನ್ನುಂಗಾಗೆ ಸ್ನ್ಯಾಚ್ ವಿಭಾಗದಲ್ಲಿ ಬೆಳ್ಳಿ