ನವದೆಹಲಿ: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಅರಾಜಕತೆ ಮುಂದೆ ನಡೆಯಲಿರುವ 14 ನೇ ಆವೃತ್ತಿಯ ಉಳಿದ ಭಾಗವಾದ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಏನಾದರೂ ಪರಿಣಾಮ ಬೀರಬಹುದಾ ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡಲಿರುವ ಅಫ್ಘಾನಿಸ್ತಾನ ಲೆಗ್ ಸ್ಪಿನ್ನರ್ ರಶೀದ್ ಖಾನ್ ಹಾಗೂ ಆಲ್‌ರೌಂಡರ್ ಮೊಹಮ್ಮದ್ ನಬಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸನ್‌ರೈಸರ್ಸ್ ಹೈದರಾಬಾದ್ ಈ ಬಗ್ಗೆ ಖಚಿತಪಡಿಸಿದೆ.
-
Rashid Khan and Nabi available for UAE leg of IPL: SRH
— ANI Digital (@ani_digital) August 16, 2021 " class="align-text-top noRightClick twitterSection" data="
Read @ANI Story | https://t.co/uRJw7rF9xo#IPL2021 pic.twitter.com/ot4Fr7BBFD
">Rashid Khan and Nabi available for UAE leg of IPL: SRH
— ANI Digital (@ani_digital) August 16, 2021
Read @ANI Story | https://t.co/uRJw7rF9xo#IPL2021 pic.twitter.com/ot4Fr7BBFDRashid Khan and Nabi available for UAE leg of IPL: SRH
— ANI Digital (@ani_digital) August 16, 2021
Read @ANI Story | https://t.co/uRJw7rF9xo#IPL2021 pic.twitter.com/ot4Fr7BBFD
ಅಫ್ಘಾನಿಸ್ತಾನದ ಈ ಇಬ್ಬರು ಆಟಗಾರರು ಲೀಗ್‌ನ 14 ನೇ ಆವೃತ್ತಿಯ ಉಳಿದ ಭಾಗದಲ್ಲಿ ತಮ್ಮ ಬಲವನ್ನು ತೋರ್ಪಡಿಸಲಿದ್ದಾರೆ. ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನಾವು ಚರ್ಚೆ ಮಾಡುವುದಿಲ್ಲ. ಅದು ಅನಾವಶ್ಯಕ. ಆದರೆ, ಅಫ್ಘಾನಿಸ್ತಾನದ ಆ ಇಬ್ಬರು ಸ್ಟಾರ್ ಆಟಗಾರರು ಲಭ್ಯವಿರುತ್ತಾರೆ. ಆಗಸ್ಟ್ 31ರ ತಿಂಗಳ ಕೊನೆಯಲ್ಲಿ ಹೊರಡುತ್ತಿದ್ದೇವೆ ಎಂದು ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕೆ.ಷಣ್ಮುಗಂ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: 20 ವರ್ಷಗಳ ಬಳಿಕ ಅಫ್ಘಾನ್ನಲ್ಲಿ ಅಧಿಪತ್ಯ ಸ್ಥಾಪಿಸಿದ ತಾಲಿಬಾನಿಗಳು
ತಾಲಿಬಾನಿಗಳ ಆಕ್ರಮಣದಿಂದ ಅಫ್ಘಾನಿಸ್ತಾನದಲ್ಲಿ ಹೊಸ ಅಧ್ಯಾಯ ಪಡೆದುಕೊಂಡಿದ್ದು ಈ ವಿದ್ಯಮಾನದಿಂದ ಐಪಿಎಲ್ 2021ರ ಉಳಿದ ಪಂದ್ಯಗಳಿಗೆ ಅಲ್ಲಿಯ ಆಟಗಾರರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಹುಟ್ಟುಕೊಂಡಿತ್ತು. ಹಾಗಾಗಿ ಸನ್‌ರೈಸರ್ಸ್ ಹೈದರಾಬಾದ್ ಟ್ವೀಟ್ ಮಾಡಿ ಖಚಿತಪಡಿಸಿದೆ.
ಇನ್ನು ಕೋವಿಡ್ -19 ಸಾಂಕ್ರಾಮಿಕ ವೈರಸ್ ಹಿನ್ನೆಲೆಯಲ್ಲಿ 14ನೇ ಆವೃತ್ತಿಯ ಉಳಿದ ಪಂದ್ಯಗಳನ್ನು ಮುಂದೂಡಲಾಗಿತ್ತು. ಸೆಪ್ಟೆಂಬರ್ 19 ರಂದು ದುಬೈನ ಕ್ರಿಕೆಟ್ ಅಂಗಳದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕಾದಾಟಕ್ಕೆ ಇಳಿಯುವ ಮೂಲಕ ಮತ್ತೆ ಐಪಿಎಲ್ಗೆ ಸ್ವಾಗತ ಮಾಡಲಿವೆ.