ಜೈಪುರ (ರಾಜಸ್ಥಾನ): ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 112 ರನ್ಗಳ ಬೃಹತ್ ಗೆಲುವು ದಾಖಲಿಸಿ ರನ್ರೇಟ್ ಉತ್ತಮಗೊಳಿಸಿಕೊಂಡಿದೆ. ಬೆಂಗಳೂರು ನೀಡಿದ್ದ 172 ರನ್ ಗುರಿಯನ್ನು ಬೆನ್ನು ಹತ್ತಿದ್ದ ರಾಜಸ್ಥಾನ ತಂಡ 10.3 ಓವರ್ಗೆ 59 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಲಿನ ಪಂದ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಲೀಗ್ನಲ್ಲಿ ಈ ವರೆಗೆ ಆಡಿದ ನಾಲ್ಕು ಡೇ ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ. ಇಂದು ರಾಜಸ್ಥಾನದ ಮೇಲಿನ ಗೆಲುವು ಆರ್ಸಿಬಿಯ ರನ್ ರೇಟ್ಗೆ ಚೇತರಿಕೆ ಕಂಡಿದೆ. ಋಣಾತ್ಮಕವಾಗಿದ್ದ ಅಂಕಿ ಇಂದು +0.166 ಆಗಿದೆ.
-
For his incredible bowling spell that powered #RCB to a convincing win in Jaipur, @WayneParnell receives the Player of the Match award 👏🏻👏🏻
— IndianPremierLeague (@IPL) May 14, 2023 " class="align-text-top noRightClick twitterSection" data="
Scorecard ▶️ https://t.co/NMSa3HfybT #TATAIPL | #RRvRCB pic.twitter.com/fyGAUsLS0q
">For his incredible bowling spell that powered #RCB to a convincing win in Jaipur, @WayneParnell receives the Player of the Match award 👏🏻👏🏻
— IndianPremierLeague (@IPL) May 14, 2023
Scorecard ▶️ https://t.co/NMSa3HfybT #TATAIPL | #RRvRCB pic.twitter.com/fyGAUsLS0qFor his incredible bowling spell that powered #RCB to a convincing win in Jaipur, @WayneParnell receives the Player of the Match award 👏🏻👏🏻
— IndianPremierLeague (@IPL) May 14, 2023
Scorecard ▶️ https://t.co/NMSa3HfybT #TATAIPL | #RRvRCB pic.twitter.com/fyGAUsLS0q
ಪ್ಲೇ ಆಫ್ ಪ್ರವೇಶಕ್ಕೆ ಸ್ಪರ್ಧೆ ಜೋರಿರುವುದರಿಂದ ಆರ್ಸಿಬಿಗೆ ಗೆಲುವಿನ ಜೊತೆಗೆ ರನ್ರೇಟ್ ಹೆಚ್ಚಿಸಿಕೊಳ್ಳುವ ಅಗತ್ಯವೂ ಇತ್ತು. ಹೀಗಾಗಿ ಇಂದಿನ ಪಂದ್ಯ ಬೆಂಗಳೂರು ತಂಡಕ್ಕೆ ಲೀಗ್ನಲ್ಲಿ ಟರ್ನಿಂಗ್ ಪಾಯಿಂಟ್ ಆಗಿದೆ. ಲಕ್ನೋ ನಂತರ ಮತ್ತೆ ಆರ್ಸಿಬಿ ತಮ್ಮ ಬೌಲಿಂಗ್ನ್ನು ಬಲಿಷ್ಠವಾಗಿ ಪ್ರದರ್ಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ವಿರಾಟ್ -ಫಾಫ್ ಮತ್ತು ಮ್ಯಾಕ್ಸ್‌ವೆಲ್ - ಫಾಫ್ ಅವರ ಅರ್ಧಶತಕದ ಜೊತೆಯಾಟದಿಂದ ಹಾಗೂ ಮ್ಯಾಕ್ಸ್‌ವೆಲ್ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಅವರ ಅಮೂಲ್ಯ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತ್ತು.
-
A formidable performance from @RCBTweets as they claim a mammoth 112-run victory in Jaipur 🙌
— IndianPremierLeague (@IPL) May 14, 2023 " class="align-text-top noRightClick twitterSection" data="
They climb to number 5️⃣ on the points table 👏🏻👏🏻
Scorecard ▶️ https://t.co/NMSa3HfybT #TATAIPL | #RRvRCB pic.twitter.com/BxkMKBsL3W
">A formidable performance from @RCBTweets as they claim a mammoth 112-run victory in Jaipur 🙌
— IndianPremierLeague (@IPL) May 14, 2023
They climb to number 5️⃣ on the points table 👏🏻👏🏻
Scorecard ▶️ https://t.co/NMSa3HfybT #TATAIPL | #RRvRCB pic.twitter.com/BxkMKBsL3WA formidable performance from @RCBTweets as they claim a mammoth 112-run victory in Jaipur 🙌
— IndianPremierLeague (@IPL) May 14, 2023
They climb to number 5️⃣ on the points table 👏🏻👏🏻
Scorecard ▶️ https://t.co/NMSa3HfybT #TATAIPL | #RRvRCB pic.twitter.com/BxkMKBsL3W
ಈ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ ರಾಯಲ್ಸ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬೌಲರ್ಗಳು ಜೋರಾಗಿಯೇ ಕಾಡಿದರು. ಮೊದಲ ವೈಡ್ ರನ್ ನಂತರ ಈ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದರು.
ಅವರ ಬೆನ್ನಲ್ಲೇ ಜೋಸ್ ಬಟ್ಲರ್(0), ಸಂಜು ಸ್ಯಾಮ್ಸನ್ (4), ದೇವದತ್ ಪಡಿಕ್ಕಲ್ (4) ಮತ್ತು ಜೋ ರೂಟ್ (10), ಧ್ರುವ್ ಜುರೆಲ್ (1), ರವಿಚಂದ್ರನ್ ಅಶ್ವಿನ್ (0) ಔಟ್ ಆದರು. ಈ ವಿಕೆಟ್ಗಳ ಪತನದ ನಡುವೆ ಶಿಮ್ರೋನ್ ಹೆಟ್ಮೆಯರ್ ಮಾತ್ರ ಬ್ಯಾಟ್ ಬೀಸಿದರು. 19 ಬಾಲ್ನಲ್ಲಿ 4 ಸಿಕ್ಸ್ ಮತ್ತು 1 ಬೌಂಡರಿಯಿಂದ 35 ರನ್ ಮಾಡಿದ ಹೆಟ್ಮೆಯರ್ ಅನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಪೆವಿಲಿಯನ್ಗೆ ಕಳಿಸಿದರು. ಇವರ ನಂತರ ಆಡಮ್ ಝಂಪಾ (2) ಮತ್ತು ಕೆಎಂ ಆಸಿಫ್ ಶೂನ್ಯಕ್ಕೆ ಔಟ್ ಆಗಿ ರಾಜಸ್ಥಾನದ ಸರ್ವ ವಿಕೆಟ್ಗಳು ಉರಳಿದವು.
ಆರ್ಸಿಬಿ ಪರ ವೇಯ್ನ್ ಪಾರ್ನೆಲ್ 3 ಓವರ್ ಮಾಡಿ ಕೇವಲ 10 ರನ್ ಕೊಟ್ಟು 3 ವಿಕೆಟ್ ಪಡೆದರು. ಮೈಕಲ್ ಬ್ರೇಸ್‌ವೆಲ್ ಮತ್ತು ಕರಣ್ ಶರ್ಮಾ ತಲಾ 2 ವಿಕೆಟ್ ಪಡೆದರು. ಸಿರಾಜ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಒಂದೊಂದು ವಿಕೆಟ್ ಪಡೆದು ರಾಜಸ್ಥಾನವನ್ನು 59 ರನ್ಗೆ ಕಟ್ಟಿಹಾಕಿದರು.
ಇದನ್ನೂ ಓದಿ: RR vs RCB: ಮ್ಯಾಕ್ಸ್‌ವೆಲ್ - ಡು ಪ್ಲೆಸಿಸ್ ಅರ್ಧಶತಕ, ರಾಜಸ್ಥಾನಕ್ಕೆ 172 ರನ್ನ ಸಾಧಾರಣ ಗುರಿ