ಗುವಾಹಟಿ (ಅಸ್ಸಾಂ): ರಾಜಸ್ಥಾನ್ ರಾಯಲ್ಸ್ ತನ್ನ ಎರಡನೇ ತವರು ಮೈದಾನವಾದ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಾಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಡೆಲ್ಲಿ ಗೆಲುವಿನ ಖಾತೆ ತೆರೆಯಲು ಪ್ರಯತ್ನಿಸಿದರೆ, ರಾಜಸ್ಥಾನ್ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲು ಮರೆತು ಮತ್ತೆ ಗೆಲುವಿನ ಓಟ ಆರಂಭಿಸುವ ತವಕದಲ್ಲಿದೆ.
ರಾಜಸ್ಥಾನಕ್ಕೆ ಆರಂಭಿಕರೇ ಬಲ: ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆರಂಭಿಕ ಮೂವರು ಬ್ಯಾಟರ್ಗಳು ಬಲವಾಗಿದ್ದಾರೆ. ಅವರು ವಿಫಲರಾದರೆ ತಂಡ ಏಕಾಏಕಿ ಕುಸಿತ ಕಾಣುತ್ತದೆ. ಮೊದಲ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕದ ಬಲದಿಂದ ಬೃಹತ್ ಮೊತ್ತ ಕಲೆಹಾಕಿತ್ತು. ಬೌಲಿಂಗ್ನಲ್ಲಿ ಚಹಾಲ್ ಕಮಾಲ್ ಮಾಡಿ 4 ವಿಕೆಟ್ ಕಬಳಿಸಿದ್ದರು.
-
Our skipper getting ready to 𝐬𝐰𝐞𝐞𝐩 you off your feet in #IPL2023 🤩#YehHaiNayiDilli @davidwarner31 pic.twitter.com/yAMzGOn8sD
— Delhi Capitals (@DelhiCapitals) April 7, 2023 " class="align-text-top noRightClick twitterSection" data="
">Our skipper getting ready to 𝐬𝐰𝐞𝐞𝐩 you off your feet in #IPL2023 🤩#YehHaiNayiDilli @davidwarner31 pic.twitter.com/yAMzGOn8sD
— Delhi Capitals (@DelhiCapitals) April 7, 2023Our skipper getting ready to 𝐬𝐰𝐞𝐞𝐩 you off your feet in #IPL2023 🤩#YehHaiNayiDilli @davidwarner31 pic.twitter.com/yAMzGOn8sD
— Delhi Capitals (@DelhiCapitals) April 7, 2023
ಎರಡನೇ ಪಂದ್ಯದಲ್ಲಿ ಗೆಲುವಿನ ಸನಿಹದಲ್ಲಿ ರಾಜಸ್ಥಾನ ಎಡವಿತ್ತು. ಆರ್.ಅಶ್ವಿನ್ರನ್ನು ಆರಂಭಿಕರಾಗಿ ಇಳಿಸಿ ಪ್ರಯೋಗ ಮಾಡಿತಾದರೂ ಯಶ ಸಿಗಲಿಲ್ಲ. ಅಶ್ವಿನ್ ಸೊನ್ನೆ ಸುತ್ತಿದರೆ, ಬಟ್ಲರ್ ವಿಫಲರಾದರು. ಸಂಜು, ಶಿಮ್ರಾನ್ ಹೆಟ್ಮೆಯರ್ ಮತ್ತು ಧ್ರುವ್ ಜುರೆಲ್ ಗೆಲುವಿನ ಮೆಟ್ಟಿಲು ಮುಟ್ಟುವ ಮುನ್ನ ವಿಕೆಟ್ ಕೊಟ್ಟಿದ್ದು, ಸೋಲಿಗೆ ಕಾರಣವಾಯಿತು. ಗುವಾಹಟಿಯ ಪ್ರೇಕ್ಷಕರಿಗೆ ನಾಳೆ ಗೆಲುವಿನ ಸಿಹಿ ಕೊಡಲು ರಾಜಸ್ಥಾನ ಎದುರು ನೋಡುತ್ತಿದೆ.
ಕ್ಯಾಪಿಟಲ್ಸ್ಗೆ ಬ್ಯಾಟಿಂಗ್ ಕೊರತೆ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಏಕಾಂಗಿ ಹೋರಾಟಗಾರರಾಗಿದ್ದು ಅವರಿಗೆ ತಂಡದಲ್ಲಿ ಸರಿಯಾದ ಸಾಥ್ ಸಿಗುತ್ತಿಲ್ಲ. ಬೌಲಿಂಗ್ನಲ್ಲಿ ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಖೇಶ್ ಕುಮಾರ್ ಮತ್ತು ಕಲಿಲ್ ಅಹಮದ್ ವಿಕೆಟ್ ಕೀಳುತ್ತಿಲ್ಲ. ತಂಡ ತವರಿನಲ್ಲೂ ಸೋಲು ಕಂಡಿದ್ದು, ಮೂರನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳುತ್ತಾ ಕಾದು ನೋಡಬೇಕಿದೆ.
ಯಾರಿಗೆ ಕೊಕ್?: ರಾಜಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಬದಲಿಗೆ ಧ್ರುವ್ ಜುರೆಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಬಂದು ಉತ್ತಮ ಪ್ರದರ್ಶನ ನೀಡಿದ್ದಾರೆ. ಎರಡು ಪಂದ್ಯದಲ್ಲಿ ಪಡಿಕ್ಕಲ್ ವಿಫಲರಾಗಿದ್ದು, ಅವರನ್ನು ಇಂಪ್ಯಾಕ್ಟ್ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ. ಇತ್ತ ಡೆಲ್ಲಿಯಲ್ಲಿ ಸರ್ಫರಾಜ್ ಖಾನ್ ಬದಲಿಯಾಗಿ ಯಶ್ ಧುಲ್ ಆಡುವ ಸಾಧ್ಯತೆ ಇದೆ.
-
Guwahati, see you tomorrow! 💗
— Rajasthan Royals (@rajasthanroyals) April 7, 2023 " class="align-text-top noRightClick twitterSection" data="
Book #RRvDC tickets NOW: https://t.co/hLJnQBzLBb pic.twitter.com/ma7MOkDwbm
">Guwahati, see you tomorrow! 💗
— Rajasthan Royals (@rajasthanroyals) April 7, 2023
Book #RRvDC tickets NOW: https://t.co/hLJnQBzLBb pic.twitter.com/ma7MOkDwbmGuwahati, see you tomorrow! 💗
— Rajasthan Royals (@rajasthanroyals) April 7, 2023
Book #RRvDC tickets NOW: https://t.co/hLJnQBzLBb pic.twitter.com/ma7MOkDwbm
ಸಂಭಾವ್ಯ ತಂಡಗಳು..: ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ/ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್/ಧ್ರುವ್ ಜುರೆಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ರಿಲೀ ರೊಸೊವ್, ರೋವ್‌ಮನ್ ಪೊವೆಲ್, ಅಕ್ಸರ್ ಪಟೇಲ್, ಸರ್ಫರಾಜ್ ಖಾನ್ / ಯಶ್ ಧುಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಖೇಶ್ ಕುಮಾರ್.
ಪಂದ್ಯ: ನಾಳೆ 3:30ಕ್ಕೆ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಿಂದ ನೇರ ಪ್ರಸಾರ. ಜಿಯೋ ಸಿನಿಮಾ ಮತ್ತು ಸ್ಟಾರ್ ಸ್ಪೋರ್ಟ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಇದನ್ನೂ ಓದಿ: IPL 2023 LSG vs SRH: ಟಾಸ್ ಗೆದ್ದ ಹೈದರಾಬಾದ್ ಬ್ಯಾಟಿಂಗ್, ಮಾರ್ಕ್ರಾಮ್ ತಂಡ ಸೇರ್ಪಡೆ