ಗುವಾಹಟಿ (ಅಸ್ಸೋಂ): ನಾಯಕ ಡೇವಿಡ್ ವಾರ್ನರ್ ಅವರ ಶತಾಯಗತಾಯ ಪ್ರಯತ್ನದ ಬೆನ್ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲುವಿನ ಸಿಹಿ ಸಿಗಲಿಲ್ಲ. ವಾರ್ನರ್ ಒಂದು ಬದಿಯಲ್ಲಿ ರನ್ ಗಳಿಸುತ್ತಿದ್ದರೆ ಮತ್ತೊಂದೆಡೆ ಡೆಲ್ಲಿ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ಮಾಡಿದರು. ಬೋಲ್ಟ್, ಯಜುವೇಂದ್ರ ಚಹಾಲ್ ಮತ್ತು ರವಿಚಂದ್ರನ್ ಅಶ್ವಿನ್ ಡೆಲ್ಲಿ ಬ್ಯಾಟರ್ಗಳಿಗೆ ಕ್ರೀಸ್ನಲ್ಲಿ ನೆಲೆಯೂರಲು ಬಿಡಲೇ ಇಲ್ಲ.
20 ಓವರ್ಗೆ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಗಿ, 57 ರನ್ನ ಸೋಲನುಭವಿಸಿತು. ಡೆಲ್ಲಿ ಕ್ಯಾಪಿಟಲ್ಸ್ಗೆ ಇದು ಮೂರನೇ ಸೋಲಾಗಿದ್ದು ಅಂಕ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ತಲುಪಿದೆ. ವಾರ್ನರ್ ಏಕಾಂಗಿಯಾಗಿ ಹೋರಾಡಿ 65 ರನ್ ಗಳಿಸಿದರು. 6 ಜನ ಡೆಲ್ಲಿ ಬ್ಯಾಟರ್ಗಳು ಒಂದಂಕಿ ಆಟಕ್ಕೆ ವಿಕೆಟ್ ಕೊಟ್ಟು ತಂಡದ ಸೋಲಿಗೆ ಕಾರಣರಾದರು. ವಾರ್ನರ್ ಜೊತೆಗೆ ರಿಲೀ ರೋಸ್ಸೌ 14 ಮತ್ತು ಲಲಿತ್ ಯಾದವ್ 38 ರನ್ ಗಳಿಸಿದ್ದು ಬಿಟ್ಟರೆ ಮತ್ತಾರು ರನ್ ಕಲೆಹಾಕಲಿಲ್ಲ.
ಇಂಪ್ಯಾಕ್ಟ್ ಪ್ಲೇಯರ್ ಪ್ಲಾನ್ ಫ್ಲಾಫ್: ಟಾಸ್ ಗೆದ್ದು ಬೌಲಿಂಗ್ ತೆಗೆದು ಕೊಂಡು ತಂಡದಲ್ಲಿ ಒಬ್ಬ ಹೆಚ್ಚಿನ ಬೌಲರ್ ಆಡಿಸಿದ ವಾರ್ನರ್, ಬ್ಯಾಟಿಂಗ್ ವೇಳೆ ಖಲೀಲ್ ಅಹಮದ್ ಅವರ ಬದಲಿಯಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಪೃಥ್ವಿ ಶಾರನ್ನು ತಂದರು. ಆದರೆ ಡೆಲ್ಲಿ ಶೂನ್ಯ ರನ್ಗೆ 2 ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಮತ್ತು ಮನೀಷ್ ಪಾಂಡೆ ಡಕ್ ಔಟ್ ಆದರು. ರಾಜಸ್ಥಾನದ ಟ್ರೆಂಟ್ ಬೌಲ್ಟ್ ಮತ್ತು ಯಜುವೇಂದ್ರ ಚಹಾಲ್ ತಲಾ ಮೂರು ವಿಕೆಟ್ ಪಡೆದರೆ, ಆರ್ ಅಶ್ವಿನ್ 2 ಹಾಗೂ ಸಂದೀಪ್ ಶರ್ಮಾ 1 ವಿಕೆಟ್ ಪಡೆದರು.
-
First win of the season at home 🙌🏻@rajasthanroyals register a comprehensive 57-run victory in Guwahati 👏🏻👏🏻
— IndianPremierLeague (@IPL) April 8, 2023 " class="align-text-top noRightClick twitterSection" data="
Scorecard ▶️ https://t.co/FLjLINwRJC#TATAIPL | #RRvDC pic.twitter.com/BBxb8g94TF
">First win of the season at home 🙌🏻@rajasthanroyals register a comprehensive 57-run victory in Guwahati 👏🏻👏🏻
— IndianPremierLeague (@IPL) April 8, 2023
Scorecard ▶️ https://t.co/FLjLINwRJC#TATAIPL | #RRvDC pic.twitter.com/BBxb8g94TFFirst win of the season at home 🙌🏻@rajasthanroyals register a comprehensive 57-run victory in Guwahati 👏🏻👏🏻
— IndianPremierLeague (@IPL) April 8, 2023
Scorecard ▶️ https://t.co/FLjLINwRJC#TATAIPL | #RRvDC pic.twitter.com/BBxb8g94TF
ಮೊದಲ ಇನ್ನಿಂಗ್ಸ್: ರಾಜಸ್ಥಾನ ರಾಯಲ್ಸ್ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಅರ್ಧಶತಕದ ಆಟದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 200 ರನ್ ಅಗತ್ಯವಿದೆ. ಟಾಸ್ ನಿರ್ಣಯದಂತೆ ಅಲ್ಪ ಮೊತ್ತಕ್ಕೆ ರಾಯಲ್ಸ್ನ್ನು ಕಟ್ಟಿಹಾಕುವಲ್ಲಿ ಕ್ಯಾಪಿಟಲ್ಸ್ ಎಡವಿದೆ.
ತವರು ನೆಲದಲ್ಲಿ ಟಾಸ್ ಸೋತು ಬ್ಯಾಟಿಂಗ್ ಬಂದ ಸಂಜು ನಾಯಕತ್ವದ ರಾಜಸ್ಥಾನ ರಾಯಲ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿತು. ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ 98 ರನ್ಗಳ ಜೊತೆಯಾಟವನ್ನು ಮೊದಲ ವಿಕೆಟ್ಗೆ ನೀಡಿದರು. ಯಶಸ್ವಿ ಜೈಸ್ವಾಲ್ ದೇಶೀಯ ಪಂದ್ಯದ ಫಾರ್ಮ್ನ್ನು ಇಲ್ಲಿಯೂ ಅದ್ಭುತವಾಗಿ ಮುಂದುವರೆಸಿದ್ದು, 31 ಬಾಲ್ ಎದುರಿಸಿ 11 ಬೌಂಡರಿ ಮತ್ತು 1 ಸಿಕ್ಸ್ನಿಂದ 60 ರನ್ ಗಳಿಸಿದರು.
ಅತ್ತ ಇನ್ನೊಂದು ಬದಿಯಲ್ಲಿ ವಿದೇಶಿ ಆಟಗಾರ ಜೋಸ್ ಬಟ್ಲರ್ ಸಹ ಉತ್ತಮ ಫಾರ್ಮ್ನಲ್ಲಿದ್ದು, ಐಪಿಎಲ್ನ 17ನೇ ಅರ್ಧಶತಕವನ್ನು ಗಳಿಸಿದರು. 51 ಬಾಲ್ನಲ್ಲಿ 79 ರನ್ ಗಳಿಸಿದರು. ಬಟ್ಲರ್ ಇನ್ನಿಂಗ್ಸ್ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸ್ ಅಡಗಿತ್ತು. ಜೈಸ್ವಾಲ್ ವಿಕೆಟ್ ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಸಂಜು ಬೆನ್ನಲ್ಲೇ ಬಂದ ರಿಯಾನ್ ಪರಾಗ್ 7 ರನ್ನ ಸಂಕುಚಿತ ಇನ್ನಿಂಗ್ಸ್ ಕಟ್ಟಿದರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ ಬಟ್ಲರ್ ಜೊತೆ 39 ರನ್ ಇನ್ನಿಂಗ್ಸ್ ಕಟ್ಟಿದರು. ಅವರ 4 ಸಿಕ್ಸ್ 1 ಬೌಂಡರಿಯ ಅಬ್ಬರದ ಆಟ 180+ ಸ್ಕೋರ್ ಕಲೆಹಾಕಲು ತಂಡಕ್ಕೆ ನೆರವಾಯಿತು. ಡೆಲ್ಲಿಯ ಮುಖೇಶ್ ಕುಮಾರ್ 2, ಕುಲದೀಪ್ ಯಾದವ್ ಮತ್ತು ರೋವ್‌ಮನ್ ಪೊವೆಲ್ ತಲಾ ಒಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: IPL 2023 RR vs DC : ಟಾಸ್ ಗೆದ್ದ ವಾರ್ನರ್ ಬೌಲಿಂಗ್ ಆಯ್ಕೆ, ವೈಯುಕ್ತಿ ಕಾರಣದಿಂದ ಮಾರ್ಷ್ ಅಲಭ್ಯ