ETV Bharat / sports

ಸಿಎಸ್​​ಕೆ - ಆರ್​ಆರ್ ಪಂದ್ಯ:​ ನಿಧಾನ ಗತಿಯ ಬೌಲಿಂಗ್​​ಗಾಗಿ ರಾಜಸ್ಥಾನ ರಾಯಲ್ಸ್​​ಗೆ ಬಿತ್ತು ದಂಡ - ರಾಜಸ್ಥಾನ ರಾಯಲ್ಸ್​​ಗೆ ದಂಡ

ನಿಧಾನ ಗತಿಯ ಬೌಲಿಂಗ್​ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್​​ ತಂಡಕ್ಕೆ ದಂಡ ವಿಧಿಸಲಾಗಿದೆ.

rajasthan-royals-fined-for-maintaining-slow-over-rate-during-match-with-chennai-super-kings
ಎಸ್​​ಕೆ - ಆರ್​ಆರ್ ಪಂದ್ಯ :​ ನಿಧಾನ ಗತಿಯ ಬೌಲಿಂಗ್​ಗೆ ರಾಜಸ್ಥಾನ ರಾಯಲ್ಸ್​​ಗೆ ದಂಡ
author img

By

Published : Apr 13, 2023, 4:31 PM IST

ಚೆನ್ನೈ (ತಮಿಳುನಾಡು): ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​​ ನಡುವೆ ನಿನ್ನೆ ನಡೆದ ರೋಚಕ ಪಂದ್ಯದದಲ್ಲಿ ರಾಜಸ್ಥಾನ ರಾಯಲ್ಸ್​ ತಂಡ 3 ರನ್​ ಗಳ ಭರ್ಜರಿ ಜಯ ಸಾಧಿಸಿತ್ತು. ಧೋನಿ ಮತ್ತು ಜಡೇಜಾ ಅವರ ಅಬ್ಬರದ ಬ್ಯಾಟಿಂಗ್​​ ನಡುವೆಯೂ ರಾಜಸ್ಥಾನ ತಂಡ ಗೆದ್ದು ಬೀಗಿತ್ತು.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಹಣಾಹಣಿಯಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​​ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿತ್ತು. ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ ತಂಡ​ 20 ಓವರ್​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 175 ರನ್​​ ಗಳಿಸಿತ್ತು. ಬಳಿಕ ಸವಾಲಿನ ಮೊತ್ತವನ್ನು ಬೆನ್ನಟ್ಟಿದ್ದ ಚೆನ್ನೈ 20 ಓವರ್​​ಗಳಲ್ಲಿ 6 ವಿಕೆಟ್​​ ನಷ್ಟಕ್ಕೆ 172 ರನ್​​ ಗಳಿಸಿ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿರುವುದಕ್ಕೆ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್​ಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ.

"ಬುಧವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ 2023ರ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​​ ನಡುವೆ ನಡೆದ 17 ನೇ ಪಂದ್ಯ ಇದಾಗಿದ್ದು, ಈ ಪಂದ್ಯದಲ್ಲಿ ನಿಧಾನ ಗತಿಯ ಬೌಲಿಂಗ್​ ಪ್ರದರ್ಶನ ಮಾಡಿರುವುದಕ್ಕಾಗಿ ರಾಜಸ್ಥಾನ ರಾಯಲ್ಸ್​​ ತಂಡಕ್ಕೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

ನಿಧಾನಗತಿಯ ಬೌಲಿಂಗ್​ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆ ಅಡಿ ಈ ಋತುವಿನಲ್ಲಿ ದಾಖಲಾದ ಮೊದಲ ಪ್ರಕರಣವಾಗಿರುವುದರಿಂದ, ರಾಜಸ್ಥಾನ ರಾಯಲ್ಸ್​​ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

ಇನ್ನು ಚೆನ್ನೈ ಮತ್ತು ರಾಜಸ್ಥಾನ ನಡುವಿನ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ, 8 ವಿಕೆಟ್​ ನಷ್ಟಕ್ಕೆ 175 ರನ್​ ಗಳಿಸಿತು. ರಾಜಸ್ಥಾನ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್​ 10ರನ್​ ಗಳಿಸಿ ಹಿಂತಿರುಗಿದರು. ಬಳಿ ಜೊತೆಯಾದ ಜೋಸ್ ಬಟ್ಲರ್​ ಮತ್ತು ದೇವದತ್​​ ಪಡಿಕ್ಕಲ್​ 77 ರನ್​ಗಳ ಜೊತೆಯಾಟ ಆಡಿದರು. ಉತ್ತಮ ಬ್ಯಾಟಿಂಗ್​​ ಪ್ರದರ್ಶನ ನಡೆಸಿದ ಬಟ್ಲರ್​ 36 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಾಯದಿಂದ 52 ರನ್​​ ಗಳಿಸಿದರು.​

ಪಡಿಕಲ್​ 26 ಎಸೆತಗಳಲ್ಲಿ 5 ಬೌಂಡರಿ ಗಳಿಸಿ 38 ರನ್​ ಗಳಿಸಿ ತಂಡಕ್ಕೆ ಆಸರೆಯಾದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಆಗಮಿಸಿದ ರವಿಚಂದ್ರನ್​ ಅಶ್ವಿನ್​ 22 ಎಸೆತಗಳಲ್ಲಿ 1 ಬೌಂಡರಿ ,2 ಸಿಕ್ಸರ್​ ಸಹಿತ 30 ರನ್​ ಗಳಿಸಿದರೆ, ಸ್ಪೋಟಕ ಬ್ಯಾಟ್ಸ್ ಮನ್​ ಶಿಮ್ರಾನ್​ ಹೆಟ್ಮಯರ್​ 18 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್​​ ಸಹಿತ 30 ರನ್​​ ಗಳಿಸಿ ರಾಜಸ್ಥಾನ ತಂಡ ಉತ್ತಮ ಮೊತ್ತ ಪೇರಿಸುವಲ್ಲಿ ಸಹಾಯಕವಾದರು. ಚೆನ್ನೈ ಪರ ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ ಮತ್ತು ಆಕಾಶ್ ಸಿಂಗ್ ತಲಾ ಎರಡು ವಿಕೆಟ್ ಪಡೆದರೆ, ಮೊಯಿನ್ ಅಲಿ 1 ವಿಕೆಟ್​​ ಪಡೆದರು.

176 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆಗೆ, ಆರಂಭಿಕ ಆಘಾತ ಎದುರಾಯಿತು. ಕೇವಲ ಎಂಟು ರನ್‌ ರುತುರಾಜ್ ಗಾಯಕ್‌ವಾಡ್‌ ಸಂದೀಪ್​ ಶರ್ಮಾ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು. ಬಳಿಕ ಬಂದ ಅಜಿಂಕ್ಯಾ ರಹಾನೆ ಮತ್ತು ಡೆವೊನ್ ಕಾನ್ವೇ 68 ರನ್ ಗಳ ಜೊತೆಯಾಟ ಆಡಿದರು. ಅಜಿಂಕ್ಯಾ ರಹಾನೆ 31 ರನ್​​​​ ಗಳಿಸಿದರೆ, ಕಾನ್ವೆ 50 ರನ್ ಗಳಿಸಿ ಔಟಾದರು.

ಇನ್ನು, 15 ಓವರ್‌ಗಳಿಗೆ ಚೆನ್ನೈ 113 ರನ್​​ಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಈ ವೇಳೆ, ಬಂದ ಚೆನ್ನೈ ತಂಡದ ಆಪತ್ಭಾಂಧವ ಧೋನಿ ಮತ್ತು ಜಡೇಜಾ ಚೆನ್ನೈ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಪ್ರಯತ್ನಿಸಿದರು. ಧೋನಿ 32 ರನ್​ ಮತ್ತು ಜಡೇಜಾ 32 ರನ್​ ಗಳಿಸಿ 59 ರನ್​ಗಳ ಜೊತೆಯಾಟ ನೀಡಿ ಅಜೇಯರಾಗಿ ಉಳಿದರು. ಚೆನ್ನೈ 20 ಓವರ್‌ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 172 ರನ್​ ಗಳಿಸಲಷ್ಟೇ ಶಕ್ತವಾಯಿತು. ಸಂದೀಪ್​ ಶರ್ಮಾ ಅವರ ಸಮಯೋಚಿತ ಬೌಲಿಂಗ್​​ ಪ್ರದರ್ಶನದಿಂದ 3 ರನ್​ಗಳಿಂದ ಚೆನ್ನೈ ಸೋಲು ಅನುಭವಿಸಿತು. ರಾಜಸ್ಥಾನ ಪರ ಅಶ್ವಿನ್ , ಯುಜ್ವೇಂದ್ರ ಚಹಾಲ್ ತಲಾ 2 ವಿಕೆಟ್​ ಪಡೆದರು. ಆಡಮ್ ಝಂಪಾ ಮತ್ತು ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ : ಜಡೇಜಾ, ಧೋನಿಗೆ ಖೆಡ್ಡಾ ತೋಡಿದ್ದು ಸಂದೀಪ್​ ಶರ್ಮಾ ಅಲ್ಲ.. ಕೋಚ್​ ನೀಡಿದ ಸಲಹೆಗೆ ಒಲಿದ ಜಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.