ಮುಂಬೈ : ಯುಎಇಯಲ್ಲಿ ನಡೆಯಲಿರುವ 14ನೇ ಆವೃತ್ತಿಯ 2ನೇ ಹಂತದ ಐಪಿಎಲ್ಗಾಗಿ ರಾಜಸ್ಥಾನ ರಾಯಲ್ಸ್ ಆಸ್ಟ್ರೇಲಿಯಾದ ವೇಗಿ ಆ್ಯಂಡ್ರ್ಯೂ ಟೈ ಅವರ ಬದಲಿ ಆಟಗಾರನಾಗಿ ವಿಶ್ವದ ನಂಬರ್ 1 ಟಿ20 ಬೌಲರ್ ಆಗಿರುವ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೈಜ್ ಶಂಸಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಸೆಪ್ಟೆಂಬರ್ 19ರಿಂದ 14ನೇ ಆವೃತ್ತಿಯ ಐಪಿಎಲ್ ಯುಎಇನಲ್ಲಿ ಪುನಾರಂಭಗೊಳ್ಳಲಿದೆ. ಟಿ20 ಕ್ರಿಕೆಟ್ನಲ್ಲಿ ಅದ್ಧೂರಿ ಫಾರ್ಮ್ನಲ್ಲಿರುವ ದಕ್ಷಿಣ ಆಫ್ರಿಕಾದ ಪ್ರತಿಭಾನ್ವಿತ ಸ್ಪಿನ್ನರ್ರನ್ನು ತಂಡಕ್ಕೆ ಸೆಳೆಯುವಲ್ಲಿ ರಾಯಲ್ಸ್ ಯಶಸ್ವಿಯಾಗಿದೆ. ಯುಎಇ ಸ್ಪಿನ್ನರ್ಗೆ ಹೆಚ್ಚು ನೆರವು ನೀಡುವುದರಿಂದ 31 ವರ್ಷದ ಬೌಲರ್ರನ್ನು ತಂಡಕ್ಕೆ ಸೆಳೆದುಕೊಂಡಿದೆ.
-
🪄 Magic. Shamsi. Pink. 💗
— Rajasthan Royals (@rajasthanroyals) August 25, 2021 " class="align-text-top noRightClick twitterSection" data="
The world's No.1 T20I bowler will represent the Royals in UAE. 🇦🇪#IPL2021 | #HallaBol | #RoyalsFamily | @shamsi90 pic.twitter.com/TDGIaW9gNJ
">🪄 Magic. Shamsi. Pink. 💗
— Rajasthan Royals (@rajasthanroyals) August 25, 2021
The world's No.1 T20I bowler will represent the Royals in UAE. 🇦🇪#IPL2021 | #HallaBol | #RoyalsFamily | @shamsi90 pic.twitter.com/TDGIaW9gNJ🪄 Magic. Shamsi. Pink. 💗
— Rajasthan Royals (@rajasthanroyals) August 25, 2021
The world's No.1 T20I bowler will represent the Royals in UAE. 🇦🇪#IPL2021 | #HallaBol | #RoyalsFamily | @shamsi90 pic.twitter.com/TDGIaW9gNJ
2017ರಲ್ಲಿ ಶಂಸಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರು ಈವರೆಗೆ 39 ಟಿ20 ಪಂದ್ಯಗಳಿಂದ 45 ವಿಕೆಟ್ ಪಡೆದಿದ್ದಾರೆ. 2016ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಅವರು 4 ಪಂದ್ಯಗಳಿಂದ ಕೇವಲ 3 ವಿಕೆಟ್ ಪಡೆದಿದ್ದರು. ನಂತರ ಅವರನ್ನು ಯಾವ ಫ್ರಾಂಚೈಸಿಯೂ ಕೊಂಡುಕೊಂಡಿರಲಿಲ್ಲ.
ಆಸ್ಟ್ರೇಲಿಯಾದ ಟೈ 2021ರ ಐಪಿಎಲ್ ವೇಳೆ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಐಪಿಎಲ್ ತೊರೆದು ತವರಿಗೆ ಮರಳಿದ ಮೊದಲ ವಿದೇಶಿ ಕ್ರಿಕೆಟಿಗರಾಗಿದ್ದರು.
ಇದನ್ನು ಓದಿ: ಕೇನ್ ರಿಚರ್ಡ್ಸನ್ ಬದಲಿಗೆ ಇಂಗ್ಲೆಂಡ್ನ ವೇಗಿ ಗಾರ್ಟನ್ಗೆ ಗಾಳ ಹಾಕಿದ ಆರ್ಸಿಬಿ