ETV Bharat / sports

ರಾಜಸ್ಥಾನ್‌ ರಾಯಲ್ಸ್​​ಗೆ ಮತ್ತೊಂದು ಶಾಕ್: ಸ್ಟೋಕ್ಸ್​ ಟೂರ್ನಿಯಿಂದ​ ಔಟ್​ - ರಾಜಸ್ಥಾನ್ ರಾಯಲ್ಸ್

ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೆನ್​​ ಸ್ಟೋಕ್ಸ್​ ಪಂಜಾಬ್‌ ತಂಡದ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ​ಹೊಡೆದ ಬಾಲ್ ಅ​ನ್ನು ಅದ್ಭುತವಾಗಿ ಕ್ಯಾಚ್​ ಮಾಡಿದ್ದರು. ಈ ಸಂದರ್ಭ ಅವರ ಕೈಬೆರಳಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.

Ben Stokes
ಟೂರ್ನಿಯಿಂದ ಸ್ಟೋಕ್ಸ್​​ ಔಟ್​
author img

By

Published : Apr 14, 2021, 9:46 AM IST

ಹೈದರಾಬಾದ್​: ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್​ ಕಿಂಗ್ಸ್ ಪಂದ್ಯದ ವೇಳೆ ಫೀಲ್ಡಿಂಗ್​ ಮಾಡುವಾಗ ಕೈಬೆರಳಿಗೆ ಗಾಯವಾಗಿ ರಾಜಸ್ಥಾನ ತಂಡದ ಸ್ಟಾರ್​ ಆಲ್‌ರೌಂಡರ್​ ಬೆನ್​​ ಸ್ಟೋಕ್ಸ್​​ ಈ ಬಾರಿಯ ಐಪಿಎಲ್​ನಿಂದ ಹೊರಹೋಗಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬೆನ್​​ ಸ್ಟೋಕ್ಸ್​ ಪಂಜಾಬ್‌ ತಂಡದ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ​ಹೊಡೆದ ಬಾಲ್ ಅ​ನ್ನು ಅದ್ಭುತವಾಗಿ ಕ್ಯಾಚ್​ ಮಾಡಿದ್ದರು. ಈ ವೇಳೆ ಅವರ ಕೈ ಬೆರಳಿಗೆ ತೀವ್ರ ತರಹದ ಪೆಟ್ಟಾಗಿತ್ತು. ಈಗ ಆ ಕೈಬೆರಳು ಮುರಿದಿದ್ದು ಅವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ. ಹಾಗಾಗಿ ಟೂರ್ನಿಯಿಂದ ಇಂಗ್ಲೆಂಡ್‌ ಕ್ರಿಕೆಟಿಗ ಸಂಪೂರ್ಣವಾಗಿ ಹೊರನಡೆದಿದ್ದಾರೆ.

ಇದನ್ನೂ ಓದಿ: ಸೂರ್ಯಕುಮಾರ್​ ಸಿಕ್ಸರ್​ಗೆ ಶಾಕ್​ ಆದ ಹಾರ್ದಿಕ್​ ಪಾಂಡ್ಯ: ವಿಡಿಯೋ ನೋಡಿ

ಆನ್‌ ಫೀಲ್ಡ್‌ ಅಥವಾ ಆಫ್‌ ದಿ ಫೀಲ್ಡ್‌ ಆಗಲಿ, ಸ್ಟೋಕ್ಸ್‌ ನಮ್ಮ‌ ತಂಡದ ಬಹುದೊಡ್ಡ ಆಟಗಾರ ಹಾಗೂ ಅತ್ಯಂತ ಪ್ರಮುಖ ಆಸ್ತಿ. ಅವರು ಶೀಘ್ರ ಗುಣಮುಖರಾಗಲಿ ಎಂದು ರಾಜಸ್ಥಾನ್ ರಾಯಲ್ಸ್‌ ಟ್ವೀಟ್ ಮಾಡಿದೆ.

ಸದ್ಯ ಅವರು ತಂಡದಲ್ಲಿಯೇ ಉಳಿದುಕೊಂಡು, ಆಟಕ್ಕೆ ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ. ಈ ನಡುವೆ ಅವರ ಸ್ಥಾನಕ್ಕೆ ಬದಲಿ ಆಟಗಾರನ ಹುಡುಕಾಟದಲ್ಲಿದ್ದೇವೆ ಎಂದು ರಾಯಲ್ಸ್‌ ತಿಳಿಸಿದೆ.

ಮುಂದಿನ ಪಂದ್ಯಕ್ಕೆ ರೆಡಿ:

ರಾಜಸ್ಥಾನ್‌ ರಾಯಲ್ಸ್‌ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.