ಶಾರ್ಜಾ, ದುಬೈ: ಪಂಜಾಬ್ ಕಿಂಗ್ಸ್ ನೀಡಿದ್ದ 125 ರನ್ಗಳ ಸಾಧಾರಣ ಮಟ್ಟದ ಗುರಿಯನ್ನು ತಲುಪಲಾಗದ ಸನ್ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಸೋಲು ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಭಾರಿ ಮೊತ್ತದ ರನ್ ಪೇರಿಸಲು ವಿಫಲವಾಯಿತು. 30 ರನ್ಗಳ ಗಡಿಯನ್ನು ಯಾವ ಆಟಗಾರನೂ ಕೂಡ ದಾಟಲಿಲ್ಲ. ಕೆ.ಎಲ್.ರಾಹುಲ್ 21, ಐಡನ್ ಮರ್ಕ್ರಮ್ 27 ರನ್ಗಳನ್ನು ಗಳಿಸಿದ್ದೇ ಅತ್ಯಂತ ದೊಡ್ಡ ಮೊತ್ತವಾಗಿತ್ತು. ಇದರ ಜೊತೆಗೆ ಕ್ರಿಸ್ ಗೇಲ್ 14, ದೀಪಕ್ ಹೂಡಾ 13, ಹರ್ಪ್ರೀತ್ ಬ್ರಾರ್ 18, ನಾಥನ್ ಎಲ್ಲಿಸ್ 12, ಮಯಾಂಕ್ ಅಗರ್ವಾಲ್ 5, ನಿಕೋಲಸ್ ಪೂರನ್ 8 ರನ್ ಮಾತ್ರ ಗಳಿಸಿದ್ದರು.
-
That winning feeling! 👏 👏@PunjabKingsIPL hold their nerve and beat #SRH by 5 runs in Sharjah. 👍 👍 #VIVOIPL #SRHvPBKS
— IndianPremierLeague (@IPL) September 25, 2021 " class="align-text-top noRightClick twitterSection" data="
Scorecard 👉 https://t.co/B6ITrxUyyF pic.twitter.com/BR2dOwDEfZ
">That winning feeling! 👏 👏@PunjabKingsIPL hold their nerve and beat #SRH by 5 runs in Sharjah. 👍 👍 #VIVOIPL #SRHvPBKS
— IndianPremierLeague (@IPL) September 25, 2021
Scorecard 👉 https://t.co/B6ITrxUyyF pic.twitter.com/BR2dOwDEfZThat winning feeling! 👏 👏@PunjabKingsIPL hold their nerve and beat #SRH by 5 runs in Sharjah. 👍 👍 #VIVOIPL #SRHvPBKS
— IndianPremierLeague (@IPL) September 25, 2021
Scorecard 👉 https://t.co/B6ITrxUyyF pic.twitter.com/BR2dOwDEfZ
ಬ್ಯಾಟಿಂಗ್ ವೈಫಲ್ಯದ ನಡುವೆಯೇ 7 ವಿಕೆಟ್ ನಷ್ಟಕ್ಕೆ 125 ರನ್ಗಳನ್ನು ಗಳಿಸಲು ಪಂಜಾಬ್ ತಂಡಕ್ಕೆ ಸಾಧ್ಯವಾಯಿತು. ಪಂಜಾಬ್ ಕಿಂಗ್ಸ್ ಮೇಲೆ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಜಾಸನ್ ಹೋಲ್ಡರ್ 4 ಓವರ್ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದರು. ಇನ್ನುಳಿದಂತೆ ರಶೀದ್ ಖಾನ್, ಅಬ್ದುಲ್ ಸಮದ್, ಸಂದೀಪ್ ಶರ್ಮಾ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.
ಪಂಜಾಬ್ ನೀಡಿದ್ದ ಸ್ಕೋರ್ ಬೆನ್ನಟ್ಟಿದ ಸನ್ ರೈಸರ್ಸ್ ತಂಡದ ಬ್ಯಾಟರ್ಸ್ ಪ್ರದರ್ಶನವೂ ಕಳಪೆಯಿಂದ ಕೂಡಿತ್ತು. ಡೇವಿಡ್ ವಾರ್ನರ್ 2 ರನ್ಗೆ ಔಟಾದರೆ, ವೃದ್ಧಿಮಾನ್ ಸಹಾ 31, ಜಾಸನ್ ಹೋಲ್ಡರ್ 47 ರನ್ ಗಳಿಸಿ, ತಂಡಕ್ಕೆ ಆಸರೆಯಾಗಿದ್ದರೂ, ಗೆಲುವು ಅಸಾಧ್ಯವಾಯಿತು. ಕೇನ್ ವಿಲಿಯಮ್ಸನ್ 1, ಮನೀಷ್ ಪಾಂಡೆ 13, ಕೇದಾರ್ ಜಾದವ್ 12, ಅಬ್ದುಲ್ ಸಮದ್ 1. ರಶೀದ್ ಖಾನ್ 3, ಭುವನೇಶ್ವರ್ ಕುಮಾರ್ 3 ರನ್ ಗಳಿಸಿದರು. ಇಷ್ಟಾದರೂ ಕೇವಲ 120 ರನ್ ಗಳಿಸಲು ಮಾತ್ರವೇ ಸನ್ರೈಸರ್ಸ್ ಸಫಲರಾದರು.
ಹೈದರಾಬಾದ್ ಆಟಗಾರರ ಮೇಲೆ ರವಿ ಬಿಷ್ನೋಯಿ ಮಾರಕ ದಾಳಿ ನಡೆಸಿದ್ದು, ಮೂರು ವಿಕೆಟ್ ಪಡೆದರು. ಮೊಹಮದ್ ಶಮಿ 2, ಅರ್ಷದೀಪ್ ಸಿಂಗ್ 1 ವಿಕೆಟ್ ಪಡೆದು, ಸನ್ ರೈಸರ್ಸ್ ಅನ್ನು ಕಟ್ಟಿಹಾಕಲು ಸಫಲರಾದರು.
ಇದನ್ನೂ ಓದಿ: ಸಿಎಸ್ಕೆ ಪ್ಲೇ ಆಫ್ ತಲುಪಿದ ಮೇಲೆ ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ಬೇಕು : ಗಂಭೀರ್ ಸಲಹೆ