ಮೊಹಾಲಿ (ಪಂಜಾಬ್) : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಪಂಜಾಬ್ ಬೌಲಿಂಗ್ ಆಯ್ದುಕೊಂಡಿತು. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿರುವ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯುತ್ತಿದೆ.
ಇತ್ತಂಡಗಳ ನಾಯಕರಾದ ಶಿಖರ್ ಧವನ್ ಮತ್ತು ಫಾಫ್ ಡುಪ್ಲೆಸಿಸ್ ಗಾಯದಿಂದ ಬಳಲುತ್ತಿರುವುದರಿಂದ ಪಂಜಾಬ್ ತಂಡವನ್ನು ಸ್ಯಾಮ್ ಕರನ್ ಮತ್ತು ಬೆಂಗಳೂರು ತಂಡವನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಡುಪ್ಲೆಸಿಸ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡದಲ್ಲಿದ್ದಾರೆ.
-
🚨 Toss Update 🚨@PunjabKingsIPL win the toss and elect to field first against @RCBTweets.@CurranSM & @imVkohli are leading their respective sides today.
— IndianPremierLeague (@IPL) April 20, 2023 " class="align-text-top noRightClick twitterSection" data="
Follow the match ▶️ https://t.co/CQekZNsh7b#TATAIPL | #PBKSvRCB pic.twitter.com/ITFDTd7ObP
">🚨 Toss Update 🚨@PunjabKingsIPL win the toss and elect to field first against @RCBTweets.@CurranSM & @imVkohli are leading their respective sides today.
— IndianPremierLeague (@IPL) April 20, 2023
Follow the match ▶️ https://t.co/CQekZNsh7b#TATAIPL | #PBKSvRCB pic.twitter.com/ITFDTd7ObP🚨 Toss Update 🚨@PunjabKingsIPL win the toss and elect to field first against @RCBTweets.@CurranSM & @imVkohli are leading their respective sides today.
— IndianPremierLeague (@IPL) April 20, 2023
Follow the match ▶️ https://t.co/CQekZNsh7b#TATAIPL | #PBKSvRCB pic.twitter.com/ITFDTd7ObP
ಈ ಹಿಂದಿನ ಪಂದ್ಯದಲ್ಲಿ ಲಕ್ನೋ ವಿರುದ್ಧ ಪಂಜಾಬ್ 2 ವಿಕೆಟ್ಗಳ ಜಯ ಗಳಿಸಿತ್ತು. ಇಂದಿನ ಪಂದ್ಯದಲ್ಲಿ ಪಂಜಾಬ್ ಜಯ ಗಳಿಸಿದರೆ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ನಲ್ಲಿರುವ ಲಕ್ನೋ ಮತ್ತು ರಾಜಸ್ಥಾನ ತಂಡವನ್ನು ಸರಿಗಟ್ಟಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ 8 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮಾಕ್ಸ್ವೆಲ್ ಅವರ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಬೆಂಗಳೂರು ಸೋತು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು.
ಪಂಜಾಬ್ ತಂಡ ಸಿಕಂದರ್ ರಾಜಾ ಮತ್ತು ಕಗಿಸೋ ರಬಾಡ ಅವರನ್ನು ತಂಡದಿಂದ ಕೈಬಿಟ್ಟಿದ್ದು, ನಥಾನ್ ಮತ್ತು ಲಿವಿಂಗ್ ಸ್ಟೋನ್ ತಂಡ ಸೇರಿದ್ದಾರೆ. ಬೆಂಗಳೂರು ತಂಡದಲ್ಲಿ ಡುಪ್ಲೆಸಿಸ್ ಬದಲಾಗಿ ವೈಶಾಖ್ ವಿಜಯಕುಮಾರ್ ಆಡುತ್ತಿದ್ದಾರೆ.
ಸಂಭಾವ್ಯ ತಂಡಗಳು ಹೀಗಿವೆ..: ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ಸುಯಾಶ್ ಪ್ರಭು ದೇಸಾಯಿ
ಸಬ್ಸ್ಟಿಟ್ಯೂಟ್ಸ್ : ವಿಜಯಕುಮಾರ್ ವೈಶಾಕ್, ಡೇವಿಡ್ ವಿಲ್ಲೆ, ಆಕಾಶ್ ದೀಪ್, ಕರಣ್ ಶರ್ಮ, ಅನುಜ್ ರಾವತ್
ಪಂಜಾಬ್ ಕಿಂಗ್ಸ್: ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್ ಪ್ರೀತ್ ಸಿಂಗ್ ಭಾಟಿಯಾ,ಲಿಯಾಮ್ ಲಿವಿಂಗ್ ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಸ್ಯಾಮ್ ಕರ್ರಾನ್ (ನಾಯಕ), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಥಾನ್ ಎಲಿಸ್,ಅರ್ಶ್‌ದೀಪ್ ಸಿಂಗ್, ರಾಹುಲ್ ಚಾಹರ್.
ಸಬ್ಸ್ಟಿಟ್ಯೂಟ್ಸ್ : ಪ್ರಭ್ಸಿಮ್ರಾನ್ ಸಿಂಗ್, ಸಿಕಂದರ್ ರಾಜಾ, ಮೋಹಿತ್ ರಥೀ, ರಿಷಿ ಧವನ್, ಶಿವಂ ಸಿಂಗ್
ಇದನ್ನೂ ಓದಿ : ಐಪಿಎಲ್ 2023: ಎರಡನೇ ಅತಿ ಉದ್ದದ ಸಿಕ್ಸರ್ ಬಾರಿಸಿದ ಬಟ್ಲರ್, ಆರ್‌ಸಿಬಿ ಹೆಸರಲ್ಲಿದೆ ಫಸ್ಟ್ ಲಾಂಗೆಸ್ಟ್ ಸಿಕ್ಸ್