ಮೊಹಾಲಿ (ಪಂಜಾಬ್): ಐಪಿಎಲ್ 2023ರ 38ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ದಾಖಲೆ ಬರೆದು ಪಂದ್ಯವನ್ನು ಗೆದ್ದುಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟರ್ಗಳು ಪಂಜಾಬ್‌ನ ಬೌಲರ್‌ಗಳನ್ನು ದಂಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರ್ ಮಾಡಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಸ್ಕೋರ್ ಮತ್ತು ಈ ಋತುವಿನಲ್ಲಿ ಇದುವರೆಗಿನ ಗರಿಷ್ಠ ಸ್ಕೋರ್ ಇದಾಗಿದೆ.
ಆರ್‌ಸಿಬಿಯ 7 ವರ್ಷ ದಾಖಲೆ ಮುರಿದ ಲಕ್ನೋ: ಪಂಜಾಬ್ ಕಿಂಗ್ಸ್ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಲಕ್ನೋ ಬ್ಯಾಟ್ಸ್‌ಮನ್‌ಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 7 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಆರ್‌ಸಿಬಿ 2016 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 248 ರನ್ ಗಳಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಆಗಿತ್ತು. ಆದರೆ ಶುಕ್ರವಾರ, ಲಕ್ನೋ 257 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಮುರಿದಿದೆ.
-
A look at the highest totals in the IPL 👇👇@LucknowIPL finish with a score of 257/5.#TATAIPL pic.twitter.com/ET0PM9UQsv
— IndianPremierLeague (@IPL) April 28, 2023 " class="align-text-top noRightClick twitterSection" data="
">A look at the highest totals in the IPL 👇👇@LucknowIPL finish with a score of 257/5.#TATAIPL pic.twitter.com/ET0PM9UQsv
— IndianPremierLeague (@IPL) April 28, 2023A look at the highest totals in the IPL 👇👇@LucknowIPL finish with a score of 257/5.#TATAIPL pic.twitter.com/ET0PM9UQsv
— IndianPremierLeague (@IPL) April 28, 2023
ಆದರೆ ಲಕ್ನೋಗೆ ಆರ್‌ಸಿಬಿಯ ಇನ್ನೊಂದು ದಾಖಲೆ ಮುರಿಯಲಾಗಲಿಲ್ಲ. ಆ ದಾಖಲೆಯಿಂದ 7 ರನ್ ಕಡಿಮೆ ಗಳಿಸಿತು ಇದರಿಂದ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯ ಅಗ್ರಸ್ಥಾನಕ್ಕೇರಲು ಸಾಧ್ಯವಾಲಿಲ್ಲ. ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಸ್ಕೋರ್ ಮಾಡಿದ ದಾಖಲೆ ಆರ್‌ಸಿಬಿ ಹೆಸರಿನಲ್ಲಿದೆ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ 263 ರನ್ ಗಳಿಸಿತ್ತು.
ಅತಿ ಹೆಚ್ಚು ಬೌಂಡರಿಗಳು ದಾಖಲಾದ ಎರಡನೇ ಪಂದ್ಯ: ಒಟ್ಟು 41 ಸಿಕ್ಸ್ ಮತ್ತು ಫೋರ್ಗಳು ಈ ಪಂದ್ಯದಲ್ಲಿ ದಾಖಲಾದವು. 27 ಸಿಕ್ಸ್ ಮತ್ತು 14 ಫೋರ್ ಈ ಪಂದ್ಯದಲ್ಲಿ ಲಕ್ನೋ ಬ್ಯಾಟರ್ಗಳು ಬಾರಿಸಿದ್ದಾರೆ. 2013 ರಲ್ಲಿ ಬೆಂಗಳೂರು ತಂಡ ಗಳಿಸಿದ 263 ರನ್ನಲ್ಲಿ 42 ಬೌಡರಿಗಳು ಬಂದಿದ್ದವು. ಹೀಗಾಗಿ ಈ ಪಟ್ಟಿಯಲ್ಲಿ ಆರ್‌ಸಿಬಿ ಅಗ್ರ ಸ್ಥಾನದಲ್ಲಿದೆ. ಆ ಪಂದ್ಯದಲ್ಲಿ 21 ಸಿಕ್ಸ್ ಹಾಗೂ 21 ಫೋರ್ ಬಂದಿತ್ತು.
200+ ಗುರಿ ದಾಖಲೆ: 2023ರ ಐಪಿಎಲ್ ಆರಂಭವಾಗಿ ಅರ್ಧ ಆವೃತ್ತಿ ಕಳೆದಿದೆ. 40ನೇ ಪಂದ್ಯ ಇಂದು ನಡೆಯಲಿದೆ. ಆದರೆ ಈಗಾಲೇ ಐಪಿಎಲ್ನಲ್ಲಿ 20 200 ಪ್ಲೆಸ್ ಗುರಿಯ ಪಂದ್ಯಗಳು ನಡೆದಿವೆ. 2022 ರ ಪೂರ್ತಿ ಸೀಸನ್ನಲ್ಲಿ 18 ದ್ವಿಶತಕದ ಪಂದ್ಯಗಳು ಆಗಿದ್ದರೆ, 2018 ರಲ್ಲಿ 15 ಪಂದ್ಯಗಳಲ್ಲಿ ದಾಖಲಾಗಿತ್ತು.
ನಿನ್ನೆಯ ಪಂದ್ಯ: ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ರಾಹುಲ್ 12 ರನ್ಗೆ ವಿಕೆಟ್ ಕಳೆದುಕೊಂಡರು. ನಂತರ ಕೈಲ್ ಮೇಯರ್ಸ್ 24 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 54 ರನ್, ಮಾರ್ಕಸ್ ಸ್ಟೊಯಿನಿಸ್ ಅವರ 40 ಎಸೆತಗಳಲ್ಲಿ 72 ರನ್ ಮತ್ತು ಆಯುಷ್ ಬದೋನಿ ಅವರ 24 ಎಸೆತಗಳಲ್ಲಿ 43 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಕಟ್ಟಿದರು. ನಂತರ ಕೊನೆಯ ಓವರ್ಗಳಲ್ಲಿ ಬಂದ ಪೂರನ್ 19 ಎಸೆತಗಳಲ್ಲಿ 45 ರನ್ ಗಳಿಸಿದರು ಇದರಿಂದ ತಂಡದ ಮೊತ್ತ 257ಕ್ಕೆ ಏರಿತು. ಈ ಗುರಿಯ ಹತ್ತಿರಕ್ಕೆ ಪಂಜಾಬ್ ಬಂದರೂ ಲಕ್ನೋ 57 ರನ್ನ ಗೆಲುವು ದಾಖಲಿಸಿತು.
ಇದನ್ನೂ ಓದಿ: KKR vs GT: ಗುಜರಾತ್ ಗೆಲುವಿಗೆ 180 ರನ್ ಗುರಿ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್