ಮೊಹಾಲಿ (ಪಂಜಾಬ್): ಇಂಡಿಯನ್ ಪ್ರೀಮಿಯರ್ ಲೀಗ್‌ನ 38ನೇ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಮೊಹಾಲಿಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವೆ ಇದುವರೆಗೆ ನಡೆದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ಗೆದ್ದಿದ್ದರೆ, ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕೊನೆಯ ಓವರ್‌ನಲ್ಲಿ 2 ವಿಕೆಟ್‌ಗಳಿಂದ ಗೆದ್ದಿದೆ. ಗೆದ್ದ ತಂಡಕ್ಕೆ ಅಗ್ರ ಸ್ಥಾನಕ್ಕೆ ಏರುವ ಅವಕಾಶ ಇದೆ.
-
Ready for Mohali 👊 pic.twitter.com/HXBhFosAtU
— Lucknow Super Giants (@LucknowIPL) April 28, 2023 " class="align-text-top noRightClick twitterSection" data="
">Ready for Mohali 👊 pic.twitter.com/HXBhFosAtU
— Lucknow Super Giants (@LucknowIPL) April 28, 2023Ready for Mohali 👊 pic.twitter.com/HXBhFosAtU
— Lucknow Super Giants (@LucknowIPL) April 28, 2023
ಲಕ್ನೋ ಸೂಪರ್ ಜೈಂಟ್ಸ್ ತಂಡ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 4 ಗೆಲುವು ಮತ್ತು 3 ಸೋಲಿನೊಂದಿಗೆ 8 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ತಂಡವು 4 ಗೆಲುವು ಮತ್ತು 3 ಸೋಲಿನೊಂದಿಗೆ 8 ಅಂಕಗಳಿಂದ ರನ್ ರೇಟ್ ಪರಿಣಾಮ ಆರನೇ ಸ್ಥಾನದಲ್ಲಿದೆ. ಆದ್ದರಿಂದ, ಈ ಪಂದ್ಯವನ್ನು ಗೆಲ್ಲುವುದರೊಂದಿಗೆ, ತರಡೂ ತಂಡಗಳು ರನ್ ರೇಟ್ ಸುಧಾರಿಸಿಕೊಂಡು ಅಗ್ರಸ್ಥಾನಕ್ಕೆರುವ ಮತ್ತು ಟೂರ್ನಿಯಲ್ಲಿ ಪ್ಲೇ ಆಫ್ ಅವಕಾಶ ಉಳಿಸಿಕೊಳ್ಳುವ ಚಿಂತನೆಯಲ್ಲಿವೆ.
ಶುಕ್ರವಾರ ಮೊಹಾಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳ ಇಲೆವೆನ್ ನಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಲಕ್ನೋ ತಂಡ ಆರಂಭಿಕ ಬ್ಯಾಟರ್ ಆಗಿ ಕ್ವಿಂಟನ್ ಡಿ ಕಾಕ್ ಅವರನ್ನು ಕಣಕ್ಕಿಳಿಸಬಹುದು. ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಭುಜದ ಗಾಯಕ್ಕೆ ತುತ್ತಾದ ಶಿಖರ್ ಧವನ್ ಕಳೆದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅಭ್ಯಾಸದಲ್ಲಿ ಶಿಖರ್ ತೊಡಗಿಕೊಂಡಿರುವುದು ಕಂಡು ಬಂದಿರುವುದರಿಂದ ಮತ್ತೆ ನಾಯಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಲಕ್ನೋದ ಮಾರ್ಕ್ ವುಡ್ ಅಲಭ್ಯರಾಗಿರಲಿದ್ದಾರೆ.
-
.@LucknowIPL, kyun na hum ek khel khele? 😉
— Punjab Kings (@PunjabKingsIPL) April 28, 2023 " class="align-text-top noRightClick twitterSection" data="
Milte hai jaldi Sadda Akhade pe! 🤝#JazbaHaiPunjabi #SaddaPunjab #PunjabKings #TATAIPL #PBKSvLSG pic.twitter.com/ilyezVgnxx
">.@LucknowIPL, kyun na hum ek khel khele? 😉
— Punjab Kings (@PunjabKingsIPL) April 28, 2023
Milte hai jaldi Sadda Akhade pe! 🤝#JazbaHaiPunjabi #SaddaPunjab #PunjabKings #TATAIPL #PBKSvLSG pic.twitter.com/ilyezVgnxx.@LucknowIPL, kyun na hum ek khel khele? 😉
— Punjab Kings (@PunjabKingsIPL) April 28, 2023
Milte hai jaldi Sadda Akhade pe! 🤝#JazbaHaiPunjabi #SaddaPunjab #PunjabKings #TATAIPL #PBKSvLSG pic.twitter.com/ilyezVgnxx
ಈ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 13 ರನ್‌ಗಳಿಂದ ಸೋಲಿಸಿದ್ದು, ಇದೇ ಉತ್ಸಾಹದಲ್ಲಿ ಕಣಕ್ಕಿಳಿಯಲಿದೆ. ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಕೈಯಲ್ಲಿ 7 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಇದೇ ಆವೃತ್ತಿಯ ಉಭಯ ತಂಡಗಳ ಪ್ರಥಮ ಮುಖಾಮುಖಿಯಲ್ಲಿ ತವರು ನೆಲದಲ್ಲಿ ಲಕ್ನೋ ಎರಡು ವಿಕೆಟ್ಗಳ ಸೋಲು ಕಂಡಿತ್ತು. ಈಗ ಮೊಹಾಲಿಯಲ್ಲಿ ಪಂಜಾಬ್ ಸೋಲಿಸಿ ರಾಹುಲ್ ಪಡೆ ಸೇಡು ತೀರಿಸಿಕೊಳ್ಳ ಬೇಕಿದೆ.
ಸಂಭಾವ್ಯ ತಂಡ: ಪಂಜಾಬ್ ಕಿಂಗ್ಸ್: ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್/ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬಡೋನಿ, ನವೀನ್-ಉಲ್-ಹಕ್, ಶಿವಂ ಮಾವಿ, ರವಿ ಬಿಷ್ಣೋಯ್, ಅವೇಶ್ ಖಾನ್
ಇದನ್ನೂ ಓದಿ: ಐಪಿಎಲ್ : ಆರೆಂಜ್, ಪರ್ಪಲ್ ಕ್ಯಾಪ್ಗೆ ಆಟಗಾರರ ಪೈಪೋಟಿ, ಅಗ್ರಸ್ಥಾನಕ್ಕೆ ತಂಡಗಳ ಹೋರಾಟ