ಮೊಹಾಲಿ (ಪಂಜಾಬ್): ಕೆಕೆಆರ್ ಗೆಲುವಿಗೆ 46 ರನ್ ಬಾಕಿ ಇರುವಾಗ ಮಳೆ ಬಂದ ಹಿನ್ನೆಲೆ ಪಂದ್ಯ ಸ್ಥಗಿತಗೊಂಡು, 7 ರನ್ನಿಂದ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿದೆ. 16 ಓವರ್ ವೇಳೆಗೆ ಕೆಕೆಆರ್ 146ಕ್ಕೆ 7 ವಿಕೆಟ್ ನಷ್ಟ ಅನುಭವಿಸಿತ್ತು. ಆಲ್ರೌಂಡರ್ಗಳಾದ ಶಾರ್ದೂಲ್ ಠಾಕೂರ್ (8) ಮತ್ತು ಸುನಿಲ್ ನರೈನ್ (7) ಕ್ರೀಸ್ನಲ್ಲಿದ್ದರು.
ಕೊಲ್ಕತ್ತಾ ನೈಟ್ ರೈಡರ್ಸ್ಗೆ ಕೊನೆಯ 4 ಓವರ್ನಲ್ಲಿ 46 ರನ್ ಬೇಕಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಪಂಜಾಬ್ 16 ಓವರ್ ವೇಳೆಗೆ 4 ವಿಕೆಟ್ ನಷ್ಟದಿಂದ 153 ರನ್ ಗಳಿಸಿತ್ತು. ಕೆಕೆಆರ್ 7 ರನ್ನ ಹಿನ್ನೆಡೆಯಲ್ಲಿದ್ದ ಕಾರಣ ಡಿಎಲ್ಎಸ್ ನಿಮಯದ ಪ್ರಕಾರ ಸೋಲನುಭವಿಸಬೇಕಾಯಿತು.
-
1️⃣st match, 1️⃣st win! 🤩
— Punjab Kings (@PunjabKingsIPL) April 1, 2023 " class="align-text-top noRightClick twitterSection" data="
Sadde 🦁s put on a blockbuster show in Mohali! 🫶#JazbaHaiPunjabi #SaddaSquad #PBKSvKKR #TATAIPL pic.twitter.com/o0nuBho9aA
">1️⃣st match, 1️⃣st win! 🤩
— Punjab Kings (@PunjabKingsIPL) April 1, 2023
Sadde 🦁s put on a blockbuster show in Mohali! 🫶#JazbaHaiPunjabi #SaddaSquad #PBKSvKKR #TATAIPL pic.twitter.com/o0nuBho9aA1️⃣st match, 1️⃣st win! 🤩
— Punjab Kings (@PunjabKingsIPL) April 1, 2023
Sadde 🦁s put on a blockbuster show in Mohali! 🫶#JazbaHaiPunjabi #SaddaSquad #PBKSvKKR #TATAIPL pic.twitter.com/o0nuBho9aA
ಕೆಕೆಆರ್ನ್ನು ಅರ್ಶ್ದೀಪ್ ಸಿಂಗ್ ಕಾಡಿದರು, 2 ರನ್ ಗಳಿಸಿದ್ದ ಮನದೀಪ್ ಸಿಂಗ್ ವಿಕೆಟ್ ತೆಗೆದು ಕೊಲ್ಕತ್ತಾಗೆ ಆರಂಭಿಕ ಆಘಾತ ನೀಡಿದರು. ಅವರ ಬೆನ್ನಲ್ಲೇ ಅನುಕುಲ್ ರಾಯ್ (4) ವಿಕೆಟ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ವೆಂಕಟೇಶ್ ಅಯ್ಯರ್ 28 ಬಾಲ್ನಲ್ಲಿ 1 ಸಿಕ್ಸ್ ಮತ್ತು 3 ಬೌಂಡರಿಯಿಂದ 34 ರನ್ ಗಳಿಸಿದ್ದರು. ಅವರ ವಿಕೆಟ್ ಸಹ ಪಡೆದು ಸಿಂಗ್ ಮಿಂಚಿದರು.
ರಹಮಾನುಲ್ಲಾ ಗುರ್ಬಾಜ್ 22, ನಿತೀಶ್ ರಾಣ 24, ರಿಂಕು ಸಿಂಗ್ 4 ಮತ್ತು ಕೆಕೆಆರ್ ಹೊಡಿಬಡಿ ದಾಂಡಿಗ ರಸೆಲ್ 34 ರನ್ ಗಳಿಸಿ ಔಟ್ ಆದರು. ರಸೆಲ್ ಬ್ಯಾಟ್ ಗುಡುಗಲು ಆರಂಭಿಸಿತ್ತು ಮತ್ತು ರನ್ನ ತುಂತುರು ಆಗುತ್ತಿದ್ದಂತೆ ಸ್ಯಾಮ್ ಕರ್ರಾನ್ ವಿಕೆಟ್ ಪಡೆದುಕೊಂಡರು. ಇಲ್ಲವಾದಲ್ಲಿ ಮಳೆಗೂ ಮುನ್ನ ರಸೆಲ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು.
ಮೊದಲ ಇನ್ನಿಂಗ್ಸ್: ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್, ಭಾನುಕಾ ರಾಜಪಕ್ಸೆ ಮತ್ತು ನಾಯಕ ಶಿಖರ್ ಧವನ್ ಅವರ ಭರ್ಜರಿ ಜೊತೆಯಾಟದ ನೆರವಿನಿಂದ 192 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಕೆಕೆಆರ್ ಪರ ಪರಿಣಾಮಕಾರಿ ಬೌಲಿಂಗ್ ಮಾಡಿದ ಟಿಮ್ ಸೌಥಿ ಎರಡು ವಿಕೆಟ್ ಪಡೆದು ಬೃಹತ್ ರನ್ ಪೇರಿಸಲು ಕಡಿವಾಣ ಹಾಕಿದ್ದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶಿಖರ್ ಧವನ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೆಕೆಆರ್ ಬೌಲರ್ಗಳನ್ನು ಧವನ್ ತಂಡದ ಐವರು ಬ್ಯಾಟರ್ಗಳು ಸಮರ್ಥವಾಗಿ ಎದುರಿಸಿ 191 ರನ್ ಗಳಿಸಿದರು. ಆರಂಭಿಕರಾಗಿ ಬಂದ ಪ್ರಭಾಸಿಮ್ರಾನ್ ಸಿಂಗ್ ಮತ್ತು ಶಿಖರ್ 23 ರನ್ ಪೇರಿಸುತ್ತಿದ್ದಂತೆ ಟಿಮ್ ಸೌಥಿ ಇವರ ಜೊತೆಯಾಟ ಮುರಿದರು.
ಪ್ರಭಾಸಿಮ್ರಾನ್ ಸಿಂಗ್ ಮೊದಲ ಓವರ್ನಲ್ಲಿ 9 ಹಾಗೂ ಎರಡನೇ ಓವರ್ನಲ್ಲಿ 14 ರನ್ ಬಾರಿಸಿ ಅಬ್ಬರಿಸಿದರು. 12 ಬಾಲ್ನಲ್ಲಿ 23 ರನ್ ಗಳಿಸಿ ಔಟ್ ಆದರು. ನಂತರ ಭಾನುಕಾ ರಾಜಪಕ್ಸೆ, ಶಿಖರ್ ಜೊತೆ ಸೇರಿಕೊಂಡು ಉತ್ತಮ ಜೊತೆಯಾಟ ಆಡಿದರು. ಸಿಂಗ್ ಅವರ ಅಬ್ಬರವನ್ನು ಲಂಕಾ ಬ್ಯಾಟರ್ ರಾಜಪಕ್ಸೆ ಮುಂದುವರೆಸಿದರು. ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡದ ರಾಷ್ಟ್ರೀಯ ತಂಡ ಸೆಲೆಕ್ಟರ್ಸ್ಗೆ ತಮ್ಮ ಸಾಮರ್ಥ್ಯ ತೋರಿದರು.
32 ಬಾಲ್ ಎದುರಿಸಿದ ರಾಜಪಕ್ಸೆ 2 ಸಿಕ್ಸರ್ ಮತ್ತು 3 ಬೌಂಡರಿಯಿಂದ ಅರ್ಧಶತಕ (50) ಪೂರೈಸಿ ವಿಕೆಟ್ ಕೊಟ್ಟರು. ಶಿಖರ್ ಇನ್ನೊಂದು ಬದಿಯಲ್ಲಿ ನಾಯಕತ್ವದ ಜವಾಬ್ದಾರಿ ನಿಭಾಯಿಸಿದರು. 29 ಎಸೆತಗಳಲ್ಲಿ 6 ಬೌಂಡರಿಯಿಂದ 40 ರನ್ ಗಳಿಸಿದರು. ರಾಜಪಕ್ಸೆ ಮತ್ತು ಶಿಖರ್ ಧವನ್ 50 ರನ್ ಜೊತೆಯಾಟ ಮಾಡುತ್ತಿದ್ದಂತೆ, ಐಪಿಎಲ್ನಲ್ಲಿ 50+ ಜೊತೆಯಾಟದಲ್ಲಿ 94 ಬಾರಿ ಶಿಖರ್ ಭಾಗಿಯಾದ ದಾಖಲೆ ಬರೆದರು. ವಿರಾಟ್ ಕೊಹ್ಲಿ ಜೊತೆಗೆ ಜಂಟಿಯಾಗಿ ಪ್ರಥಮ ಸ್ಥಾನವನ್ನು ಶಿಖರ್ ಗಳಿಸಿರು.
ನಂತರ ಬಂದ ಜಿತೇಶ್ ಶರ್ಮಾ 21. ಸಿಕಂದರ್ ರಜಾ 16 ರನ್ ಗಳಿಸಿದರು. ಕೊನೆಯ ಎರಡು ಓವರ್ಗಳಲ್ಲಿ ಶಾರುಖ್ ಖಾನ್ (11) ಮತ್ತು ಸ್ಯಾಮ್ ಕರ್ರಾನ್ 23 ರನ್ ಸೇರಿಸಿ ತಂಡ ಮೊತ್ತವನ್ನು 191ಕ್ಕೆ ತೆಗೆದುಕೊಂಡು ಹೋದರು. ಕೆಕೆಆರ್ ಪರ ಸೌಥಿ 2, ಉಮೇಶ್ ಯಾದವ್, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಲಾ ಒಂದು ವಿಕೆಟ್ ಪಡೆದರು.
ತಂಡಗಳು ಇಂತಿವೆ.. ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕರ್ರಾನ್, ಸಿಕಂದರ್ ರಜಾ, ನಾಥನ್ ಎಲ್ಲಿಸ್, ಹರ್ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಶ್ದೀಪ್ ಸಿಂಗ್
ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮನದೀಪ್ ಸಿಂಗ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಟಿಮ್ ಸೌಥಿ, ಅನುಕುಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಇದನ್ನೂ ಓದಿ: 15 ವರ್ಷಗಳ ಹಿಂದೆ ಆಟವಾಡಿದಂತೆ ಈಗ ಧೋನಿಗೆ ಆಡಲು ಸಾಧ್ಯವಿಲ್ಲ: ಸಿಎಸ್‌ಕೆ ಕೋಚ್