ಧರ್ಮಶಾಲಾ (ಹಿಮಾಚಲ ಪ್ರದೇಶ): ಡೆಲ್ಲಿ ಕ್ಯಾಪಿಟಲ್ಸ್ ತಂಡ 16ನೇ ಆವೃತ್ತಿಯ ಲೀಗ್ನಿಂದ ಕಳಪೆ ಬ್ಯಾಟಿಂಗ್ ಪ್ರದರ್ಶನದ ಕಾರಣ ಹೊರಬಿದ್ದಿದೆ. ಆದರೆ ಇಡೀ ಲೀಗ್ನಲ್ಲಿ ತೋರದ ಬ್ಯಾಟಿಂಗ್ ಪ್ರದರ್ಶನವನ್ನು ಇಂದಿನ ಔಪಚಾರಿಕ ಪಂದ್ಯದಲ್ಲಿ ಡೆಲ್ಲಿ ತೋರಿದೆ. ಆರಂಭಿಕ ಪೃಥ್ವಿ ಶಾ ಅವರ ಅರ್ಧಶತಕ ಮತ್ತು ದಕ್ಷಿಣ ಆಫ್ರಿಕಾ ಆಟಗಾರ ರಿಲೀ ರೊಸೊವ್ ಭರ್ಜರಿ 82 ರನ್ನ ಸಹಾಯದಿಂದ ಡೆಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 213 ರನ್ಗಳಿಸಿದೆ.
-
Innings Break!
— IndianPremierLeague (@IPL) May 17, 2023 " class="align-text-top noRightClick twitterSection" data="
A power-packed batting display from @DelhiCapitals 💪 💪
8⃣2⃣* for @Rileerr
5⃣4⃣ for @PrithviShaw
4⃣6⃣ for captain @davidwarner31
2⃣6⃣* for @PhilSalt1
Will @PunjabKingsIPL chase down the target? 🤔
Scorecard ▶️ https://t.co/lZunU0ICEw#TATAIPL | #PBKSvDC pic.twitter.com/XAFvGNjiUV
">Innings Break!
— IndianPremierLeague (@IPL) May 17, 2023
A power-packed batting display from @DelhiCapitals 💪 💪
8⃣2⃣* for @Rileerr
5⃣4⃣ for @PrithviShaw
4⃣6⃣ for captain @davidwarner31
2⃣6⃣* for @PhilSalt1
Will @PunjabKingsIPL chase down the target? 🤔
Scorecard ▶️ https://t.co/lZunU0ICEw#TATAIPL | #PBKSvDC pic.twitter.com/XAFvGNjiUVInnings Break!
— IndianPremierLeague (@IPL) May 17, 2023
A power-packed batting display from @DelhiCapitals 💪 💪
8⃣2⃣* for @Rileerr
5⃣4⃣ for @PrithviShaw
4⃣6⃣ for captain @davidwarner31
2⃣6⃣* for @PhilSalt1
Will @PunjabKingsIPL chase down the target? 🤔
Scorecard ▶️ https://t.co/lZunU0ICEw#TATAIPL | #PBKSvDC pic.twitter.com/XAFvGNjiUV
ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡ ಪಂಜಾಬ್ ಕಿಂಗ್ಸ್ ಇಂದು ಪಂದ್ಯದಲ್ಲಿ ಗೆಲುವು ದಾಖಲಿಸಿ ಪ್ಲೇ ಆಫ್ ಹಾದಿ ಸುಗಮ ಮಾಡಿಕೊಳ್ಳಲು 214 ರನ್ ಗಳಿಸುವ ಅಗತ್ಯವಿದೆ. ಡೆಲ್ಲಿ ಈ ಆವೃತ್ತಿಯಲ್ಲಿ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡರೂ ಬೌಲಿಂಗ್ನಲ್ಲಿ ಸಾಧಾರಣ ಪ್ರದರ್ಶನ ನೀಡಿತ್ತು. ಇಂದು ಅದೇ ಬೌಲಿಂಗ್ ಪ್ರದರ್ಶನ ನೀಡಿದಲ್ಲಿ ಪಂಜಾಬ್ಗೆ ಗೆಲುವು ದೂರ ಆಗಲಿದೆ.
ಲೀಗ್ನ ಆರಂಭದಿಂದ 6 ಪಂದ್ಯದಲ್ಲಿ ವೈಫಲ್ಯ ಕಂಡಿದ್ದ ಪೃಥ್ವಿ ಶಾ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ನಂತರ ಇತ್ತೀಚಿನ ಪಂದ್ಯಗಳಲ್ಲಿ ಮತ್ತೆ ಅವರಿಗೆ ಅವಕಾಶ ನೀಡಿದರೂ, ಅವರ ಬ್ಯಾಟ್ನಿಂದ ರನ್ ಬಂದಿರಲಿಲ್ಲ. ಕೊನೆಗೂ ಇಂದು ಡೆಲ್ಲಿ ಆರಂಭಿಕ ಜೋಡಿ 50 + ರನ್ ಜೊತೆಯಾಟ ಮಾಡಿದರು. ಡೇವಿಡ್ ವಾರ್ನರ್ ಸಿಕ್ಸ್ ಹೊಡೆಯದೇ ಇನ್ನಿಂಗ್ಸ್ ಕಟ್ಟುತ್ತಾರೆ ಎಂಬ ಆರೋಪದಿಂದ ಇಂದು ವಾರ್ನರ್ ಮುಕ್ತರಾಗಿದ್ದಾರೆ.
ಇಂದಿನ ಇನ್ನಿಂಗ್ಸ್ನಲ್ಲಿ 31 ಬಾಲ್ನಲ್ಲಿ 46 ರನ್ ಗಳಿಸಿದ ವಾರ್ನರ್ 2 ಸಿಕ್ಸ್ ಮತ್ತು 5 ಬೌಂಡರಿ ಗಳಿಸಿದ್ದರು. ಶಾ ಇಂದು ಭರ್ಜರಿ ಇನ್ನಿಂಗ್ಸ್ ಆಡಿದ್ದು ಅರ್ಧಶತಕ (54) ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 1 ಸಿಕ್ಸ್ ಮತ್ತು 7 ಬೌಂಡರಿ ಇತ್ತು. ಈ ಎರಡು ವಿಕೆಟ್ ನಂತರ ಬಂದ ರಿಲೀ ರೊಸೊವ್ ಮತ್ತು ಫಿಲಿಪ್ ಸಾಲ್ಟ್ ಉತ್ತಮ ಜೊತೆಯಾಟ ಮಾಡಿರು.
ರಿಲೀ ರೊಸೊವ್ 37 ಬಾಲ್ನಲ್ಲಿ 6 ಸಿಕ್ಸ್ ಮತ್ತು 6 ಬೌಂಡರಿಯಿಂದ 82 ರನ್ ಕಲೆಹಾಕಿದರು. ಫಿಲಿಪ್ ಸಾಲ್ಟ್ ಕೊನೆಯಲ್ಲಿ ಬಂದು 26 ರನ್ನ ಕೊಡುಗೆ ನೀಡಿದರು. ಪಂಜಾಬ್ ಪರ ಸ್ಯಾಮ್ ಕರನ್ 2 ವಿಕೆಟ್ ಗಳಿಸಿದ್ದು ಬಿಟ್ಟರೆ ಮತ್ತಾರು ಯಶಸ್ವಿಯಾಗಲಿಲ್ಲ.
ತಂಡಗಳು ಇಂತಿವೆ..: ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ರಿಲೀ ರೊಸೊವ್, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ಯಶ್ ಧುಲ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್
ಪಂಜಾಬ್ ಕಿಂಗ್ಸ್: ಶಿಖರ್ ಧವನ್ (ನಾಯಕ), ಅಥರ್ವ ಟೈಡೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕುರ್ರಾನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಅರ್ಷದೀಪ್ ಸಿಂಗ್
ಇದನ್ನೂ ಓದಿ: ಸಿಯುವಿನಿಂದ ಬಿಡುಗಡೆ ಆದ ತಂದೆಗಾಗಿ ಆಡಿದೆ: ಮೊಹ್ಸಿನ್ ಖಾನ್