ಧರ್ಮಶಾಲಾ (ಹಿಮಾಚಲ ಪ್ರದೇಶ): ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ 64ನೇ ಪಂದ್ಯವನ್ನು ಧರ್ಮಶಾಲಾ ಕ್ರೀಡಾಂಗಣದಲ್ಲಿ ಆಡಲಾಗುತ್ತಿದೆ. ಇಲ್ಲಿ ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ನ್ನು ಎದುರಿಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಲೀಗ್ನಿಂದ ಹೊರಬಿದ್ದಿದೆ. ಆದರೆ ಪಂಜಾಬ್ಗೆ ಬಾಕಿ ಇರುವ ಎರಡು ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಅದಕ್ಕೂ ಇತರ ತಂಡಗಳ ರನ್ ರೇಟ್ ಗಣನೆಗೆ ಬರುತ್ತದೆ.
ಈ ಬಾರಿಯ ಐಪಿಎಲ್ ಪ್ಲೇ ಆಫ್ ಪ್ರವೇಶಕ್ಕೆ ಹೆಚ್ಚು ಸ್ಪರ್ಧೆ ಇರುವುದರಿಂದ ಪಂಜಾಬ್ ಇದು ಡು ಆರ್ ಡೈ ಪಂದ್ಯವಾಗಿದೆ. ಇಂದು ಡೆಲ್ಲಿ ವಿರುದ್ಧ ಪಂಜಾಬ್ ಸೋತಲ್ಲಿ ಲೀಗ್ನಿಂದ ಹೊರಬಿದ್ದ ಮೂರನೇ ತಂಡವಾಗಿರಲಿದೆ. ಸಧ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ 12 ಪಂದ್ಯದಲ್ಲಿ 8 ನ್ನು ಸೋತು ಕೇವಲ ನಾಲ್ಕು ಅಂಕದಿಂದ ಕ್ರಮವಾಗಿ 10 ಮತ್ತು 9 ನೇ ಸ್ಥಾನದಲ್ಲಿದ್ದು, ಲೀಗ್ನಿಂದ ಹೊರಬಿದ್ದಿವೆ. ಪಂಜಾಬ್ ಕಿಂಗ್ಸ್ 12 ಪಂದ್ಯದಲ್ಲಿ 6 ಗೆದ್ದು 12 ಅಂಕದಿಂದ 8 ನೇ ಸ್ಥಾನದಲ್ಲಿದೆ.
-
It’s Round 2 of the Northern Derby 💥
— Delhi Capitals (@DelhiCapitals) May 17, 2023 " class="align-text-top noRightClick twitterSection" data="
Get ready for #PBKSvDC with our Match Preview 👉 https://t.co/yrjzcrFQiy#YehHaiNayiDilli #IPL2023 pic.twitter.com/VFL1uMz72K
">It’s Round 2 of the Northern Derby 💥
— Delhi Capitals (@DelhiCapitals) May 17, 2023
Get ready for #PBKSvDC with our Match Preview 👉 https://t.co/yrjzcrFQiy#YehHaiNayiDilli #IPL2023 pic.twitter.com/VFL1uMz72KIt’s Round 2 of the Northern Derby 💥
— Delhi Capitals (@DelhiCapitals) May 17, 2023
Get ready for #PBKSvDC with our Match Preview 👉 https://t.co/yrjzcrFQiy#YehHaiNayiDilli #IPL2023 pic.twitter.com/VFL1uMz72K
ಲೀಗ್ನಿಂದ ಹೊರಗುಳಿದಿರುವ ಡೆಲ್ಲಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ಅಥವಾ ಬೇಗ ಆಲ್ಔಟ್ ಮಾಡಿದಲ್ಲಿ ಪಂಜಾಬ್ ಉತ್ತಮ ರನ್ ರೇಟ್ನ ಜೊತೆಗೆ ಎರಡು ಅಂಕ ಪಡೆಯ ಬಹುದಾಗಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿಯೇ ಪಂಜಾಬ್ಗೆ ಎದುರಾಳಿಯಾಗಿತ್ತು. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಡೆಲ್ಲಿಯನ್ನು 31 ರನ್ನಿಂದ ಗೆದ್ದಿತ್ತು. ಈ ಸೋಲು ವಾರ್ನರ್ ಪಡೆಯನ್ನು ಪ್ಲೇ ಆಫ್ ರೇಸ್ನಿಂದ ಹೊರಹಾಕಿತ್ತು.
ಈ ಋತುವಿನಲ್ಲಿ, ಪಂಜಾಬ್ ಕಿಂಗ್ಸ್ ತಂಡದ ನಾಯಕ ತಂಡಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಧವನ್ ಇದುವರೆಗೆ ತಂಡದ ಪರ ಆಡಿರುವ 9 ಪಂದ್ಯಗಳಲ್ಲಿ ಒಟ್ಟು 356 ರನ್ ಗಳಿಸಿದ್ದಾರೆ. ಇವರನ್ನು ಹೊರತುಪಡಿಸಿ ಉಳಿದ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ 200ಕ್ಕೂ ಹೆಚ್ಚು ರನ್ ಗಳಿಸಲು ಶಕ್ತರಾಗಿದ್ದಾರೆ. ಇದರಲ್ಲಿ ಸಿಮ್ರಾನ್ ಸಿಂಗ್ 334, ಜಿತೇಶ್ ಶರ್ಮಾ 265 ಮತ್ತು ಸ್ಯಾಮ್ ಕರಣ್ 216 ರನ್ ಗಳಿಸಿದ್ದಾರೆ.
-
🎶 𝑹𝒊𝒅𝒆𝒓𝒔 𝒐𝒏 𝒕𝒉𝒆 𝒔𝒕𝒐𝒓𝒎 🎶
— Punjab Kings (@PunjabKingsIPL) May 17, 2023 " class="align-text-top noRightClick twitterSection" data="
We are ready for Round 2 with the @delhicapitals! 💥#PBKSvDC #JazbaHaiPunjabi #SaddaPunjab #TATAIPL #PunjabKings pic.twitter.com/YlS5N986La
">🎶 𝑹𝒊𝒅𝒆𝒓𝒔 𝒐𝒏 𝒕𝒉𝒆 𝒔𝒕𝒐𝒓𝒎 🎶
— Punjab Kings (@PunjabKingsIPL) May 17, 2023
We are ready for Round 2 with the @delhicapitals! 💥#PBKSvDC #JazbaHaiPunjabi #SaddaPunjab #TATAIPL #PunjabKings pic.twitter.com/YlS5N986La🎶 𝑹𝒊𝒅𝒆𝒓𝒔 𝒐𝒏 𝒕𝒉𝒆 𝒔𝒕𝒐𝒓𝒎 🎶
— Punjab Kings (@PunjabKingsIPL) May 17, 2023
We are ready for Round 2 with the @delhicapitals! 💥#PBKSvDC #JazbaHaiPunjabi #SaddaPunjab #TATAIPL #PunjabKings pic.twitter.com/YlS5N986La
ಬೌಲರ್‌ಗಳ ಸ್ಥಿತಿ ನೋಡಿದರೆ ಪಂಜಾಬ್‌ನಲ್ಲಿ ಅರ್ಷದೀಪ್ ಸಿಂಗ್ (16) ಮತ್ತು ನಾಥನ್ ಎಲ್ಲಿಸ್ (12) ಮಾತ್ರ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದು, ಇಬ್ಬರೂ 10ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇದರ ಹೊರತಾಗಿ ಯಾವುದೇ ಬೌಲರ್ 10 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಮೂರನೇ ಸ್ಥಾನದಲ್ಲಿ ಹರ್‌ಪ್ರೀತ್ ಬ್ರಾರ್ 11 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. ಬೌಲಿಂಗ್‌ನಲ್ಲಿ ರಾಹುಲ್ ಚಹಾರ್ ಮತ್ತು ಸಾಮ್ ಕರಣ್ ಅವರ ಪ್ರದರ್ಶನ ಉತ್ತಮವಾಗಿಲ್ಲ. ಇಬ್ಬರೂ 7-7 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ.
ಸಂಭಾವ್ಯ ತಂಡಗಳು ಇಂತಿವೆ..: ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರೋವ್‌ಮನ್ ಪೊವೆಲ್ / ಆನ್ರಿಚ್ ನಾರ್ಟ್ಜೆ, ಅಮನ್ ಹಕೀಮ್ ಖಾನ್, ಅಕ್ಸರ್ ಪಟೇಲ್, ಪ್ರವೀಣ್ ದುಬೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ಮನೀಶ್ ಪಾಂಡೆ.
ಪಂಜಾಬ್ ಕಿಂಗ್ಸ್: ಪ್ರಭಾಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರ್ರಾನ್, ಸಿಕಂದರ್ ರಜಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ಕಗಿಸೊ ರಬಾಡ.
ಇದನ್ನೂ ಓದಿ: ಮುಂಬೈ ವಿರುದ್ಧ ಲಕ್ನೋಗೆ 5 ರನ್‌ಗಳ ಗೆಲುವು: ಅಬ್ಬರಿಸಿದ ಸ್ಟೋಯಿನಿಸ್