ETV Bharat / sports

2021ರ IPLನಲ್ಲಿ ಮೂಡಿ ಬಂತು ಸ್ಫೋಟಕ ಫಿಫ್ಟಿ.. 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಇಶನ್​ ಆರ್ಭಟ - ಮುಂಬೈ ಇಂಡಿಯನ್ಸ್​

ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ತಂಡದ ಆರಂಭಿಕ ಆಟಗಾರ ಇಶನ್ ಕಿಶನ್​ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

Ishan Kishan
Ishan Kishan
author img

By

Published : Oct 8, 2021, 8:35 PM IST

ಅಬುದಾಭಿ: ಇಂಡಿಯನ್​ ಪ್ರೀಮಿಯರ್ ಲೀಗ್​​ನ ಸನ್​ರೈಸರ್ಸ್​​ ಹೈದರಾಬಾದ್​​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಸ್ಫೋಟಕ ಬ್ಯಾಟ್ಸಮನ್​​​​ ಇಶನ್​ ಕಿಶನ್​ ಅಬ್ಬರಿಸಿದ್ದು, ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. 2021ರ ಐಪಿಎಲ್​ನಲ್ಲಿ ಮೂಡಿ ಬಂದಿರುವ ಅತಿ ವೇಗದ ಸ್ಫೋಟಕ ಅರ್ಧಶತಕ ಇದಾಗಿದೆ.

ಅಬುದಾಭಿಯಲ್ಲಿ ಸನ್​ರೈಸರ್ಸ್​ ಹೈದರಾಬಾದ್​​ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಮುಂಬೈ, ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮೊರೆ ಹೋಯಿತು. ಹೀಗಾಗಿ 3.4 ಓವರ್​ಗಳಲ್ಲಿ ತಂಡ 50ರ ಗಡಿ ದಾಟಿತು.

ಕಿಶನ್ ಸ್ಫೋಟಕ ಅರ್ಧಶತಕ

ಇಂದಿನ ಪಂದ್ಯದಲ್ಲಿ 170 ರನ್​ಗಳಿಗಿಂತಲೂ ಹೆಚ್ಚಿನ ರನ್​ಗಳಿಂದ ಗೆಲುವ ಅನಿವಾರ್ಯತೆ ನಿರ್ಮಾಣಗೊಂಡಿರುವ ಕಾರಣ ತಂಡದ ಆರಂಭಿಕ ಆಟಗಾರ ಕಿಶನ್​ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ. ತಾವು ಎದುರಿಸಿದ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದರಲ್ಲಿ 8 ಬೌಂಡರಿ ಹಾಗೂ ಎರಡು ಸಿಕ್ಸರ್​​ ಸೇರಿಕೊಂಡಿದ್ದವು.

ಇದನ್ನೂ ಓದಿರಿ: T20 ವಿಶ್ವಕಪ್.. ಅ.13ಕ್ಕೆ ಟೀಂ ಇಂಡಿಯಾ ಜರ್ಸಿ ಅನಾವರಣ.. ನೀವೂ ಖರೀದಿ ಮಾಡಬಹುದು!

ಈ ಹಿಂದೆ 2018ರಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ಕ್ಯಾಪ್ಟನ್​​ ಕೆ.ಎಲ್ ರಾಹುಲ್​​ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ವಿಶೇಷವೆಂದರೆ ಇಶನ್​ ಕಿಶನ್​ ಐಪಿಎಲ್​ನಲ್ಲಿ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿರುವ ಮೂರನೇ ಪ್ಲೇಯರ್​ ಆಗಿದ್ದಾರೆ.

ಮುಂಬೈ ತಂಡದ ಪರ ವೇಗದ ಅರ್ಧಶತಕ

ಇಶನ್ ಕಿಶನ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು, ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಮೂಡಿ ಬಂದಿರುವ ಅತಿ ವೇಗದ ಅರ್ಧಶತಕ ಇದಾಗಿದೆ. ಈ ಹಿಂದೆ 2016ರಲ್ಲಿ ಕಿರನ್ ಪೊಲಾರ್ಡ್​​​ 17 ಎಸೆತ, 2018ರಲ್ಲಿ ಕೆಕೆಆರ್ ವಿರುದ್ಧ ಕಿಶನ್​​​ 17 ಎಸೆತ, 2019ರಲ್ಲಿ ಕೆಕೆಆರ್​ ವಿರುದ್ಧ ಪಾಂಡ್ಯ 17 ಎಸೆತ ಹಾಗೂ 2021ರಲ್ಲಿ ಸಿಎಸ್​ಕೆ ವಿರುದ್ಧ ಪೊಲಾರ್ಡ್​​ 17 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದ್ದರು.

82ರನ್​ಗಳಿಸಿ ವಿಕೆಟ್ ಒಪ್ಪಿಸಿದ ಕಿಶನ್​

32 ಎಸೆತಗಳಲ್ಲಿ ಸ್ಫೋಟಕ 84ರನ್​ಗಳಿಸಿದ್ದ ಇಶನ್​ ಕಿಶನ್​, ಎದುರಾಳಿ ತಂಡದ ವೇಗದ ಬೌಲರ್​​​​ ಉಮ್ರಾನ್​ ಮಲಿಕ್​ ಎಸೆತದಲ್ಲಿ ಕ್ಯಾಚ್​ ನೀಡಿ ನಿರ್ಗಮಿಸಿದರು. ಅವರ ಸ್ಫೋಟಕ ಬ್ಯಾಟಿಂಗ್​​ನಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್​ ಸೇರಿಕೊಂಡಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.