ಮುಂಬೈ (ಮಹಾರಾಷ್ಟ್ರ): ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಶತಕದಾಟ ವ್ಯರ್ಥವಾಗಿದೆ. ಮುಂಬೈ ಇಂಡಿಯನ್ಸ್ ತಂಡ ಬ್ಯಾಟರ್ಗಳ ಸಾಂಘಿಕ ಹೋರಾಟದಿಂದ ಆರು ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಕೊನೆಯಲ್ಲಿ ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ರೋಚಕ ಜಯ ತಂದುಕೊಟ್ಟರು.
ಇಲ್ಲಿನ ವಾಖೆಂಡೆ ಮೈದಾನದಲ್ಲಿ ನಡೆದ ಐಪಿಎಲ್ನ ಸಾವಿರದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಏಕಾಂಗಿ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ನಾಲ್ಕು ವಿಕೆಟ್ ಕಳೆದುಕೊಂಡು ಇನ್ನೂ ಮೂರು ಬಾಲ್ಗಳು ಬಾಕಿರುವಾಗಲೇ ಗೆಲುವಿನ ಕೇಕೆ ಹಾಕಿತು.
ಮುಂಬೈ ತಂಡ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ (3) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ, ಎರಡನೇ ವಿಕೆಟ್ಗೆ ಇಶಾನ್ ಕಿಶನ್ ಹಾಗೂ ಕ್ಯಾಮರೂನ್ ಗ್ರೀನ್ ಉತ್ತಮ ಜೊತೆಯಾಟ ನೀಡಿದರು. ಕಿಶನ್ ನಾಲ್ಕು ಬೌಂಡರಿಗಳೊಂದಿಗೆ 23 ಎಸೆತದಲ್ಲಿ 28 ರನ್ ಸಿಡಿಸಿ ನಿರ್ಗಮಿಸಿದರು. ನಂತರ ಬಂದ ಸೂರ್ಯ ಕುಮಾರ್ ಯಾದವ್ ಜೊತೆ ಸೇರಿ ಕ್ಯಾಮರೂನ್ ಗ್ರೀನ್ ತಮ್ಮ ಹೋರಾಟ ಮುಂದುವರಿಸಿದರು. 26 ಎಸೆತದಲ್ಲಿ ನಾಲ್ಕು ಬೌಂಡರಿ, ಎರಡು ಸಿಕ್ಸರ್ ಸಮೇತ 44 ರನ್ ಬಾರಿಸಿ ಗ್ರೀನ್ ಔಟಾದರು.
ಮತ್ತೊಂದೆಡೆ, ಸೂರ್ಯುಕಮಾರ್ ಬಿರುಸಿನ ಬ್ಯಾಟಿಂಗ್ ಮುಂದುವರೆಸಿ ಆಕರ್ಷಕ ಅರ್ಧಶತಕ ಸಿಡಿಸಿದರು. 29 ಎಸೆತದಲ್ಲಿ ಎಂಟು ಬೌಂಡರಿ, ಎರಡು ಸಿಕ್ಸರ್ಗಳೊಂದಿಗೆ 55 ರನ್ ಸಿಡಿಸಿ ನಿರ್ಗಮಿಸಿದರು. ಈ ವೇಳೆ ಮುಂಬೈ ಮತ್ತೆ ಒತ್ತಡಕ್ಕೆ ಸಿಲುಕಿತು. ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಜವಾಬ್ದಾರಿಯ ಆಟ ಪ್ರದರ್ಶಿಸಿ ತಂಡದ ಗೆಲುವಿಗೆ ಕಾರಣವಾದರು. ಅದರಲ್ಲೂ, ಕೊನೆಯ ಓವರ್ನಲ್ಲಿ ಟಿಮ್ ಡೇವಿಡ್ ಸಿಡಿಸಿದ ಮೂರು ಹ್ಯಾಟ್ರಿಕ್ ಸಿಕ್ಸ್ಗಳು ರೋಚಕ ಗೆಲುವಿಗೆ ಕಾರಣವಾಯಿತು. ಕೇವಲ 14 ಎಸೆತದಲ್ಲಿ ಐದು ಸಿಕ್ಸರ್ ಮತ್ತು ಎರಡು ಬೌಂಡರಿಯೊಂದಿಗೆ ಟಿಮ್ ಅಜೇಯ 44 ರನ್ ಬಾರಿಸಿದರು. 21 ಬಾಲ್ನಲ್ಲಿ 29 ರನ್ ಕಲೆ ಹಾಕಿದ ತಿಲಕ್ ಮರ್ಮಾ ಸಹ ಅಜೇಯರಾಗಿ ಉಳಿದರು.
-
Innings break!
— IndianPremierLeague (@IPL) April 30, 2023 " class="align-text-top noRightClick twitterSection" data="
A spectacular knock from @ybj_19 powers @rajasthanroyals to 212/7 in the first innings 🔥🔥
This will take some chasing for @mipaltan! Are we in for a high-scoring thriller?
Scorecard ▶️ https://t.co/trgeZNGiRY #IPL1000 | #TATAIPL | #MIvRR pic.twitter.com/GZJZRieVDB
">Innings break!
— IndianPremierLeague (@IPL) April 30, 2023
A spectacular knock from @ybj_19 powers @rajasthanroyals to 212/7 in the first innings 🔥🔥
This will take some chasing for @mipaltan! Are we in for a high-scoring thriller?
Scorecard ▶️ https://t.co/trgeZNGiRY #IPL1000 | #TATAIPL | #MIvRR pic.twitter.com/GZJZRieVDBInnings break!
— IndianPremierLeague (@IPL) April 30, 2023
A spectacular knock from @ybj_19 powers @rajasthanroyals to 212/7 in the first innings 🔥🔥
This will take some chasing for @mipaltan! Are we in for a high-scoring thriller?
Scorecard ▶️ https://t.co/trgeZNGiRY #IPL1000 | #TATAIPL | #MIvRR pic.twitter.com/GZJZRieVDB
ಯಶಸ್ವಿ ಜೈಸ್ವಾಲ್ ಚೊಚ್ಚಲ ಶತಕ: ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಜೊತೆ ಕಣಕ್ಕಿಳಿದ ಬಟ್ಲರ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. ಬಟ್ಲರ್ 19 ಬಾಲ್ನಲ್ಲಿ 18 ರನ್ ಗಳಿಸಿ ಔಟಾದರು. ಆಗ ತಂಡದ ಮೊತ್ತ 72 ಆಗಿತ್ತು. ಆದರೆ, ನಂತರ ಬಳಿಕ ಬಂದ ಯಾವ ಬ್ಯಾಟರ್ ಸಹ ಅಬ್ಬರಿಸಲಿಲ್ಲ. ನಾಯಕ ಸಂಜು ಸ್ಯಾಮ್ಸನ್ (14), ದೇವದತ್ ಪಡಿಕ್ಕಲ್ (2), ಜೇಸನ್ ಹೋಲ್ಡರ್ (11), ಶಿಮ್ರೋನ್ ಹೆಟ್ಮೆಯರ್ (8), ಧ್ರುವ್ ಜುರೆಲ್ (2) ಬೇಗ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ, ಜೈಸ್ವಾಲ್ ಕುಗ್ಗದೇ ಲೀಲಾಜಾಲವಾಗಿ ಬ್ಯಾಟ್ ಬೀಸಿ ಐಪಿಎಲ್ನ ಚೊಚ್ಚಲ ಶತಕ ಸಿಡಿಸಿದರು. ರಾಜಸ್ಥಾನದ ಇನ್ಸಿಂಗ್ಸ್ನ ಯಶಸ್ವಿ ಜೈಸ್ವಾಲ್ 10 (62) ಓವರ್ಗಳನ್ನು ಒಬ್ಬರೇ ಎದುರಿಸಿ 124 ರನ್ ಗಳಿಸಿದರು. ಇವರ ಇನ್ನಿಂಗ್ಸ್ 16 ಬೌಂಡರಿ ಮತ್ತು ಎಂಟು ಸಿಕ್ಸರ್ಗಳನ್ನು ಒಳಗೊಂಡಿತ್ತು. ಇವರ ಏಕಾಂಗಿ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ 212 ರನ್ ಕಲೆಹಾಕಿತ್ತು.
ಕೆಟ್ಟ ಬೌಲಿಂಗ್ ಪ್ರದರ್ಶಿಸಿದ ಮುಂಬೈ: ಮುಂಬೈ ಇಂಡಿಯನ್ಸ್ ಇಂದು ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ಮಾಡಿತು. 16 ವೈಡ್ ಬಾಲ್ ಹಾಗೂ 7 ಲೆಗ್ ಬೈಸ್ ಸೇರಿದಂತೆ 25 ರನ್ ಹೆಚ್ಚುವರಿಯಾಗಿ ನೀಡಿತು. ರಿಲೆ ಮೆರೆಡಿತ್ 51 ರನ್ ಚಚ್ಚಿಸಿಕೊಂಡರೆ, ನಾಲ್ವರು ಬೌಲರ್ಗಳು 30+ ರನ್ ಬಿಟ್ಟುಕೊಟ್ಟು ದುಬಾರಿಯಾದರು. ಅರ್ಷದ್ ಖಾನ್ ಮೂರು ವಿಕೆಟ್ ಪಡೆದರೂ 39 ರನ್ ಕೊಟ್ಟರು. ಅನುಭವಿ ಪಿಯೂಷ್ ಚಾವ್ಲಾ 4 ಓವರ್ ಮಾಡಿ 2 ವಿಕೆಟ್ ಪಡೆದರೂ 34 ಕೊಟ್ಟರು. ರಿಲೆ ಮೆರಿಡಿತ್ ಮತ್ತು ಆರ್ಚರ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: ವಾಂಖೆಡೆಯಲ್ಲಿಂದು IPLನ ಸಾವಿರನೇ ಪಂದ್ಯ: ಅವಿಸ್ಮರಣೀಯ ಕ್ಷಣಕ್ಕೆ ಅಭಿಮಾನಿಗಳಲ್ಲಿ ಕಾತರ