ಮುಂಬೈ (ಮಹಾರಾಷ್ಟ್ರ): ಮುಂಬೈ ಇಂಡಿಯನ್ಸ್ ಪುರುಷರ ಕ್ರಿಕೆಟ್ ತಂಡ ಇಂದು ನಡೆಯುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮಹಿಳಾ ತಂಡದ ಜರ್ಸಿ ಧರಿಸಿ ಕಾಣಿಸಿಕೊಂಡಿದೆ. ಯುವತಿಯರ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ನ ಮಹಿಳಾ ತಂಡದ ಜರ್ಸಿ ತೊಟ್ಟು ಆಡುತ್ತಿದೆ.
ನೀತಾ ಅಂಬಾನಿ ನೇತೃತ್ವದ ರಿಲಯನ್ಸ್ ಫೌಂಡೇಶನ್‌ನ ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ (Education and Sports for All (ESA) ಎಂಬ ಯೋಜನೆಯಡಿಯಲ್ಲಿ ಪಂದ್ಯ ನಡೆಯುತ್ತಿದ್ದು ಈ ಮೂಲಕ ಹೆಣ್ಣು ಮಕ್ಕಳಿಗೂ ಕ್ರೀಡೆಗೆ ಸಮಾನ ಅವಕಾಶ ದೊರೆಯಬೇಕು ಎಂಬ ಸಂದೇಶ ನೀಡುತ್ತಿದ್ದಾರೆ. ಇಂದಿನ ಪಂದ್ಯ ವೀಕ್ಷಣೆಗೆ ವಿಶೇಷವಾಗಿ ಮುಂಬೈ ಇಂಡಿಯನ್ಸ್ ಜರ್ಸಿ ಧರಿಸಿ 36 ಎನ್‌ಜಿಒಗಳಿಂದ 19,000 ಯುವತಿಯರು ಮತ್ತು 200 ವಿಶೇಷ ಮಕ್ಕಳು ಆಗಮಿಸಿದ್ದಾರೆ.
-
Harman 🤝 Surya 🤝 #ESADay magic 💙#OneFamily #MIvKKR #ESADay #MumbaiMeriJaan #IPL2023 #TATAIPL @ril_foundation @ImHarmanpreet @surya_14kumar pic.twitter.com/4MbTEU2hcm
— Mumbai Indians (@mipaltan) April 16, 2023 " class="align-text-top noRightClick twitterSection" data="
">Harman 🤝 Surya 🤝 #ESADay magic 💙#OneFamily #MIvKKR #ESADay #MumbaiMeriJaan #IPL2023 #TATAIPL @ril_foundation @ImHarmanpreet @surya_14kumar pic.twitter.com/4MbTEU2hcm
— Mumbai Indians (@mipaltan) April 16, 2023Harman 🤝 Surya 🤝 #ESADay magic 💙#OneFamily #MIvKKR #ESADay #MumbaiMeriJaan #IPL2023 #TATAIPL @ril_foundation @ImHarmanpreet @surya_14kumar pic.twitter.com/4MbTEU2hcm
— Mumbai Indians (@mipaltan) April 16, 2023
ಮುಂಬೈ ಪುರುಷರ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್, ಮುಂಬೈ ಮಹಿಳಾ ತಂಡದ ಬೌಲಿಂಗ್ ಕೋಚ್ ಜೂಲನ್ ಗೋಸ್ವಾಮಿ ಮತ್ತು ಮುಂಬೈ ಪುರುಷರ ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್, ಈ ಕ್ರಮವನ್ನು ಯುವತಿಯರು ಕ್ರೀಡೆಯಾಗಿ ವೃತ್ತಿಯಾಗಿ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ಕೋಚ್ ಮಾತನಾಡಿ,"ಈ ಯೋಜನೆ ಉತ್ತಮ ಮತ್ತು ಆಶಾದಾಯಕವಾಗಿದೆ. ಮುಂದೊಂದು ದಿನ ಕ್ರೀಡೆಯನ್ನು ವೃತ್ತಿಪರ ಮಟ್ಟದಲ್ಲಿ ನೋಡಲು ಪ್ರೇರೇಪಿಸತ್ತದೆ" ಎಂದರು.
"ಖಂಡಿತವಾಗಿಯೂ ಈ ನಡೆ ಯುವತಿಯರನ್ನು ಪ್ರೇರೇಪಿಸುತ್ತದೆ. ಅವರನ್ನು ಪ್ರೋತ್ಸಾಹಿಸುತ್ತದೆ. ಭವಿಷ್ಯದಲ್ಲಿ ಬಹಳಷ್ಟು ಹುಡುಗಿಯರು ಕ್ರೀಡೆಗೆ ಬರುವುದನ್ನು ನಾವು ನೋಡಲಿದ್ದೇವೆ" ಎಂದು ಜೂಲನ್ ಗೋಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ ಯೋಜನೆ ಬಗ್ಗೆ ಮಾತನಾಡಿದ ನೀತಾ ಎಂ.ಅಂಬಾನಿ, "ವಿಶೇಷ ಪಂದ್ಯವು ಕ್ರೀಡೆಯಲ್ಲಿ ಮಹಿಳೆಯರ ಸಂಭ್ರಮಾಚರಣೆಯಾಗಿದೆ. ಪ್ರಸ್ತುತ ವರ್ಷ ಭಾರತದ ಮಹಿಳಾ ಕ್ರಿಕೆಟಿಗರಿಗೆ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ಹೆಗ್ಗುರುತಾಗಿದೆ. ಹೆಣ್ಣು ಮಕ್ಕಳ ಶಿಕ್ಷಣದ ಮತ್ತು ಕ್ರೀಡೆಯ ಹಕ್ಕನ್ನು ಗುರುತಿಸಲು ನಾವು ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ ಕಾರ್ಯಕ್ರಮವನ್ನು ಸಮರ್ಪಿಸುತ್ತಿದ್ದೇವೆ" ಎಂದಿದ್ದಾರೆ.
ಪ್ರಸ್ತುತ ವರ್ಷದಿಂದ ಪರಿಚಯಿಸಲಾದ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಂದು ತಂಡ ಖರೀದಿಸಿತ್ತು. ಚೊಚ್ಚಲ ಆವೃತ್ತಿಯಲ್ಲೇ ಅದ್ಭುತ ಪ್ರದರ್ಶನ ನೀಡಿದ ಹರ್ಮನ್ಪ್ರೀತ್ ಕೌರ್ ಬಳಗ ಪ್ರಶಸ್ತಿ ಗೆದ್ದುಕೊಂಡಿತ್ತು. ಬಿಸಿಸಿಐ ಮಹಿಳಾ ಕ್ರಿಕೆಟ್ಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಡಬ್ಲ್ಯೂಪಿಎಲ್ ಅನ್ನು ಆಡಿಸಿತ್ತು. ಎರಡನೇ ಆವೃತ್ತಿ ಇದೇ ವರ್ಷ ದೀಪಾವಳಿ ವೇಳೆಗೆ ನಡೆಸುವ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಚಿಂತಿಸುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ: IPL: ಕೋಲ್ಕತ್ತಾದೆದುರು ಮುಂಬೈ ಬೌಲಿಂಗ್: ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ