ಲಕ್ನೋ (ಉತ್ತರ ಪ್ರದೇಶ): 16ನೇ ಆವೃತ್ತಿಯ ಐಪಿಎಲ್ ಪ್ರಾರಂಭವಾದಾಗಿನಿಂದ ಧೋನಿ ನಿವೃತ್ತಿಯ ಬಗ್ಗೆ ಊಹಾಪೊಹಗಳು ಹರಿದಾಡುತ್ತಲೇ ಇವೆ. ಕೆಲ ಪಂದ್ಯಗಳ ಹಿಂದೆ ಧೋನಿಯೇ ನಿವೃತ್ತಿಯ ಬಗ್ಗೆ ಮುನ್ಸೂಚನೆ ನೀಡುವ ರೀತಿಯ ಮಾತುಗಳನ್ನು ಆಡಿದ್ದರು. ಲಕ್ನೋ ವಿರುದ್ಧದ ಪಂದ್ಯದ ವೇಳೆ ಮತ್ತೆ ಕಾಮೆಂಟೇಟರ್ ಮತ್ತು ಮಾಜಿ ಕ್ರಿಕೆಟಿಗ ಡ್ಯಾನಿ ಮಾರಿಸನ್ ಧೋನಿಯನ್ನು ಈ ಪ್ರಶ್ನೆ ಕೇಳಿದ್ದಾರೆ. ಧೋನಿ ಇದಕ್ಕೆ ನೀಡಿರುವ ಉತ್ತರದ ಪ್ರಕಾರ ಅವರು ನಿವೃತ್ತಿ ತೆಗೆದುಕೊಳ್ಳುವುದು ಅನುಮಾನವಾಗಿದೆ.
ಚೆನ್ನೈ ಎಲ್ಲೇ ಆಡಲು ಹೋದರೂ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ಅಭಿಮಾನಿಗಳು ಬರುತ್ತಿದ್ದಾರೆ. ಐಪಿಎಲ್ನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಚೆನ್ನೈಗೆ ಇದು ಬೇರೆ ಪಿಚ್ನಲ್ಲಿ ಆಡಲು ಸಹಕಾರಿಯಾಗಿದೆ. ಪಂದ್ಯದ ನಂತರ ಧೋನಿಯ ಮಾತುಗಳಿಗಾಗಿ ಕಾದು ನಂತರ ಜನ ತೆರಳುತ್ತಿದ್ದಾರೆ. ಕೆಲ ಪಂದ್ಯಗಳ ಹಿಂದೆ ಮ್ಯಾಚ್ ಮುಗಿದ ನಂತರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದವರೆಗೂ ಅಭಿಮಾನಿಗಳಿದ್ದರು. ಈ ವೇಳೆ ಧೋನಿಗೆ ನಿಮ್ಮ ಮಾತಿಗಾಗಿ ಜನ ಕಾಯುತ್ತಿದ್ದಾರೆ ಎಂದಿದ್ದಕ್ಕೆ, ಧೋನಿ ಭಾವನಾತ್ಮಕವಾಗಿ "ನನಗಾಗಿ ಇಷ್ಟು ಪ್ರೀತಿ ತೋರಿಸುವ ಎಲ್ಲರಿಗೂ ಧನ್ಯವಾದ, ನಾನು ಎಷ್ಟು ಎಂದು ಆಡಲು ಸಾಧ್ಯ" ಎಂದಿದ್ದರು.
-
MSD keeps everyone guessing 😉
— IndianPremierLeague (@IPL) May 3, 2023 " class="align-text-top noRightClick twitterSection" data="
The Lucknow crowd roars to @msdhoni's answer 🙌🏻#TATAIPL | #LSGvCSK | @msdhoni pic.twitter.com/rkdVq1H6QK
">MSD keeps everyone guessing 😉
— IndianPremierLeague (@IPL) May 3, 2023
The Lucknow crowd roars to @msdhoni's answer 🙌🏻#TATAIPL | #LSGvCSK | @msdhoni pic.twitter.com/rkdVq1H6QKMSD keeps everyone guessing 😉
— IndianPremierLeague (@IPL) May 3, 2023
The Lucknow crowd roars to @msdhoni's answer 🙌🏻#TATAIPL | #LSGvCSK | @msdhoni pic.twitter.com/rkdVq1H6QK
ಇಂದು ಡ್ಯಾನಿ ಮಾರಿಸನ್ ಟಾಸ್ ಸಮಯದಲ್ಲಿ,"ಇದು ನಿಮ್ಮ ಕೊನೆಯ ಆವೃತ್ತಿಯಾ, ನೀವು ಅದನ್ನು ಹೇಗೆ ಆನಂದಿಸುತ್ತಿದ್ದೀರಿ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಧೋನಿ "ಇದು ನನ್ನ ಕೊನೆಯ ಐಪಿಎಲ್ ಎಂದು ನೀವು ನಿರ್ಧರಿಸಿದ್ದೀರಿ, ನಾನಲ್ಲ" ಎಂದಿದ್ದಾರೆ. ಈ ಮೂಲಕ ಧೋನಿ ಕ್ರಿಕೆಟ್ ನಲ್ಲಿ ಮುಂದುವರೆಯುವ ಬಗ್ಗೆ ಸೂಚನೆ ನೀಡಿದ್ದಾರೆ. ಇದು ಎಂಎಸ್ಡಿ ಅಭಿಮಾನಿಗಳಿಗೆ ಸಂತೋಷವನ್ನು ಇಮ್ಮಡಿಗೊಳಿಸುವುದಂತೂ ಕಂಡಿತ.
ಧೋನಿಗೆ ಏಕನಾ ಕ್ರಿಕೆಟ್ ಸ್ಟೇಡಿಯಂ ಗೌರವ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2023 ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಬುಧವಾರ ಲಕ್ನೋದಲ್ಲಿ ಸನ್ಮಾನಿಸಿದರು. ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ ಮೊದಲ ಪಂದ್ಯವನ್ನು ಧೋನಿ ಅವರು ಆಡುತ್ತಿದ್ದಾರೆ. ಹೀಗಾಗಿ ಲೆಜೆಂಡ್ ಕ್ರಿಕೆಟರ್ಗೆ ವಿಶೇಷ ಬ್ಯಾಟ್ನ್ನು ನೀಡಿ ಗೌರವಿಸಿದ್ದಾರೆ.
-
ICYMI!
— IndianPremierLeague (@IPL) May 3, 2023 " class="align-text-top noRightClick twitterSection" data="
Mr. Rajeev Shukla, Vice President of the BCCI felicitates @msdhoni with a special award at the Bharat Ratna Shri Atal Bihari Vajpayee Ekana Cricket Stadium in Lucknow 👏🏻👏🏻#TATAIPL | #LSGvCSK | @ShuklaRajiv pic.twitter.com/ddYZ1P65Ef
">ICYMI!
— IndianPremierLeague (@IPL) May 3, 2023
Mr. Rajeev Shukla, Vice President of the BCCI felicitates @msdhoni with a special award at the Bharat Ratna Shri Atal Bihari Vajpayee Ekana Cricket Stadium in Lucknow 👏🏻👏🏻#TATAIPL | #LSGvCSK | @ShuklaRajiv pic.twitter.com/ddYZ1P65EfICYMI!
— IndianPremierLeague (@IPL) May 3, 2023
Mr. Rajeev Shukla, Vice President of the BCCI felicitates @msdhoni with a special award at the Bharat Ratna Shri Atal Bihari Vajpayee Ekana Cricket Stadium in Lucknow 👏🏻👏🏻#TATAIPL | #LSGvCSK | @ShuklaRajiv pic.twitter.com/ddYZ1P65Ef
ಮಳೆಗೆ ರದ್ದಾದ ಪಂದ್ಯ: ಚೆನ್ನೈ ಮತ್ತು ಲಕ್ನೋ ನಡುವಿನ ಪಂದ್ಯ ಮಳೆಯಿಂದ ರದ್ದಾಯಿತು. ಎರಡೂ ತಂಡಕ್ಕೆ ಒಂದೊಂದು ಅಂಕಗಳನ್ನು ಹಂಚಲಾಗಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಯಾವುದೇ ಏರಿಳಿತಗಳು ಕಂಡಿಲ್ಲ. ಟಾಸ್ಗೂ ಮುನ್ನ ಅರ್ಧ ಗಂಟೆ ಮಳೆ ಬಂದು ಪಂದ್ಯ ತಡವಾಗಿ ಆರಂಭವಾಗಿತ್ತು. ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಚೆನ್ನೈನ ಸ್ಪಿನ್ ಬೌಲರ್ಗಳ ದಾಳಿಗೆ ನಲುಗಿದ ಲಕ್ನೋ ಸೂಪರ್ ಜೈಂಟ್ಸ್ 19.2 ಓವರ್ನಲ್ಲಿ 125 ರನ್ಗೆ 7 ವಿಕೆಟ್ ಕಳೆದುಕೊಂಡಿತ್ತು. ಲಕ್ನೋ ಪರ ಆಯುಷ್ ಬದೋನಿ ಅರ್ಧಶತಕ (59) ಗಳಿಸಿ ತಂಡಕ್ಕೆ ಆಸರೆಯಾದರು. ಅವರ ಜೊತೆ ಸ್ವಲ್ಪ ಹೊತ್ತು ಪೂರನ್ ಬ್ಯಾಟ್ ಮಾಡಿ 20 ರನ್ ಕಲೆಹಾಕಿದ್ದರು. 19.2 ಓವರ್ ಆಗಿದ್ದಾಗ ಮತ್ತೆ ಮಳೆ ಆರಂಭವಾಗಿದ್ದು 7:30 ಕಳೆದರೂ ಬಿಡದ ಕಾರಣ ಫಲಿತಾಂಶ ರಹಿತ ಪಂದ್ಯವಾಯಿತು. ಈ ಆವೃತ್ತಿಯ ಮೊದಲ ಫಲಿತಾಂಶ ರಹಿತ ಪಂದ್ಯ ಇದಾಗಿದೆ.
ಇದನ್ನೂ ಓದಿ: PBKS vs MI: ಪಂಜಾಬ್ ವಿರುದ್ಧ ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ