ETV Bharat / sports

ಮ್ಯಾಕ್ಸ್‌ವೆಲ್‌ ಫಾರ್ಮ್​ಗೆ ಬಂದ್ರೆ ಅವರನ್ನು ತಡೆಯಲು ಸಾಧ್ಯವಿಲ್ಲ: ಕೊಹ್ಲಿ - ಮೊಹಮ್ಮದ್‌ ಸಿರಾಜ್

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಮೊದಲ ಎರಡು ವಿಕೆಟ್‌ಗಳನ್ನು​ ಬೇಗನೆ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಬ್ಯಾಟಿಂಗ್​ಗೆ ಇಳಿದ ಮ್ಯಾಕ್ಸ್‌ವೆಲ್‌ ಸ್ಫೋಟಕ ಪ್ರದರ್ಶನ ನೀಡಿ ತಂಡವನ್ನು ಸುಭದ್ರ ಸ್ಥಿತಿಗೆ ತಂದಿದ್ದರು.

Maxwell
ಮ್ಯಾಕ್ಸ್‌ವೆಲ್
author img

By

Published : Apr 19, 2021, 12:35 PM IST

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿಯ ಸ್ಟಾರ್​ ಬ್ಯಾಟ್ಸ್‌ಮನ್​ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅದ್ಭುತ ಪ್ರದರ್ಶನ ನೀಡುವ ಮೂಲಕ, ತಂಡದ ಗೆಲುವಿನಲ್ಲಿ ಪ್ರಮುಕ ಪಾತ್ರವಹಿಸಿದ್ದರು. ಇವರ ಆಟಕ್ಕೆ ಟೀಂ​ ಮ್ಯಾನೇಜ್‌ಮೆಂಟ್​ ಹಾಗೂ ನಾಯಕ ಕೊಹ್ಲಿ ಹರ್ಷ ವ್ಯಕ್ತಪಡಿಸಿದರೆ ಇತ್ತ ಆರ್​ಸಿಬಿ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಮೊದಲ ಎರಡು ವಿಕೆಟ್​ ಬೇಗನೆ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಬ್ಯಾಟಿಂಗ್​ಗೆ ಇಳಿದ ಮ್ಯಾಕ್ಸಿ‌ ಸ್ಫೋಟಕ ಪ್ರದರ್ಶನ ನೀಡಿ ತಂಡವನ್ನು ಸುಭದ್ರ ಸ್ಥಿತಿಗೆ ತಂದಿದ್ದರು. ಮ್ಯಾಕ್ಸ್‌ವಲ್​ ಕೇವಲ 49 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ 78 ರನ್‌ ಸಿಡಿಸಿದರು. ಈ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಕೊಹ್ಲಿ, ಮ್ಯಾಕ್ಸ್‌ವೆಲ್‌ ಹಾಗೂ ಡಿವಿಲಿಯರ್ಸ್ ಅವರನ್ನು ಗುಣಗಾನ ಮಾಡಿದರು.

"ಮ್ಯಾಕ್ಸ್‌ವೆಲ್ ಅಸಾಧಾರಣ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರನ್ನ ಎಬಿಡಿ ವಿಲಿಯರ್ಸ್ ಕೂಡಾ ಹಿಂಬಾಲಿಸಿದರು. ಈ ರೀತಿಯ ಫಾರ್ಮ್‌ಗೆ ಅವರು ಬಂದರೆ, ಅವರನ್ನು ತಡೆಯಲು ಯಾರಿಂದಲೂ ಸಾಧ್ಯವೇ ಇಲ್ಲ. ಪಿಚ್‌ ನಿಧಾನಗತಿಯಿಂದ ಕೂಡಿತ್ತು. ಆದರೂ ನಾವು 40 ಹಚ್ಚುವರಿ ರನ್‌ಗಳನ್ನು ಕಲೆ ಹಾಕಿದ್ದೆವು. ಈ ಪಿಚ್​ನಲ್ಲಿ ಮ್ಯಾಕ್ಸ್​ವೆಲ್​ ಲೀಲಾಜಾಲವಾಗಿ ಬ್ಯಾಟ್​ ಬೀಸಿದರು" ಎಂದು ಹೇಳಿದರು.

"ಆಂಡ್ರೆ ರಸೆಲ್‌ಗೆ ಮೊಹಮ್ಮದ್‌ ಸಿರಾಜ್‌ ಬೌಲಿಂಗ್‌ ಅತ್ಯುತ್ತಮವಾಗಿತ್ತು. ರಸೆಲ್‌ ವಿರುದ್ಧ ಸಿರಾಜ್‌ ಈ ಹಿಂದೆ ಇದೇ ರೀತಿ ಬೌಲಿಂಗ್‌ ಮಾಡಿರುವ ಇತಿಹಾಸವಿದೆ. ಆಸ್ಟ್ರೇಲಿಯಾ ಪ್ರವಾಸದ ಬಳಿಕ ಅವರು ವಿಭಿನ್ನ ಬೌಲರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಹರ್ಷಲ್‌ ಪಟೇಲ್‌ ಡೆತ್‌ ಓವರ್‌ಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದಾರೆ ಹಾಗೂ ಕೈಲ್‌ ಜೇಮಿಸನ್‌ ಅತ್ಯುತ್ತಮವಾಗಿ ಬೌಲಿಂಗ್‌ ಮಾಡಿದ್ದಾರೆ. ಈ ಕಾರಣದಿಂದಲೇ ನಾವು ಮೂರು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಯಿತು" ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ : ಆರ್​ಸಿಬಿಯ ಈ ಆಟಗಾರ 'ಪ್ಲೇಯರ್ ಆಫ್​ ದ ಟೂರ್ನಮೆಂಟ್​' ಆಗ್ತಾರೆ: ಮೈಕಲ್ ವಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.