ಬೆಂಗಳೂರು: ಐಪಿಎಲ್ 2023ರ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಸೋಲುಂಡಿದೆ. ಈ ಸೋಲು ಮುಂಬೈಗೆ ಕೊಂಚ ತಲೆನೋವು ತಂದಿಟ್ಟಿದೆ. ಪ್ರಸಕ್ತ ಸೀಸನ್ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ರೋಹಿತ್ ಬಳಗವನ್ನು ಕಾಣುತ್ತಿದೆ. ಇದರ ಮಧ್ಯೆ ಮುಂಬೈ ತಂಡ ಮಧ್ಯಪ್ರದೇಶದ ಆಲ್‌ರೌಂಡರ್ ಅರ್ಷದ್ ಖಾನ್ ಅವರ ಕನಸನ್ನು ಐಪಿಎಲ್ನ ಚೊಚ್ಚಲ ಆವೃತ್ತಿ ಈಡೇರಿಸಿದೆ. ಆರ್‌ಸಿಬಿ ವಿರುದ್ಧ ಅರ್ಷದ್ ಪದಾರ್ಪಣೆ ಪಂದ್ಯದಲ್ಲೇ ಮಿಂಚು ಹರಿಸಿದರು. ಇವರು ಬೌಲಿಂಗ್ ತಂತ್ರಗಳನ್ನು ಭಾರತ ತಂಡದ ಮಾಜಿ ಎಡಗೈ ವೇಗಿ ಜಹೀರ್ ಖಾನ್ ಅವರಿಂದ ಕಲಿತಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಬೆಂಗಳೂರು-ಮುಂಬೈ ನಡುವಣ ಹಣಾಹಣಿಯಲ್ಲಿ ಅರ್ಷದ್ ಖಾನ್ 9 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿ ಬ್ಯಾಟಿಂಗ್ನಲ್ಲಿಯೂ ಪ್ರತಿಭೆ ತೋರಿಸಿದರು. ಆದ್ರೆ ಎಡಗೈ ವೇಗಿ ಬೌಲಿಂಗ್‌ನಲ್ಲಿ ವಿಕೆಟ್ ಪಡೆದು ದುಬಾರಿಯಾದರು. 2.2 ಓವರ್‌ಗಳಲ್ಲಿ 28 ರನ್ ನೀಡಿ 1 ವಿಕೆಟ್ ಪಡೆದರು. ಆದರೆ, ಇದು ಚೊಚ್ಚಲ ಪಂದ್ಯವಾದ್ದರಿಂದ ಅರ್ಷದ್‌ಗೆ ಒತ್ತಡ ಎದುರಾಗಿತ್ತು. ಐಪಿಎಲ್ ಚೊಚ್ಚಲ ಪ್ರವೇಶ ಸುಲಭವಲ್ಲ. ಗಾಯದ ಕಾರಣ ಅವರು ಐಪಿಎಲ್ 2022 ರಿಂದ ಹೊರಗುಳಿದಿದ್ದರು.
₹20 ಲಕ್ಷಕ್ಕೆ ಬಿಕರಿ: ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಅರ್ಷದ್ ಅವರನ್ನು ಮುಂಬೈ ಇಂಡಿಯನ್ಸ್ ಮೂಲ ಬೆಲೆ 20 ಲಕ್ಷ ರೂ.ಗೆ ಖರೀದಿಸಿದೆ. ಆದರೆ ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಬದಲಿ ಆಟಗಾರನಾಗಿ ಕುಮಾರ್ ಕಾರ್ತಿಕೇಯ ಮುಂಬೈ ಇಂಡಿಯನ್ಸ್ಗೆ ಬಂದು ಅಬ್ಬರಿಸಿದ್ದರು.
ಅರ್ಷದ್ ಖಾನ್ ತರಬೇತುದಾರ ಅಬ್ದುಲ್ ಕಲಾಂ ಮಾತನಾಡಿ, ಅರ್ಷದ್ ಐಪಿಎಲ್‌ನಿಂದ ಹೊರಗುಳಿದಾಗ ನಿರಾಶೆಗೊಂಡರು. ಆದರೆ, ಆತ ಎಂದಿಗೂ ಎದೆಗುಂದಲಿಲ್ಲ. ಕ್ರಿಕೆಟ್‌ನಲ್ಲಿ ಆತನ ಉತ್ಸಾಹ ಎಷ್ಟಿದೆಯೆಂದರೆ ಪಂದ್ಯಗಳನ್ನು ಆಡಲು ಸಿಯೋನಿಯಿಂದ ಜಬಲ್‌ಪುರಕ್ಕೆ ನಿಯಮಿತವಾಗಿ 300 ಕಿ.ಮೀ ಪ್ರಯಾಣಿಸುತ್ತಿದ್ದರು. ಇದಕ್ಕಾಗಿ ಬೆಳಗಿನ ಜಾವ ಮೂರು ಗಂಟೆಗೆ ಏಳಬೇಕಿತ್ತು. ಆದರೆ, ಅವರು ಪ್ರತಿ ಪಂದ್ಯಕ್ಕೂ ಸಮಯಕ್ಕಿಂತ ಮುಂಚಿತವಾಗಿಯೇ ತಲುಪುತ್ತಿದ್ದರು ಎಂದು ಹೇಳಿದರು.
ಪ್ರತಿಭೆ ಗುರುತಿಸಿದ್ದು ತಂದೆ: ಅರ್ಷದ್ ಖಾನ್ ಅವರ ತಂದೆ ಅಶ್ಫಾಕ್ ಸ್ವತಃ ಕ್ರಿಕೆಟ್ ಕೋಚ್ ಆಗಿದ್ದಾರೆ. ಮಗನ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಅವರೇ. ಈ ಬಗ್ಗೆ ಮಾತನಾಡಿದ ಅಶ್ಫಾಕ್, ಆತ 9 ವಯಸ್ಸಿನಲ್ಲಿ ತನಗಿಂತ ದೊಡ್ಡವರ ಜೊತೆಗೆ ಆಟವಾಡುತ್ತಿದ್ದಾಗ ಸಿಕ್ಸರ್ಗಳನ್ನು ಬಾರಿಸುತ್ತಿದ್ದ. ಕೆಲವು ಹೊಡೆತಗಳು ವೃತ್ತಿಪರ ಕ್ರಿಕೆಟಿಗರಂತಿತ್ತು. ಆಗಲೇ ಅತ್ಯುತ್ತಮ ಕ್ರಿಕೆಟಿಗನಾಗಬೇಕು ಎಂಬ ಬಯಕೆ ನನ್ನಲ್ಲಿ ಮೂಡಿತು ಎಂದು ಹೇಳಿದರು.
ಬ್ಯಾಟಿಂಗ್ನಲ್ಲಿ ಪರಿಣತಿ: ಇದಾದ ನಂತರ ನಾನು ಅರ್ಷದ್ನನ್ನು ಒಂದು ದಿನ ಕ್ರಿಕೆಟ್ ಕೋಚ್ ಅಬ್ದುಲ್ ಕಲಾಂ ಬಳಿ ಕರೆದೊಯ್ದರು. ಆಗ ಅರ್ಷದ್ ಅವರ ಬ್ಯಾಟಿಂಗ್ ನೋಡಿ ಕೋಚ್ ಕೂಡ ಬೆಚ್ಚಿ ಬಿದ್ದಿದ್ದರು. 11 ವರ್ಷದ ಅರ್ಷದ್ ಮಧ್ಯಪ್ರದೇಶದ 14 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾದರು. ಆರಂಭದಲ್ಲಿ ಅರ್ಷದ್ ಎಡಗೈ ಬ್ಯಾಟರ್ ಆಗಿದ್ದಾರೆ. ಒಂದು ದಿನ ಪಂದ್ಯದಲ್ಲಿ ಹೊಸ ಚೆಂಡಿನೊಂದಿಗೆ ಬೌಲ್ ಮಾಡಿದ ಆತ ಆಲ್‌ರೌಂಡರ್ ಆಗಲು ಆರಂಭಿಸಿದ್ದನು ಎಂದು ಅರ್ಷದ್‌ನ ತಂದೆ ಅಶ್ಫಾಕ್ ಹೇಳಿದ್ದಾರೆ.
ತಂದೆಯ ತ್ಯಾಗದಿಂದಾಗಿ ಕ್ರಿಕೆಟಿಗನಾದ ಅರ್ಷದ್: ಅರ್ಷದ್ ಕ್ರಿಕೆಟಿಗನಾಗುವಲ್ಲಿ ತಂದೆಯ ಪಾತ್ರ ಪ್ರಮುಖವಾಗಿದೆ. ಈ ಬಗ್ಗೆ ಮಾತನಾಡಿದ ಅರ್ಷದ್ ತಾಯಿ ಆಲಿಯಾ, ಅರ್ಷದ್ ಎಷ್ಟೇ ಮಟ್ಟಕ್ಕೆ ಬೆಳೆದರೂ ಅದು ಅವನ ತಂದೆಯ ತ್ಯಾಗದಿಂದಾಗಿ. ತಂದೆ ತಿಂಗಳಿಗೆ ಕೇವಲ 15,000 ರೂಪಾಯಿ ಸಂಪಾದಿಸುತ್ತಿದ್ದರು. ಅರ್ಷದ್‌ಗೆ 16,000 ರೂಪಾಯಿ ಮೌಲ್ಯದ ಕ್ರಿಕೆಟ್ ಕಿಟ್ ಖರೀದಿಸಿ ಕೊಟ್ಟಿದ್ದರು. ಅಷ್ಟೇ ಅಲ್ಲ, ಎಷ್ಟೇ ಕಷ್ಟ ಎದುರಾದ್ರೂ ತರಬೇತಿಗೆ ಹಣ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ: ವಿರಾಟ್-ಡುಪ್ಲೆಸಿಸ್ ಮಿಂಚು: ಮುಂಬೈ ವಿರುದ್ಧ 4ನೇ ಅತ್ಯಧಿಕ ಆರಂಭಿಕ ಜೊತೆಯಾಟದ ದಾಖಲೆ