ಲಕ್ನೋ (ಉತ್ತರ ಪ್ರದೇಶ): ಸನ್ ರೈಸರ್ಸ್ ಕೊಟ್ಟ ಸುಲಭ ಗುರಿಯನ್ನು ನಾಯಕ ಕೆಎಲ್ ರಾಹುಲ್ ಹಾಗೂ ಕೃನಾಲ್ ಪಾಂಡ್ಯ ಅರ್ಧಶತಕದ ಜೊತೆಯಾಟದಿಂದ ಪೂರೈಸಿದರು. 16 ಓವರ್ನಲ್ಲಿ 5 ವಿಕೆಟ್ ನಷ್ಟದಿಂದ ಲಕ್ನೋ ಸೂಪರ್ ಜೈಂಟ್ಸ್ ಗುರಿ ತಲುಪಿತು. ನಾಯಕ ಕೆಎಲ್ ರಾಹುಲ್ 35 ರನ್ ಗಳಿಸಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು.
ಎರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಕೈಲ್ ಮೇಯರ್ಸ್ ಇಂದು 13 ರನ್ಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಬಂದ ದೀಪಕ್ ಹೂಡಾ 7 ರನ್ ಗಳಿಸಿ ಔಟಾದರು. ನಂತರ ಬಡ್ತಿ ಪಡೆದು ಬಂದ ಕೃನಾಲ್ ಪಾಂಡ್ಯ ನಾಯಕ ರಾಹುಲ್ ಸೇರಿ 50 ರನ್ ಜೊತೆಯಾಟ ನೀಡಿದರು. ತಂಡದ ಗೆಲುವಿಗೆ 22 ರನ್ ಬಾಕಿ ಇದ್ದಾಗ ಉಮ್ರಾನ್ ಮಲಿಕ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಪಾಂಡ್ಯ (34) ರನ್ಗೆ ಪೆವಿಲಿಯನ್ಗೆ ಮರಳಿದರು.
-
Innings Break!
— IndianPremierLeague (@IPL) April 7, 2023 " class="align-text-top noRightClick twitterSection" data="
Disciplined bowling by the #LSG bowlers restrict #SRH to a total of 121/8 on the board.
Scorecard - https://t.co/7Mh0bHCrTi #TATAIPL #LSGvSRH #IPL2023 pic.twitter.com/YDwKABg2hu
">Innings Break!
— IndianPremierLeague (@IPL) April 7, 2023
Disciplined bowling by the #LSG bowlers restrict #SRH to a total of 121/8 on the board.
Scorecard - https://t.co/7Mh0bHCrTi #TATAIPL #LSGvSRH #IPL2023 pic.twitter.com/YDwKABg2huInnings Break!
— IndianPremierLeague (@IPL) April 7, 2023
Disciplined bowling by the #LSG bowlers restrict #SRH to a total of 121/8 on the board.
Scorecard - https://t.co/7Mh0bHCrTi #TATAIPL #LSGvSRH #IPL2023 pic.twitter.com/YDwKABg2hu
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕೆಎಲ್ ರಾಹುಲ್ ತಮ್ಮ ಆಟವನ್ನು ನಿಧಾನಗತಿಯಲ್ಲಿ ಮುಂದುವರಿಸಿದರು. ಗೆಲುವಿಗೆ 8 ರನ್ ದೂರ ಇರುವಾಗ ರಾಹುಲ್ (35) ಆದಿಲ್ ರಶೀದ್ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಬೆನ್ನಲ್ಲೇ ಬಂದ ರೊಮಾರಿಯೋ ಶೆಫರ್ಡ್ ಶೂನ್ಯಕ್ಕೆ ವಿಕೆಟ್ ಕೊಟ್ಟರು. ಕೊನೆಯಲ್ಲಿ ಅಜೇಯರಾಗುಳಿದ ನಿಕೋಲಸ್ ಪೂರನ್ (10) ಮತ್ತು ಮಾರ್ಕಸ್ ಸ್ಟೊಯಿನಿಸ್ (11) ತಂಡ ಗೆಲ್ಲಿಸಿದರು. ಲಕ್ನೋ 121 ರನ್ ಗುರಿಯನ್ನು ಬೆವರಿಳಿಸಿ ಗೆದ್ದುಕೊಂಡಿತು.
ಸನ್ ರೈಸರ್ಸ್ ಪರ ಆದಿಲ್ ರಶೀದ್ 2, ಫಜಲ್ಹಕ್ ಫಾರೂಕಿ, ಭುವನೇಶ್ವರ್ ಮತ್ತು ಮಲಿಕ್ ತಲಾ ಒಂದು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ನಾಯಕ ಐಡೆನ್ ಮಾರ್ಕ್ರಾಮ್ ಬೃಹತ್ ಮೊತ್ತ ನೀಡುವಲ್ಲಿ ವಿಫಲರಾದರು. ಲಕ್ನೋದ ಕೃನಾಲ್ ಪಾಂಡ್ಯ ಮತ್ತು ಅಮಿತ್ ಮಿಶ್ರಾ ದಾಳಿಗೆ ನಲುಗಿದ ಸನ್ ರೈಸರ್ಸ್ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತು.
ಮಯಾಂಕ್ ಅಗರ್ವಾಲ್ ಮತ್ತು ಅನ್ಮೋಲ್ಪ್ರೀತ್ ಸಿಂಗ್ ಉತ್ತಮ ಆರಂಭ ನೀಡುವ ಭರವಸೆಯಲ್ಲೇ ಕಣಕ್ಕಿಳಿದರು. ಆದರೆ ಕೃನಾಲ್ 8 ರನ್ ಗಳಿಸಿದ್ದ ಮಯಾಂಕ್ ಅವರನ್ನು ಔಟ್ ಮಾಡಿದರು. ನಂತರ ಬಂದ ರಾಹುಲ್ ತ್ರಿಪಾಠಿ ಆರಂಭಿಕ ಸಿಂಗ್ ಜೊತೆ ಸೇರಿ 30 ರನ್ ಸೇರಿಸಿದರು. ಆದರೆ 31 ರನ್ ಗಳಿಸಿ ಆಡುತ್ತಿದ್ದ ಅನ್ಮೋಲ್ಪ್ರೀತ್ರನ್ನು ಮತ್ತೆ ಕೃನಾಲ್ ಪಾಂಡ್ಯ ಪೆವಿಲಿಯನ್ಗೆ ಕಳಿಸಿದರು. ಇವರ ಬೆನ್ನಲ್ಲೇ ಬಂದ ನಾಯಕ ಐಡೆನ್ ಮಾರ್ಕ್ರಾಮ್ ಕೂಡಾ ಪಾಂಡ್ಯ ಬಲೆಗೆ ಬಿದ್ದರು.
ಹ್ಯಾರಿ ಬ್ರೂಕ್ (3), ವಾಷಿಂಗ್ಟನ್ ಸುಂದರ್ (16), ಆದಿಲ್ ರಶೀದ್ (4) ಮತ್ತು ಉಮ್ರಾನ್ ಮಲಿಕ್ ಶೂನ್ಯಕ್ಕೆ ಔಟ್ ಆದರು. ಅಬ್ದುಲ್ ಸಮದ್ (21*) ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಲಕ್ನೋ ಪರ ಕೃನಾಲ್ ಪಾಂಡ್ಯ 3, ಅಮಿತ್ ಮಿಶ್ರಾ 2 ಮತ್ತು ಯಶ್ ಠಾಕೂರ್, ರವಿ ಬಿಷ್ಣೋಯ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: IPL 2023 LSG vs SRH: ಟಾಸ್ ಗೆದ್ದ ಹೈದರಾಬಾದ್ ಬ್ಯಾಟಿಂಗ್, ಮಾರ್ಕ್ರಾಮ್ ತಂಡ ಸೇರ್ಪಡೆ