ಲಕ್ನೋ (ಉತ್ತರ ಪ್ರದೇಶ): ಲಕ್ನೋಗೆ ಕೊಟ್ಟಿದ್ದ 136 ರನ್ನ ಅಲ್ಪ ಮೊತ್ತದ ಗುರಿಯನ್ನು ಗುಜರಾತ್ ಟೈಟಾನ್ಸ್ ಯಶಸ್ವಿಯಾಗಿ ನಿಯಂತ್ರಿಸಿ 7 ರನ್ನ ಭರ್ಜರಿ ಗೆಲುವು ಸಾಧಿಸಿದೆ. ಕೊನೆಯ ಓವರ್ನಲ್ಲಿ ಮೋಹಿತ್ ಶರ್ಮಾ ಮಾಡಿದ ಮ್ಯಾಜಿಕ್ನಿಂದ ಗುಜರಾತ್ ಟೈಟಾನ್ಸ್ ತಂಡ ಲಕ್ನೋವನ್ನು ಮಣಿಸಿತು. ಕೊನೆಯ ಓವರ್ ಒಂದರಲ್ಲೇ 4 ವಿಕೆಟ್ ಕಳೆದುಕೊಂಡ ಲಕ್ನೋ 20 ಓವರ್ಗೆ 128 ರನ್ ಗಳಿಸಷ್ಟೇ ಶಕ್ತವಾಗಿ , ಗುರಿಯಿಂದ 7 ರನ್ ಹಿನ್ನಡೆ ಅನುಭವಿಸಿತು.
ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆಯಿತು. ಕೆಎಲ್ ರಾಹುಲ್ ಮತ್ತು ಕೈಲ್ ಮೇಯರ್ಸ್ ಜೋಡಿ 55 ರನ್ ಓಪನಿಂಗ್ ಜೊತೆಯಾಟ ಮಾಡಿದರು. ಸತತ ಉತ್ತಮ ಫಾರ್ಮ್ನಲ್ಲಿರುವ ಕೈಲ್ ಮೇಯರ್ಸ್ 24 ರನ್ ಗಳಿಸಿದ್ದಾಗ ರಶೀದ್ ಖಾನ್ ಅವರ ಬೌಲಿಂಗ್ಗೆ ವಿಕೆಟ್ ಒಪ್ಪಿಸಿದರು.
-
Aaj ka sheer k̵o̵r̵m̵a̵ drama 😄#LSGvGT #IPLonJioCinema #TATAIPL #IPL2023 pic.twitter.com/l8ODhiVBKt
— JioCinema (@JioCinema) April 22, 2023 " class="align-text-top noRightClick twitterSection" data="
">Aaj ka sheer k̵o̵r̵m̵a̵ drama 😄#LSGvGT #IPLonJioCinema #TATAIPL #IPL2023 pic.twitter.com/l8ODhiVBKt
— JioCinema (@JioCinema) April 22, 2023Aaj ka sheer k̵o̵r̵m̵a̵ drama 😄#LSGvGT #IPLonJioCinema #TATAIPL #IPL2023 pic.twitter.com/l8ODhiVBKt
— JioCinema (@JioCinema) April 22, 2023
ಕೈಲ್ ಮೇಯರ್ಸ್ ನಂತರ ಬಂದ ಕೃನಾಲ್ ಪಾಂಡ್ಯ ಬ್ಯಾಟಿಂಗ್ನಲ್ಲೂ ರಾಹುಲ್ ಸಾಥ್ ನೀಡಿದರು. ನಾಯಕನ ಜೊತೆ ಸೇರಿದ ಕೃನಾಲ್ ಮತ್ತೆ 55 ರನ್ ಜೊತೆಯಾಟ ಮಾಡಿದರು. ಪಿಚ್ ಬೌಲರ್ ಸ್ನೇಹಿಯಾಗಿದ್ದು ಅಬ್ಬರದ ಹೊಡೆತಗಳು ಇಬ್ಬರು ಬ್ಯಾಟರ್ಗಳಿಂದಲೂ ಬರಲಿಲ್ಲ. 23 ಎಸೆತದಲ್ಲಿ 23 ರನ್ ಗಳಿಸಿದ್ದ ಕೃನಾಲ್ ಪಾಂಡ್ಯ ನೂರ್ ಅಹಮದ್ಗೆ ವಿಕೆಟ್ ಕೊಟ್ಟರು. ನಂತರ ಬಂದ ಯಾವುದೇ ಬ್ಯಾಟರ್ ರಾಹುಲ್ಗೆ ಜೊತೆಯಾಟ ಮಾಡಲಿಲ್ಲ. ನಿಕೋಲ್ಸ್ ಪೂರನ್(1) ವಿಕೆಟ್ 110 ರನ್ ಆಗಿದ್ದಾಗ ಬಿದ್ದಿತ್ತು.
ಮ್ಯಾಜಿಕ್ ಮೋಹಿತ್ ಓವರ್: 20ನೇ ಓವರ್ನಲ್ಲಿ ಮ್ಯಾಜಿಕ್ ನಡೆಯಿತು ಎಂದರೆ ತಪ್ಪಾಗಲಾರದು. 6 ಬಾಲ್ಗೆ 12 ರನ್ನ ಅವಶ್ಯಕತೆ ಇತ್ತು. ಮೊದಲ ಬಾಲ್ಗೆ ಎರಡು ರನ್, ಎರಡನೇ ಬಾಲ್ನಲ್ಲಿ 68 ರನ್ ಗಳಿಸಿ ಆಡುತ್ತಿದ್ದ ಕೆಎಲ್ ರಾಹುಲ್ ವಿಕೆಟ್ ಬಿದ್ದಿತ್ತು. ಮೂರನೇ ಬಾಲ್ನಲ್ಲಿ ಮಾರ್ಕಸ್ ಸ್ಟೋನಿಸ್ (0) ಔಟ್ ಆದರು. ನಾಲ್ಕನೇ ಎಸೆತದಲ್ಲಿ ಆಯುಷ್ ಬದೋನಿ (8) ರನ್ ಔಟ್ ಆದರೆ, ಐದನೇ ಬಾಲ್ನಲ್ಲಿ ದೀಪಕ್ ಹೂಡಾ (2) ರನ್ ಔಟ್ಗೆ ಬಲಿಯಾದರು. ಕೊನೆಯ ಓವರ್ನಲ್ಲಿ 4 ವಿಕೆಟ್ ಬಿದ್ದು, 4 ರನ್ ಮಾತ್ರ ಮೋಹಿತ್ ಶರ್ಮಾ ಬಿಟ್ಟುಕೊಟ್ಟರು.
ವ್ಯರ್ಥವಾದ ಅರ್ಧಶತಕ: ಆರಂಭದಿಂದ ಇಬ್ಬರ ಜೊತೆ 50 ರನ್ನ ಜೊತೆಯಾಟ ಮಾಡಿದ ನಾಯಕ ಕೆಎಲ್ ರಾಹುಲ್ ನಿಧಾನ ಗತಿಯ ಅರ್ಧಶತಕ ದಾಖಲಿಸಿದರು. ಇದು ಅವರ ಐಪಿಎಲ್ನ 32 ನೇ ಅರ್ಧಶತಕವಾಗಿದೆ. ಈ ಇನ್ನಿಂಗ್ಸ್ನಲ್ಲಿ ಅವರು 61 ಬಾಲ್ ಎದುರಿಸಿ 8 ಬೌಂಡರಿಯಿಂದ 68ರನ್ ಗಳಿಸಿದರು. ಒಂದೇ ಒಂದು ಸಿಕ್ಸ್ ಬಾರಿಸದ ರಾಹುಲ್ 111.48 ರ ಏಕದಿನ ಸ್ಟ್ರೈಕ್ ರೇಟ್ ಕಾಯ್ದುಕೊಂಡರು.
ಇದಕ್ಕೂ ಮುನ್ನ ನಾಯಕ ಹಾರ್ದಿಕ್ ಪಾಂಡ್ಯರ ಅರ್ಧಶತಕ ಮತ್ತು ಆರಂಭಿಕ ವೃದ್ಧಿಮಾನ್ ಸಹಾ ಅವರ 47 ರನ್ನ ಇನ್ನಿಂಗ್ಸ್ನ ಬಲದಿಂದ ಗುಜರಾತ್ ಟೈಟಾನ್ಸ್ ಲಕ್ನೋ ವಿರುದ್ಧ ನಿಗದಿತ ಓವರ್ನಲ್ಲಿ 6 ವಿಕೆಟ್ ನಷ್ಟದಿಂದ 135 ರನ್ ಗಳಿಸಿದೆ. ರಾಹುಲ್ ಪಡೆಯ ಚಾಕಚಕ್ಯತೆಯ ಬೌಲಿಂಗ್ನಿಂದ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಅಲ್ಪ ಮೊತ್ತಕ್ಕೆ ಕುಸಿದಿದೆ. ಲಕ್ನೋ ಗೆಲುವಿಗೆ 136 ರನ್ನ ಸಾಧಾರಣ ಗುರಿ ಇದೆ.
ನಾಯಕ ಹಾರ್ದಿಕ್ ಪಾಂಡ್ಯ ಬೃಹತ್ ರನ್ ಕಲೆಹಾಕುವ ಅಂದಾಜಿನಲ್ಲಿ ಟಾಸ್ನಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಪಿಚ್ ಬ್ಯಾಟಿಂಗ್ ಸಹಕಾರಿಯಾಗಿ ವರ್ತಿಸದ ಹಿನ್ನಲೆ ಗುಜರಾತ್ ಸಾಧಾರಣ ಮೊತ್ತವನ್ನು ಕಲೆಹಾಕಿತು. ಕಳೆದ ಪಂದ್ಯಗಳಲ್ಲಿ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡಿದ್ದ ಶುಭಮನ್ ಗಿಲ್ ಶೂನ್ಯಕ್ಕೆ ಔಟ್ ಆದರು.
ಮತ್ತೋರ್ವ ಆರಂಭಿಕ ಆಟಗಾರ ವೃದ್ಧಿಮಾನ್ ಸಹಾ ಅವರ ಜೊತೆ ನಾಯಕ ಹಾರ್ದಿಕ್ ಪಾಂಡ್ಯ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 68 ರನ್ಗಳ ಜೊತೆಯಾಟ ಮಾಡಿತು. 37 ಬಾಲ್ ಎದರಿಸಿ 47 ರನ್ ಗಳಿಸಿದ್ದ ಸಹಾ ಕೃನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಸಹಾ ನಂತರ ಯಾವುದೇ ಬ್ಯಾಟರ್ ಹಾರ್ದಿಕ್ಗೆ ಜೊತೆಯಾಟ ನೀಡಲಿಲ್ಲ. ಒಂದೆಡೆ ವಿಕೆಟ್ಗಳು ಪತನವಾಗುತ್ತಾ ಸಾಗಿತು.
ಅಭಿನವ್ ಮನೋಹರ್ (3), ವಿಜಯ್ ಶಂಕರ್ (10) ಮತ್ತು ಡೇವಿಡ್ ಮಿಲ್ಲರ್ (6) ಬೇಗ ವಿಕೆಟ್ ಕಳೆದುಕೊಂಡರು. ಹಾರ್ದಿಕ್ ಪಾಂಡ್ಯ ಇವರುಗಳ ವಿಕೆಟ್ ಪತನದ ನಡುವೆ ತಮ್ಮ ಐಪಿಎಲ್ನ 9ನೇ ಅರ್ಧಶತಕವನ್ನು ಪೂರ್ಣ ಮಾಡಿದರು. 50 ಬಾಲ್ ಫೇಸ್ ಮಾಡಿದ ಅವರು 4 ಸಿಕ್ಸ್ ಮತ್ತು 2 ಬೌಂಡರಿಯಿಂದ 66 ರನ್ ಗಳಿಸಿದರು. ಕೊನೆಯ 4 ಬಾಲ್ಗಳಿದ್ದಾಗ ಬಂದ ತೆವಾಟಿಯ 2 ರನ್ ಗಳಿಸಿ ಅಜೇಯರಾಗಿ ಉಳಿದರು. 6 ವಿಕೆಟ್ ಕಳೆದುಕೊಂಡ ಗುಜರಾತ್ ತಂಡ 135 ರನ್ ಗಳಿಸಿತು.
ಲಕ್ನೋ ಪರ ಕೃನಾಲ್ ಪಾಂಡ್ಯ ಮತ್ತು ಮಾರ್ಕಸ್ ಸ್ಟೋನಿಸ್ ತಲಾ ಎರಡು ಹಾಗೂ ನವೀನ್-ಉಲ್-ಹಕ್, ಅಮಿತ್ ಮಿಶ್ರಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: ಚೆಪಾಕ್ನಲ್ಲಿ ಚೆನ್ನೈಗೆ ಸೂಪರ್ ಗೆಲುವು... ತವರೂರಲ್ಲಿ ಸಿಎಸ್ಕೆ ಮೇಲೆ ಅಭಿಮಾನಿಗಳ ಒಲವು - PHOTOS