ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ನ ಮುಂಬರುವ ಟಿ20 ಲೀಗ್‌ನಲ್ಲಿ ಫ್ರಾಂಚೈಸಿಯನ್ನು ನಿರ್ವಹಿಸುವ ಮಾಲೀಕತ್ವದ ಹಕ್ಕುಗಳನ್ನು ಕೋಲ್ಕತ್ತಾ ನೈಟ್‌ರೈಡರ್ಸ್ ಪಡೆದುಕೊಂಡಿದೆ. ಈ ಫ್ರಾಂಚೈಸಿ ಅಬು ಧಾಬಿಯದ್ದಾಗಿದ್ದು, ಅಬುಧಾಬಿ ನೈಟ್ ರೈಡರ್ಸ್ ಎಂದು ಹೆಸರಿಡಲಾಗಿದೆ. ಜೂಹಿ ಚಾವ್ಲಾ ಮತ್ತು ಶಾರೂಖ್ ಖಾನ್ ನೇತೃತ್ವದ ನೈಟ್‌ರೈಡರ್ಸ್ ಗ್ರೂಪ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಮತ್ತು ಮೇಜರ್ ಕ್ರಿಕೆಟ್ ಲೀಗ್ (ಎಂಎಲ್‌ಸಿ)ನಲ್ಲಿ ಟಿ20 ಫ್ರಾಂಚೈಸಿಗಳನ್ನು ಹೊಂದಿದೆ. ಈಗ ನೈಟ್ ರೈಡರ್ಸ್ ಗ್ರೂಪ್‌ನಿಂದ ವಿಶ್ವಾದ್ಯಂತ ನಾಲ್ಕನೇ ಟಿ 20 ಫ್ರಾಂಚೈಸ್ ಖರೀದಿಯಾಗಿದೆ.
-
Excited to be a part of this journey! 💜 https://t.co/FxeiGq4j3O
— KolkataKnightRiders (@KKRiders) May 12, 2022 " class="align-text-top noRightClick twitterSection" data="
">Excited to be a part of this journey! 💜 https://t.co/FxeiGq4j3O
— KolkataKnightRiders (@KKRiders) May 12, 2022Excited to be a part of this journey! 💜 https://t.co/FxeiGq4j3O
— KolkataKnightRiders (@KKRiders) May 12, 2022
'ಹಲವು ವರ್ಷಗಳಿಂದ ನಾವು ನೈಟ್‌ರೈಡರ್ಸ್ ಬ್ರ್ಯಾಂಡ್ ಅನ್ನು ಜಾಗತಿಕವಾಗಿ ವಿಸ್ತರಿಸುತ್ತಿದ್ದೇವೆ. ಯುಎಇಯಲ್ಲಿ ನಡೆಯುವ ಟಿ20 ಕ್ರಿಕೆಟ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆವು. ಈ ಲೀಗ್‌ನ ಭಾಗವಾಗಲು ಉತ್ಸುಕರಾಗಿದ್ದೇವೆ. ಇಲ್ಲಿ ನಿಸ್ಸಂದೇಹವಾಗಿ ನಾವು ದೊಡ್ಡ ಯಶಸ್ಸು ಪಡೆಯುತ್ತೇವೆ' ಎಂದು ಶಾರುಖ್ ಖಾನ್ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ವಿರುದ್ಧ ಸೋತ ಚೆನ್ನೈ.. ಪ್ಲೇ- ಆಫ್ ರೇಸ್ನಿಂದ ಹಾಲಿ ಚಾಂಪಿಯನ್ಸ್ ಔಟ್
ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಪ್ರಧಾನ ಕಾರ್ಯದರ್ಶಿ ಮುಬಾಶಿರ್ ಉಸ್ಮಾನಿ ಮಾತನಾಡಿ, 'ನೈಟ್ ರೈಡರ್ಸ್ ಗ್ರೂಪ್ ಅನ್ನು ಈ ಲೀಗ್‌ನೊಂದಿಗೆ ಸಂಯೋಜಿಸಲು ನಾವು ಸಂತೋಷಪಡುತ್ತೇವೆ. ಇದು ಅಸೋಸಿಯೇಷನ್ ನೈಟ್ ರೈಡರ್ಸ್ ಬ್ರ್ಯಾಂಡ್ ಮತ್ತು ಲೀಗ್ ಎರಡಕ್ಕೂ ಪರಸ್ಪರ ಪ್ರಯೋಜನಕಾರಿಯಾಗಿದೆ' ಎಂದರು.
ಯುಎಇ ಟಿ20 ಲೀಗ್‌ನ ಇತರ ತಂಡದ ಮಾಲೀಕರೆಂದರೆ ಅದಾನಿ ಗ್ರೂಪ್, ಕ್ಯಾಪ್ರಿ ಗ್ಲೋಬಲ್, ಲ್ಯಾನ್ಸರ್ ಕ್ಯಾಪಿಟಲ್, ರಿಲಯನ್ಸ್ ಸ್ಟ್ರಾಟೆಜಿಕ್ ಬ್ಯುಸಿನೆಸ್ ವೆಂಚರ್ಸ್ ಲಿಮಿಟೆಡ್ (ಮುಂಬೈ ಇಂಡಿಯನ್ಸ್ ಮಾಲೀಕರು) ಮತ್ತು ಜಿಎಂಆರ್ ಗ್ರೂಪ್ (ದೆಹಲಿ ಕ್ಯಾಪಿಟಲ್ಸ್ ಮಾಲೀಕರು). ಯುಎಇ ಟಿ20 ಲೀಗ್‌ನಲ್ಲಿ ಆರು ಫ್ರಾಂಚೈಸಿ ತಂಡಗಳು ಈ ವರ್ಷ ನಡೆಯಲಿರುವ 34 ಪಂದ್ಯಗಳಲ್ಲಿ ಸ್ಪರ್ಧಿಸಲಿವೆ.