ETV Bharat / sports

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಕೆಎಲ್​ ರಾಹುಲ್​ ಹೊರಕ್ಕೆ

ಆರ್​ಸಿಬಿ ಪಂದ್ಯದಲ್ಲಿ ಫೀಲ್ಡಿಂಗ್​ ವೇಳೆ ಗಾಯಗೊಂಡ ಕೆಎಲ್​ ರಾಹುಲ್​ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ನಿಂದ ಹೊರಗುಳಿಯಲಿದ್ದಾರೆ.

K.L. Rahul likely to miss World Test Championship Final after being ruled out of IPL 2023: Report
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಕೆಎಲ್​ ರಾಹುಲ್​ ಹೊರಕ್ಕೆ
author img

By

Published : May 5, 2023, 6:09 PM IST

ಮುಂಬೈ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎದುರಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಲಕ್ನೋ ಸೂಪರ್​ ಜೈಂಟ್ಸ್​ ನಾಯಕ ಕೆಎಲ್​ ರಾಹುಲ್ ಈ ಆವೃತ್ತಿಯ ಐಪಿಎಲ್​ನಿಂದ ಸಂಪೂರ್ಣ ಹೊರಗುಳಿಯಲಿದ್ದಾರೆ. ಇದರ ಜೊತೆಗೆ ಜೂನ್ 7-11 ರವರೆಗೆ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಿಂದಲೂ ರಾಹುಲ್​ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

ಆರ್​ಸಿಬಿ ಎದುರಿನ ಪಂದ್ಯದ ನಂತರ ಲಕ್ನೋ ಚೆನ್ನೈಯನ್ನು ಎದುರಿಸಿತ್ತು. ಆ ಪಂದ್ಯದ ನಾಯಕತ್ವವನ್ನು ಕೃನಾಲ್​ ಪಾಂಡ್ಯಗೆ ವಹಿಸಿಕೊಡಲಾಗಿತ್ತು. ಈ ವೇಳೆ, ಬಿಸಿಸಿಐ ಅಧಿಕಾರಿಗಳು ಜಯದೇವ್​ ಉನಾದ್ಕತ್​ ಮತ್ತು ಕೆಎಲ್​ ರಾಹುಲ್​ ಚೆನ್ನೈ ಪಂದ್ಯದ ನಂತರ ಮುಂಬೈನಲ್ಲಿ ಸ್ಕ್ಯಾನಿಂಗ್​ಗೆ ಒಳಗಾಗಲಿದ್ದಾರೆ. ನಂತರ ಅವರ ಸ್ಥಿತಿ ಆಧರಿಸಿ ಮುಂಬರುವ ಪಂದ್ಯಗಳಲ್ಲಿ ಭಾಗವಹಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದರು.

ಮಾಧ್ಯಮ ಒಂದರ ವರದಿಯ ಪ್ರಕಾರ ಕೆ ಎಲ್​ ರಾಹುಲ್​ ಮತ್ತು ಉನಾದ್ಕತ್​ ಮುಂಬೈನಲ್ಲಿ ಸ್ಕ್ಯಾನ್​ಗೆ ಒಳಪಡಿಸಲಾಗಿದೆ. ಅದರಂತೆ ರಾಹುಲ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಿಂದ ಹೊರಗುಳಿಯಲಿದ್ದಾರೆ. ಐಪಿಎಲ್​ ಮುಗಿದ 9 ದಿನಗಳಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ನಡೆಯಲಿದ್ದು, ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ಕೆಎಲ್​ ರಾಹುಲ್​ ಅವರನ್ನು ಶ್ರೀಕರ್​ ಭರತ್​ ಬದಲಿ ವಿಕೆಟ್​ ಕೀಪರ್​ ಆಗಿ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ರಾಹುಲ್​ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿಲಿದ್ದಾರೆ.

ಲಕ್ನೋ ಸೂಪರ್​ ಜೈಂಟ್ಸ್​ನ ಮ್ಯಾನೇಜ್‌ಮೆಂಟ್ ಅಥವಾ ಬಿಸಿಸಿಐ ಯಾವುದೇ ಔಪಚಾರಿಕ ಹೇಳಿಕೆಯನ್ನು ನೀಡದ ಕಾರಣ ರಾಹುಲ್ ಅವರ ಗಾಯದ ಸ್ವರೂಪವು ಕೇವಲ ಊಹಾಪೋಹದ ವಿಷಯವಾಗಿದೆ. ಅವರು ಮಂಡಿರಜ್ಜು ಅಥವಾ ಸೊಂಟದ ಗಾಯದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೇವಲ 10 ತಿಂಗಳ ಹಿಂದೆ, ರಾಹುಲ್ ಅವರು ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರ ಮುಂದಿನ ಆಟದ ಬಗ್ಗೆ ಈ ಅಂಶಗಳನ್ನು ಗಮನಕ್ಕೆ ತೆಗೆದು ಕೊಂಡು ಅವರ ಫಿಟ್​ನೆಸ್​ ಬಗ್ಗೆ ಹೇಳಲಾಗುತ್ತದೆ ಎಂದು ವರದಿಯಾಗಿದೆ.

ಉನದ್ಕತ್ ಅವರು ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಅಲ್ಲಿದ್ದ ಹಗ್ಗಕ್ಕೆ ಕಾಲು ಸಿಕ್ಕಿಹಾಕಿಕೊಂಡು ನೆಲಕ್ಕೆ ಬಿದ್ದಿದ್ದರು. ಈ ವೇಳೆ, ಅವರ ಎಡ ಮೊಣಕೈ ಮತ್ತು ಭುಜದ ಮೇಲೆ ಗಂಭಿರವಾದ ಗಾಯವಾಗಿತ್ತು. ಇದರಿಂದ ಅವರು ಪಂದ್ಯದಿಂದ ಹೊರಗುಳಿದಿದ್ದರು.

ಇಬ್ಬರು ಆಟಗಾರರು ವಿಶ್ವ ಟೆಸ್ಟ್​ ಚಾಂಪಿಯನ್​ಶೀಪ್​ನಲ್ಲಿ ಭಾಗವಹಿಸಲಿರುವ ಕಾರಣ ಬಿಸಿಸಿಐ ಬದಲಿ ಪ್ಲೇಯರ್​ಗಳನ್ನು ಅವರ ಸ್ಕ್ಯಾನಿಂಗ್​ ವರದಿಯ ನಂತರ ಪ್ರಕಟಿಸುವ ಸಾಧ್ಯತೆ ಇದೆ. ಇಶಾನ್ ಕಿಶನ್ ಈ ಮೊದಲೇ ಭಾರತ ತಂಡವನ್ನು ಪ್ರತಿನಿಧಿಸಿದ್ದರಿಂದ ರಾಹುಲ್​ ಬದಲಿ ಅವಕಾಶ ಅವರಿಗೆ ಸಿಗುವ ಸಾಧ್ಯತೆ ಇದೆ. ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್​ ಸಹ ರೇಸ್​ನಲ್ಲಿದ್ದಾರೆ.

ಮೇ 21ಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಲೀಗ್ ಹಂತದ ಪಂದ್ಯಗಳು ಮುಗಿಯಲಿದೆ. ಪ್ಲೇ ಆಫ್​ ತಂಡಗಳಲ್ಲಿನ ಆಟಗಾರರು ಬಿಟ್ಟು ಮಿಕ್ಕ ಡಬ್ಲ್ಯೂಟಿಸಿಯ ತಂಡದ ಆಟಗಾರರು ಮೇ 23ಕ್ಕೆ ಲಂಡನ್​ ತೆರಳಲಿದ್ದಾರೆ. ಚೇತೇಶ್ವರ ಪೂಜಾರ ಅವರು ಈಗಾಗಲೇ ಲಂಡನ್​ನಲ್ಲಿ ಕೌಂಟಿ ಕ್ರಿಕೆಟ್​ ಆಡುತ್ತಿದ್ದಾರೆ. ಫೈನಲ್ಸ್​ ನಂತರ ಉಳಿದ ಆಟಗಾರರು ತೆರಳಲಿದ್ದಾರೆ.

ಇದನ್ನೂ ಓದಿ: IPL 2023: ಹೈದರಾಬಾದ್ ವಿರುದ್ಧ 5 ರನ್​ಗಳಿಂದ ಗೆದ್ದ ಕೋಲ್ಕತ್ತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.