ETV Bharat / sports

ಸುಯಾಶ್ ಹೋರಾಟ ಮನೋಭಾವದ ಮುಂದೆ ಅನುಭವ ಅಮುಖ್ಯ: ಕೆಕೆಆರ್​ ಕೋಚ್​

author img

By

Published : Apr 7, 2023, 5:18 PM IST

ಚೊಚ್ಚಲ ಪಂದ್ಯದಲ್ಲಿಯೇ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ಸುಯಶ್ ಶರ್ಮಾ ಬಗ್ಗೆ ಕೆಕೆಆರ್​ ಕೋಚ್​ ಚಂದ್ರಕಾಂತ್ ಪಂಡಿತ್ ಮೆಚ್ಚುಗೆಯ ಮಾತುಗಳನ್ನಾಡಿದರು.

KKR coach Chandrakant Pandit praise Suyash Sharma
"ಸುಯಾಶ್ ಶರ್ಮಾ ಹೊರಾಟದ ಮನೋಭಾವದ ಮುಂದೆ ಅನುಭವ ಮುಖ್ಯವಲ್ಲ": ಕೆಕೆಆರ್​ ಕೋಚ್​ ಚಂದ್ರಕಾಂತ್ ಪಂಡಿತ್

ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ (ಕೆಕೆಆರ್)​ ಪರ ಪಾದಾರ್ಪಣೆ ಮಾಡಿದ್ದ ಸುಯಾಶ್ ಶರ್ಮಾ ಎಂಬ 19 ವರ್ಷದ ಕ್ರಿಕೆಟ್‌ ಪ್ರತಿಭೆ ಪರಿಣಾಮಕಾರಿ ಬೌಲಿಂಗ್ ಮೂಲಕ ಮಿಂಚಿ ಎಲ್ಲರ ಗಮನ ಸೆಳೆದಿದ್ದರು. ಆರ್​ಸಿಬಿಯನ್ನು 123 ರನ್​ಗೆ ಕಟ್ಟಿಹಾಕುವಲ್ಲಿ ಈ ಯುವ ವೇಗಿಯ ಪಾಲುದಾರಿಕೆಯೂ ಹೆಚ್ಚಿತ್ತು. ಕೆಕೆಆರ್ ಕೋಚ್ ಚಂದ್ರಕಾಂತ್ ಪಂಡಿತ್ ಪ್ರಥಮ ಪಂದ್ಯದಲ್ಲೇ ಸುಯಶ್ ಶರ್ಮಾ ಬೌಲಿಂಗ್​ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ವರುಣ್ ಚಕ್ರವರ್ತಿ ಮತ್ತು ಸುಯಶ್ ಶರ್ಮಾ ನೇತೃತ್ವದ ಕೆಕೆಆರ್ ಸ್ಪಿನ್ನರ್‌ಗಳ ಅಮೋಘ ಪ್ರದರ್ಶನದ ನೆರವಿನಿಂದ ಆತಿಥೇಯ ತಂಡ ಮೊದಲ ಗೆಲುವು ದಾಖಲಿಸಿದೆ. ರಾಣಾ ನಾಯಕತ್ವದಡಿ ತವರಿನಲ್ಲಿ ತಂಡಕ್ಕೆ ಸಿಕ್ಕ ಈ ಸೀಸನ್ನಿನ ಮೊದಲ ಗೆಲುವಿದು. ಆರ್​ಸಿಬಿ 81 ರನ್‌ಗಳ ಹೀನಾಯ ಸೋಲು ಕಂಡಿತು.

ಸುಯಶ್​ ಶರ್ಮಾ ಮೊದಲ ಪಂದ್ಯದಲ್ಲಿ 4 ಓವರ್​ ಮಾಡಿ 30 ರನ್​ ಬಿಟ್ಟುಕೊಟ್ಟು 3 ವಿಕೆಟ್​ ಕಬಳಿಸಿದರು. ಆರ್​ಸಿಬಿ ಫಿನಿಶರ್​ ಎಂದೇ ಕರೆಯಲ್ಪಡುವ ದಿನೇಶ್​ ಕಾರ್ತಿಕ್​, ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬಂದ ಅನುಜ್ ರಾವತ್ ಹಾಗೂ ಬೌಲರ್​ ಕರಣ್​ ಶರ್ಮಾರ ವಿಕೆಟ್‌ನ್ನು ಇವರು​ ಪಡೆದರು.

"ಸುಯಶ್ ಅವರು ಟ್ರಯಲ್ ಪಂದ್ಯಗಳಲ್ಲಿ ಉತ್ತಮವಾಗಿ ಬೌಲಿಂಗ್​ ಮಾಡಿದ್ದನ್ನು ಕಂಡಿದ್ದೇನೆ. ಉತ್ತಮ ವೇಗವನ್ನು ಪಿಚ್​ನಲ್ಲಿ ಅವರು ತೋರುತ್ತಾರೆ, ಅವರ ಬಾಲ್​ಗೆ ಬ್ಯಾಟ್​ ಇಡುವುದು ಕಷ್ಟ. ಆತನಿಗೆ ಅನುಭವದ ಕೊರತೆ ಇರಬಹುದು, ಆದರೆ ಹೋರಾಟದ ಮನೋಭಾವ ನಿನ್ನೆಯ ಪಂದ್ಯದಲ್ಲಿ ಕಂಡುಬಂತು" ಎಂದು ಕೋಚ್ ಚಂದ್ರಕಾಂತ್ ಪಂಡಿತ್ ಹೇಳಿದ್ದಾರೆ.

"ಇದೊಂದು ಉತ್ತಮ ಗೆಲುವು. ಎಲ್ಲಾ ಆಟಗಾರರು ತಮ್ಮ ಪಾತ್ರವನ್ನು ಸಮರ್ಥವಾಗಿ ತೋರಿದ್ದಾರೆ. ಆರಂಭಿಕ ಹಂತದಲ್ಲಿ ವಿಕೆಟ್ ಕಳೆದುಕೊಂಡರೂ 200 ಪ್ಲಸ್ ಗಳಿಸಲು ಸಾಧ್ಯವಾಯಿತು. ಶಾರ್ದೂಲ್ ಮತ್ತು ರಿಂಕು ಸಿಂಗ್ ಜೊತೆಯಾಟ ತಂಡಕ್ಕೆ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಸಹಕರಿಸಿತು. ಪಿಚ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಿದ್ದೆವು, ಅದರಂತೆ ನಮಗೆ ಯಶಸ್ಸು ಸಿಕ್ಕಿದೆ" ಎಂದು ಪಂಡಿತ್​ ಹೇಳಿದರು.

ಕೆಕೆಆರ್​ -ಆರ್​ಸಿಬಿ ಪಂದ್ಯ ಹೀಗಿತ್ತು..: ಟಾಸ್ ಸೋತು ಬ್ಯಾಟಿಂಗ್​ ಆರಂಭಿಸಿದ್ದ ಕೆಕೆಆರ್​ಗೆ ಆರಂಭಕ ಆಘಾತ ಎದುರಾಗಿತ್ತು. ವೆಂಕಟೇಶ್​ ಅಯ್ಯರ್​ ಮೊದಲ ವಿಕೆಟ್​ ಆಗಿ ಪೆವಿಲಿಯನ್​ಗೆ ಮರಳಿದರೆ ಅವರ ಬೆನ್ನಲ್ಲೆ ಮಂದೀಪ್​ ಸಿಂಗ್​ ಮತ್ತು ನಾಯಕ ನಿತೀಶ್​ ರಾಣ ತೆರಳಿದ್ದರು. ಆರಂಭಿಕ ಗುರ್ಬಾಜ್ ಅರ್ಧಶತಕದ ಮೂಲಕ ನೆರವಾದರೆ, ರಿಂಕು ಸಿಂಗ್​ ಮತ್ತು ಶಾರ್ದೂಲ್​ ಠಾಕೂರ್​ ಭರ್ಜರಿ ಬ್ಯಾಟಿಂಗ್​ ಮಾಡಿ ಆರ್​ಸಿಬಿಗೆ 205 ರನ್​ ಗುರಿ ನೀಡಿದರು.

ಗುರಿ ಬೆನ್ನತ್ತಿದ ಆರ್​ಸಿಬಿ ಬ್ಯಾಟಿಂಗ್​ ವೈಫಲ್ಯ ಕಂಡಿತು. 17.4 ಓವರ್​ ವರೆಗೆ ಹೋರಾಡಿ 123 ರನ್​ಗೆ ಸರ್ವಪತನ ಕಂಡಿತು. ಕೆಕೆಆರ್​ನ ವರುಣ್​ ಚಕ್ರವರ್ತಿ 4, ಸುಯಾಶ್ ಶರ್ಮಾ 3, ಸುನಿಲ್​ ನರೈನ್​ 2 ಮತ್ತು ಶಾರ್ದೂಲ್​ ಠಾಕೂರ್​ 1 ವಿಕೆಟ್​ ಪಡೆದು ಮಿಂಚಿದರು.

ಇದನ್ನೂ ಓದಿ: IPL: ಆರ್​ಸಿಬಿ ಸೇರಿದ ವೇಯ್ನ್ ಪಾರ್ನೆಲ್, ವೈಶಾಕ್ ವಿಜಯ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.