ETV Bharat / sports

2021ರ ಐಪಿಎಲ್​ನಿಂದ ಹಿಂದೆ ಸರಿದ ಜೋಶ್ ಹೆಜಲ್​ವುಡ್

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರವಾಗಿ ಐಪಿಎಲ್​ನಲ್ಲಿ ಆಡುತ್ತಿದ್ದ ವೇಗಿ ಜೋಶ್ ಹೆಜಲ್​ವುಡ್ ಈ ವರ್ಷ ಐಪಿಎಲ್ ನಿಂದ ಹಿಂದೆ ಸರಿಯಲು ಮುಂದಾಗಿದ್ದು, ತಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ನಿರ್ಧರಿಸಿದ್ದಾರೆ.

ಜೋಶ್ ಹೆಜಲ್​ವುಡ್
ಜೋಶ್ ಹೆಜಲ್​ವುಡ್
author img

By

Published : Apr 1, 2021, 10:13 AM IST

ಸಿಡ್ನಿ: ಕೊನೆಯ ಹಂತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ (ಐಪಿಎಲ್) ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆಟಗಾರ ಜೋಶ್ ಹೆಜಲ್​ವುಡ್ ಹಿಂದೆ ಸರಿದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರವಾಗಿ ಈ ಹಿಂದೆ ಮೂರು ಪಂದ್ಯಗಳನ್ನು ಐಪಿಎಲ್​ನಲ್ಲಿ ಆಡಿದ್ದ ವೇಗಿ ಜೋಶ್ ಹೆಜಲ್​ವುಡ್ ಈ ವರ್ಷ ಐಪಿಎಲ್ ಆಟವಾಡಲು ಸಿದ್ಧರಾಗಿ ಭಾರತಕ್ಕೆ ತೆರಳಲು ಸಜ್ಜಾಗಿದ್ದರು. ಆದರೆ, ವೇಗಿ ತಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ನಿರ್ಧರಿಸಿದ್ದು, ಈ ವರ್ಷದ ಐಪಿಎಲ್‌ ಮಿಸ್ ಮಾಡಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಹೆಜಲ್​ವುಡ್, ನಾನು ಕ್ರಿಕೆಟ್‌ನಿಂದ ಕೆಲ ದಿನಗಳು ವಿಶ್ರಾಂತಿ ಪಡೆಯಲು ಬಯಸಿದ್ದೇನೆ. ಆಸ್ಟ್ರೇಲಿಯಾದಲ್ಲಿ ಸ್ವಲ್ಪ ಸಮಯ ಕಳೆಯಲು ನಿರ್ಧರಿಸಿದ್ದೇನೆ. ಮುಂದೆ ಚಳಿಗಾಲ ಬರಲಿದ್ದು, ಟಿ- 20 ವಿಶ್ವಕಪ್​ನಲ್ಲಿ ಆಡುವುದಕ್ಕೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧನಾಗುತ್ತೇನೆ ಎಂದಿದ್ದಾರೆ.

ಬುಧವಾರ ಮತ್ತೋರ್ವ ಆಸ್ಟ್ರೇಲಿಯಾ ಆಟಗಾರ ಸನ್​ರೈಸರ್ಸ್ ಹೈದರಾಬಾದ್ ತಂಡದ ಆಲ್​ರೌಂಡರ್ ಮಿಚೆಲ್ ಮಾರ್ಷ್ ಕೂಡ ಈ ಬಾರಿ ಐಪಿಎಲ್ ಆಡುವುದಿಲ್ಲ ಎಂದಿದ್ದಾರೆ. ಸುದೀರ್ಘ ಕಾಲ ಬಯೋ ಬಬಲ್​ನಲ್ಲಿ ಕಾಲ ಕಳೆಯುವುದು ಕಷ್ಟಕರ. ಹೀಗಾಗಿ ಈ ಬಾರಿಯ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ ಎಂದು ಮಿಚೆಲ್ ಮಾರ್ಷ್​ ತಿಳಿಸಿದ್ದರು. ಈ ಬೆನ್ನಲ್ಲೇ ಇದೀಗ ವೇಗಿ ಜೋಶ್ ಹೆಜಲ್​ವುಡ್ ಕೂಡ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.