ಹೈದರಾಬಾದ್: ಗುರುವಾರ ಈಡನ್ ಗಾರ್ಡನ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 9 ವಿಕೆಟ್‌ಗಳ ಗೆಲುವು ದಾಖಲಿಸಿತು. ಕೆಕೆಆರ್ ನೀಡಿದ್ದ 150 ರನ್‌ಗಳ ಗುರಿ ಹೊಂದಿದ್ದ ರಾಜಸ್ಥಾನ ಕೇವಲ 13.1 ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ರಾಜಸ್ಥಾನದ ಬ್ಯಾಟ್ಸ್‌ಮನ್‌ಗಳ ಪೈಕಿ ಜೈಶ್ವಾಲ್ (47 ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ ಔಟಾಗದೇ 98) ಮತ್ತು ಸ್ಯಾಮ್ಸನ್ (ಅಜೇಯ 48) ಉತ್ತಮ ಪ್ರದರ್ಶನ ತೋರಿದರು. ಈ ಪಂದ್ಯದಲ್ಲಿ ರಾಜಸ್ಥಾನದ ಸ್ಟಾರ್ ಓಪನರ್ ಜೋಸ್ ಬಟ್ಲರ್ ಶೂನ್ಯಕ್ಕರ ರನ್ ಔಟ್ ಅದರು.
ನಿನ್ನೆಯ ಈ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾಸ್ ಬಟ್ಲರ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮ್ಯಾಚ್ ರೆಫರಿ ಬಟ್ಲರ್ಗೆ ದಂಡ ವಿಧಿಸಿದ್ದಾರೆ. ಪಂದ್ಯದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ ಐಪಿಎಲ್ ಮಂಡಳಿ ತಿಳಿಸಿದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧ ಎಸಗಿದ್ದಾರೆ ಎಂದು ದಂಡ ವಿಧಿಸಲಾಗಿದೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಳಿಗೆ, ಪಂದ್ಯದ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ.
ಲೆವೆಲ್ 1 ಅಪರಾಧಗಳು: ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಲೆವೆಲ್ 1 ಅಪರಾಧಗಳು ಸಾಮಾನ್ಯವಾಗಿ ಕ್ರಿಕೆಟ್ ಉಪಕರಣಗಳು, ಆಟಗಾರರ ಉಡುಪುಗಳು ದುರುಪಯೋಗ, ಮೌಖಿಕ ನಿಂದನೆ, ಅಂಪೈರ್ ನಿರ್ಧಾರದಲ್ಲಿ ಭಿನ್ನಾಭಿಪ್ರಾಯ, ಅಶ್ಲೀಲ, ಆಕ್ಷೇಪಾರ್ಹ ಅಥವಾ ಅವಮಾನಕರವಾದ ಭಾಷೆಯನ್ನು ಬಳಸುವುದು/ಅಶ್ಲೀಲ ಸನ್ಹೆ ಮಾಡುವುದು, ಆಟಗಾರರ ವಿರುದ್ಧ ಅಸಭ್ಯವರ್ತನೆ ಅಥವಾ ಅಪಹಾಸ್ಯದಿಂದ ವರ್ತಿಸುವುದು ಇದರ ಅಡಿ ಬರುತ್ತದೆ.
ಈ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮ್ಯಾಚ್ ರೆಫರಿ ಬಟ್ಲರ್ ಗೆ ದಂಡ ವಿಧಿಸಿದ್ದಾರೆ. ಆದರೆ ಯಾವ ರೀತಿಯ ವರ್ತನೆಗೆ ಅವರಿಗೆ ದಂಡ ವಿಧಿಸಲಾಗಿದೆ ಎಂಬುದು ಮಾತ್ರ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಇದನ್ನೂ ಓದಿ: 6,6,4,4,2,4,1,4,6,4,4,4,1: ಯಶಸ್ವಿ ಜೈಸ್ವಾಲ್ ದಾಖಲೆಯ ಅರ್ಧಶತಕ- ಕ್ರಿಕೆಟ್ ದಿಗ್ಗಜರ ಗುಣಗಾನ