16ನೇ ಆವೃತ್ತಿಯ ಐಪಿಎಲ್ ವಿಜೇತರ ಘೋಷಣೆಗೆ ಇನ್ನೂ ನಾಲ್ಕೇ ಮೆಟ್ಟಿಲು ಬಾಕಿ ಉಳಿದಿದೆ. ನಿನ್ನೆ ನಡೆದ ಗ್ರೂಪ್ ಹಂತದ ಕೊನೆಯ ಪಂದ್ಯಗಳಲ್ಲಿ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದು ಪ್ಲೇಆಫ್ಗೇರಿದರೆ, ಗುಜರಾತ್ ಟೈಟಾನ್ಸ್ ವಿರುದ್ಧ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೇಸ್ನಿಂದ ಹೊರಬಿದ್ದಿತು. ಇದೀಗ ಪ್ಲೇಆಫ್ ಅಖಾಡಕ್ಕೆ ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ತಂಡಗಳು ಅಧಿಕೃತ ಪ್ರವೇಶ ಪಡೆದವು. ನಾಳೆಯಿಂದ ಪ್ಲೇಆಫ್ ಪಂದ್ಯಗಳು ನಡೆಯಲಿವೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇಆಫ್ಗೆ ಅರ್ಹತೆ ಪಡೆಯಿತು. ತಂಡ ಆಡಿದ 14 ಪಂದ್ಯಗಳಲ್ಲಿ 10 ಗೆದ್ದು 4 ರಲ್ಲಿ ಸೋಲು ಕಂಡು 20 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಮೊದಲ ಕ್ವಾಲಿಫೈಯರ್ಗೆ ತಲುಪಿತು.
-
𝗔𝗻𝗱 𝘁𝗵𝗲𝗻 𝘁𝗵𝗲𝗿𝗲 𝘄𝗲𝗿𝗲 𝗳𝗼𝘂𝗿 😉
— IndianPremierLeague (@IPL) May 21, 2023 " class="align-text-top noRightClick twitterSection" data="
A round of applause for the 🔝 four teams who have made it to the #TATAIPL 2023 Playoffs 👏🏻👏🏻 pic.twitter.com/Lc5l19t4eE
">𝗔𝗻𝗱 𝘁𝗵𝗲𝗻 𝘁𝗵𝗲𝗿𝗲 𝘄𝗲𝗿𝗲 𝗳𝗼𝘂𝗿 😉
— IndianPremierLeague (@IPL) May 21, 2023
A round of applause for the 🔝 four teams who have made it to the #TATAIPL 2023 Playoffs 👏🏻👏🏻 pic.twitter.com/Lc5l19t4eE𝗔𝗻𝗱 𝘁𝗵𝗲𝗻 𝘁𝗵𝗲𝗿𝗲 𝘄𝗲𝗿𝗲 𝗳𝗼𝘂𝗿 😉
— IndianPremierLeague (@IPL) May 21, 2023
A round of applause for the 🔝 four teams who have made it to the #TATAIPL 2023 Playoffs 👏🏻👏🏻 pic.twitter.com/Lc5l19t4eE
ಇನ್ನು, ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ 8 ಗೆಲುವು, 5 ಸೋಲು, 1 ಫಲಿತಾಂಶವಿಲ್ಲದೇ ಒಟ್ಟು 17 ಅಂಕಗಳ ಸಮೇತ 2ನೇ ತಂಡವಾಗಿ ಮೊದಲನೇ ಕ್ವಾಲಿಫೈಯರ್ ತಲುಪಿದೆ. ಹೀಗಾಗಿ ತಂಡಕ್ಕೆ ಪ್ಲೇಆಫ್ನಲ್ಲಿ ಗುಜರಾತ್ ಎದುರಾಗಲಿದೆ. ನಾಳೆ (ಮೇ 23 ರಂದು) ಮೊದಲ ಕ್ವಾಲಿಫೈಯರ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ರಾತ್ರಿ 7.30 ಕ್ಕೆ ನಡೆಯಲಿದೆ.
ಎಲಿಮಿನೇಟ್ ಆಗೋರ್ಯಾರು?: ಕೆಎಲ್ ರಾಹುಲ್ ಗಾಯಗೊಂಡ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಉತ್ತಮವಾಗಿ ನಡೆಸುತ್ತಿರುವ ಕೃನಾಲ್ ಪಾಂಡ್ಯ ತಂಡವನ್ನು ಎರಡನೇ ಬಾರಿಗೆ ನಾಕೌಟ್ ಹಂತಕ್ಕೆ ತಂದಿದ್ದಾರೆ. 14 ಪಂದ್ಯಗಳಿಂದ 17 ಅಂಕ ಪಡೆದಿರುವ ಲಖನೌ, 8 ಗೆಲುವು, 5 ಸೋಲು ಕಂಡು, ಮೂರನೇ ತಂಡವಾಗಿ ಪ್ಲೇಆಫ್ನ ಎಲಿಮಿನೇಟರ್ ಹಂತಕ್ಕೆ ಬಂದಿದೆ. ಇತ್ತ ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡ ಕೊನೆ ಕ್ಷಣದಲ್ಲಿ ನಡೆಸಿದ ಹೋರಾಟದಿಂದ ಪ್ಲೇಆಫ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು.
-
For one last time this season 🙌
— IndianPremierLeague (@IPL) May 21, 2023 " class="align-text-top noRightClick twitterSection" data="
Here’s how the Points Table stands after 7️⃣0️⃣ matches of #TATAIPL 2023
Did your favourite team qualify for the playoffs? 🤔 pic.twitter.com/972M99Mxts
">For one last time this season 🙌
— IndianPremierLeague (@IPL) May 21, 2023
Here’s how the Points Table stands after 7️⃣0️⃣ matches of #TATAIPL 2023
Did your favourite team qualify for the playoffs? 🤔 pic.twitter.com/972M99MxtsFor one last time this season 🙌
— IndianPremierLeague (@IPL) May 21, 2023
Here’s how the Points Table stands after 7️⃣0️⃣ matches of #TATAIPL 2023
Did your favourite team qualify for the playoffs? 🤔 pic.twitter.com/972M99Mxts
ಮುಂಬೈ ತಾನಾಡಿದ 14 ಪಂದ್ಯಗಳಲ್ಲಿ 16 ಅಂಕ ಗಳಿಸಿದೆ. ಇದರಲ್ಲಿ 8 ಗೆಲುವು, 6 ಸೋಲು ಕಂಡಿದೆ. ಎಲಿಮಿನೇಟರ್ ಹೋರಾಟದಲ್ಲಿ ಮುಂಬೈ ಮತ್ತು ಲಕ್ನೋ ಸೆಣಸಾಡಲಿದ್ದು, ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆದ್ದವರು ಕ್ವಾಲಿಫೈಯರ್-2 ಹಂತಕ್ಕೆ ತಲುಪಿದ್ದಾರೆ.
ಪಾಯಿಂಟ್ ಪಟ್ಟಿ: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ 20 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಸಿಎಸ್ಕೆ 17 ಅಂಕದಿಂದ ಎರಡನೇ ಸ್ಥಾನದಲ್ಲಿದೆ. ಲಕ್ನೋ (17 ಅಂಕ) ತೃತೀಯ, ಮುಂಬೈ (16 ಅಂಕ) ಐದನೇ, ರಾಜಸ್ಥಾನ ರಾಯಲ್ಸ್ (14 ಅಂಕ) ಐದನೇ ಮತ್ತು ಆರ್‌ಸಿಬಿ (14 ಅಂಕ) ಆರನೇ ಸ್ಥಾನದಲ್ಲಿವೆ. ಕೆಕೆಆರ್(12 ಅಂಕ) ಏಳನೇ ಸ್ಥಾನ ಪಡೆದರೆ, ನಂತರದಲ್ಲಿ ಪಂಜಾಬ್ ಕಿಂಗ್ಸ್ (12 ಅಂಕ), ಡೆಲ್ಲಿ ಕ್ಯಾಪಿಟಲ್ಸ್ (10 ಅಂಕ) ಮತ್ತು ಹೈದರಾಬಾದ್ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ.
ಪ್ಲೇಆಫ್ ವೇಳಾಪಟ್ಟಿ ಹೀಗಿದೆ: ಕ್ವಾಲಿಫೈಯರ್ 1: ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್- ಮೇ 23, ಮಂಗಳವಾರ ರಾತ್ರಿ 7:30, ಸ್ಥಳ- ಚಿದಂಬರಂ ಸ್ಟೇಡಿಯಂ, ಚೆನ್ನೈ
ಎಲಿಮಿನೇಟರ್: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ - ಮೇ 24, ಬುಧವಾರ ರಾತ್ರಿ 7:30, ಸ್ಥಳ ಚಿದಂಬರಂ ಸ್ಟೇಡಿಯಂ, ಚೆನ್ನೈ
ಕ್ವಾಲಿಫೈಯರ್ 2: ಕ್ವಾಲಿಫೈಯರ್ 1 ರಲ್ಲಿ ಸೋತವರ ವಿರುದ್ಧ ಎಲಿಮಿನೇಟರ್ ವಿಜೇತರು - ಮೇ 26, ಶುಕ್ರವಾರ ರಾತ್ರಿ 7:30. ಸ್ಥಳ-ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಫೈನಲ್: ಕ್ವಾಲಿಫೈಯರ್ 1 ವಿಜೇತ vs ಕ್ವಾಲಿಫೈಯರ್ 2 ವಿಜೇತ- ಮೇ 28, ಭಾನುವಾರ ರಾತ್ರಿ 7:30, ಸ್ಥಳ- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಓದಿ: 'ಈ ಸಲವೂ ಕಪ್ ನಮ್ಗಿಲ್ಲ': ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್‌ಸಿಬಿ, ಅಭಿಮಾನಿಗಳಿಗೆ ಬರೀ ನಿರಾಶೆ