ETV Bharat / sports

ಐಪಿಎಲ್​ 2021: ಮೋದಿ ಸ್ಟೇಡಿಯಂನಲ್ಲಿ ದೆಹಲಿ - ಕೋಲ್ಕತ್ತಾ ಮಧ್ಯೆ ಬಿಗ್​ ಫೈಟ್​!

author img

By

Published : Apr 29, 2021, 2:38 PM IST

ಗುಜರಾತ್​ನ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಸಂಜೆ ದೆಹಲಿ ಕ್ಯಾಪಿಟಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ.

Delhi vs Kolkata match, Delhi vs Kolkata match in Narendra Modi Stadium, Delhi vs Kolkata match in Narendra Modi Stadium at Ahmedabad, IPL 2021, IPL 2021 news, ದೆಹಲಿ ಹಾಗೂ ಕೋಲ್ಕತ್ತಾ ಮಧ್ಯೆ ಪಂದ್ಯ, ಮೋದಿ ಸ್ಟೇಡಿಯಂನಲ್ಲಿ ದೆಹಲಿ ಹಾಗೂ ಕೋಲ್ಕತ್ತಾ ಮಧ್ಯೆ ಪಂದ್ಯ, ಐಪಿಎಲ್​ 2021, ಐಪಿಎಲ್​ 2021ಸುದ್ದಿ,
ಕೃಪೆ: ಟ್ವಿಟ್ಟರ್​

ಅಹಮದಾಬಾದ್​: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 25ನೇ ಪಂದ್ಯದಲ್ಲಿ ಇಂದು ಸಂಜೆ ದೆಹಲಿ ಮತ್ತು ಕೋಲ್ಕತ್ತಾ ತಂಡಗಳು ಮಧ್ಯೆ ಹಣಾಹಣಿ ನಡೆಯಲಿದೆ.

ಆರ್​ಸಿಬಿ ವಿರುದ್ಧ ಒಂದು ರನ್​ಗಳ ಸೋಲುಂಡ ದೆಹಲಿ ತಂಡಕ್ಕೆ ಇಂದು ಪಂಜಾಬ್​ ವಿರುದ್ಧ ಐದು ವಿಕೆಟ್​ಗಳ ಗೆಲುವಿನ ಉತ್ಸಾಹದಲ್ಲಿರುವ ಕೋಲ್ಕತ್ತಾ ತಂಡ ಸವಾಲ್​ ಹಾಕಲಿದೆ.

ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ದೆಹಲಿ ವಿರುದ್ಧ ಐದನೇ ಸ್ಥಾನದಲ್ಲಿರುವ ಕೋಲ್ಕತ್ತಾ ಫೈಟ್​ ನೀಡಲಿದೆ. ದೆಹಲಿ ತಂಡ ಈ ಹಿಂದಿನ 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 2 ಸೋಲು ಕಂಡಿದೆ. ಅದರಂತೆ 6 ಪಂದ್ಯಗಳನ್ನಾಡಿರುವ ಕೋಲ್ಕತ್ತಾ ತಂಡ 2 ಗೆಲುವು ಸಾಧಿಸಿದ್ದು, 4 ಸೋಲು ಕಂಡಿದೆ.

ಆರ್​ಸಿಬಿ ವಿರುದ್ಧ ಸೋಲು ಕಂಡ ದೆಹಲಿಗೆ ಒಲಿಯುವುದೇ ಜಯ...?

ಹಿಂದಿನ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ದೆಹಲಿ ತಂಡಕ್ಕೆ ಇಂದು ನಡೆಯಲಿರುವ ಪಂದ್ಯದಲ್ಲಿ ಜಯ ಸಿಗುವುದೇ ಎಂಬುದು ಕಾದು ನೋಡ್ಬೇಕಾಗಿದೆ.

ದೆಹಲಿ ತಂಡ ಬ್ಯಾಟಿಂಗ್​ ವಿಭಾಗದಲ್ಲಿ ನಾಯಕ ಪಂತ್​ ಸೇರಿದಂತೆ ಪೃಥ್ವಿ ಶಾ, ಧವನ್​, ಸ್ಮೀತ್​, ಹೆಟ್ಮೇಯರ್​, ಸ್ಟೋನಿಸ್​ ಉತ್ತಮ ಬಲಿಶಾಲಿಯನ್ನು ಹೊಂದಿದೆ. ಅದರಂತೆ ಬೌಲಿಂಗ್​ ವಿಭಾಗದಲ್ಲಿ ಇಶಾಂತ್​ ಶರ್ಮಾ, ರಬಾಡಾ, ಅವೇಶ್​ ಖಾನ್​, ಮಿಶ್ರಾ, ಅಕ್ಷರ್​ ಪಟೇಲ್​ ಮತ್ತು ಸ್ಟೋನಿಸ್​ ಉತ್ತಮ ಬಲ ಹೊಂದಿದೆ.

ಪಂಜಾಬ್​ ವಿರುದ್ಧ ಗೆಲುವಿನ ಉತ್ಸಹದಲ್ಲಿರುವ ಕೋಲ್ಕತ್ತಾ

ಐದು ವಿಕೆಟ್​ಗಳ ಭರ್ಜರಿ ಜಯ ಗಳಿಸಿರುವ ಕೋಲ್ಕತ್ತಾ ತಂಡ ಈ ಪಂದ್ಯವೂ ಗೆಲ್ಲುವ ಉತ್ಸಹಾದಲ್ಲಿದೆ. ಕೋಲ್ಕತ್ತಾದ ತಂಡ ಬಲಿಷ್ಠ ಬ್ಯಾಟಿಂಗ ಆಟಗಾರರನ್ನು ಹೊಂದಿದೆ. ನಾಯಕ ಸೇರಿದಂತೆ ಒಟ್ಟು ಎಂಟು ಆಟಗಾರರು ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಾಯಕರಾಗಲಿದ್ದಾರೆ. ಬೌಲಿಂಗ್​ನಲ್ಲೂ ಸಹ ಉತ್ತಮ ಆಟಗಾರರನ್ನು ಹೊಂದಿದ್ದು, ಇಂದಿನ ಪಂದ್ಯ ರೋಚಕದಿಂದ ಕೂಡಲಿದೆ.

ಕೋಲ್ಕತ್ತಾ ತಂಡಕ್ಕೆ ಈ ಪಂದ್ಯ ಅತೀ ಮುಖ್ಯವಾಗಿದ್ದು, ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ. ಈ ಪಂದ್ಯವು ಮಧ್ಯಾಹ್ನ 7.30ಕ್ಕೆ ಆರಂಭವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.