ಚೆನ್ನೈ (ತಮಿಳುನಾಡು): ನಿತೀಶ್ ರಾಣಾ ಹಾಗು ರಾಹುಲ್ ತ್ರಿಪಾಠಿ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗು ಬೌಲರ್‌ಗಳ ಮಿಂಚಿನ ದಾಳಿಯ ಕಾರಣ ಸನ್‌ರೈಸರ್ಸ್ ವಿರುದ್ಧ ಕೊಲ್ಕತ್ತಾ ನೈಟ್‌ರೈಡರ್ಸ್ 10 ರನ್ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ನಿತೀಶ್ ರಾಣಾ ಅವರ 80 ಹಾಗೂ ರಾಹುಲ್ ತ್ರಿಪಾಠಿ ಅವರ ಆಕರ್ಷಕ 53 ರನ್ ಗಳ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 187 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.
ಈ ಗುರಿ ಬೆನ್ನಟ್ಟಿದ್ದ ಸನ್ ರೈಸರ್ಸ್ ಮನೀಶ್ ಪಾಂಡೆ 61 ಹಾಗೂ ಜಾನಿ ಬೈರ್‌ಸ್ಟೋವ್ 55 ರನ್ ಗಳ ಹೊರತಾಗಿಯೂ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಲಷ್ಟೇ ಶಕ್ತವಾಯಿತು.
ಸಂಕ್ಷಿಪ್ತ ಸ್ಕೋರ್: ಕೋಲ್ಕತಾ ನೈಟ್ ರೈಡರ್ಸ್ 20 ಓವರ್ಗಳಲ್ಲಿ 187/6 (ನಿತೇಶ್ ರಾಣಾ 80, ರಾಹುಲ್ ತ್ರಿಪಾಠಿ 53, ರಶೀದ್ ಖಾನ್ 2/24)
ಸನ್‌ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 177/5 (ಮನೀಶ್ ಪಾಂಡೆ 62 *, ಬೈರ್‌ಸ್ಟೋವ್ 55, ಪ್ರಸಿದ್ಧ್ ಕೃಷ್ಣ 2/35)
ಇದನ್ನೂ ಓದಿ : ಹೊಸ ಹುರುಪಿನಲ್ಲಿರುವ ಪಂಜಾಬ್ ಕಿಂಗ್ಸ್ಗೆ ರಾಯಲ್ಸ್ ಸವಾಲು