ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಕಾಲು ಭಾಗದಷ್ಟು ಪಂದ್ಯಗಳು ಮುಕ್ತಾಯವಾಗಿವೆ. ಈ ಸಂದರ್ಭದಲ್ಲಿ ಬಿಸಿಸಿಐ ಅಂತಿಮ ಹಂತದ ಪಂದ್ಯಗಳು ಎಲ್ಲಿ ನಡೆಯಲಿವೆ ಎಂಬ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಮೇ 26 ಮತ್ತು 28 ರಂದು ನಡೆಯಲಿರುವ ಕ್ವಾಲಿಫೈಯರ್ 2 ಮತ್ತು ಫೈನಲ್‌ಗೆ ಆತಿಥ್ಯ ವಹಿಸಲಿದೆ ಎಂದು ಬಿಸಿಸಿಐ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ಮೇ 23 ಮತ್ತು 24 ರಂದು ಕ್ರಮವಾಗಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ನಡೆಯಲಿದೆ. ಈ ಹಿಂದೆ ಲೀಗ್ನ ಡಬಲ್ ರಾಬಿನ್ ರೌಂಡ್ನ ವೇಳಾ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಪೈನಲ್ ಪಂದ್ಯ ನಡೆಯುವ ದಿನಾಂಕ ಘೋಷಣೆಯಾಗಿತ್ತಾದರೂ, ಕ್ರೀಡಾಂಗಣಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ.
-
🚨 NEWS 🚨
— IndianPremierLeague (@IPL) April 21, 2023 " class="align-text-top noRightClick twitterSection" data="
BCCI Announces Schedule and Venue Details For #TATAIPL 2023 Playoffs And Final.
Details 🔽https://t.co/JBLIwpUZyf
">🚨 NEWS 🚨
— IndianPremierLeague (@IPL) April 21, 2023
BCCI Announces Schedule and Venue Details For #TATAIPL 2023 Playoffs And Final.
Details 🔽https://t.co/JBLIwpUZyf🚨 NEWS 🚨
— IndianPremierLeague (@IPL) April 21, 2023
BCCI Announces Schedule and Venue Details For #TATAIPL 2023 Playoffs And Final.
Details 🔽https://t.co/JBLIwpUZyf
16ನೇ ಆವೃತ್ತಿಯ ಐಪಿಎಲ್ ಮಾರ್ಚ್ 31 ರಂದು ಅಹಮದಾಬಾದ್ ಕ್ರೀಡಾಂಗಣದಿಂದ ಆರಂಭವಾಗಿತ್ತು. ಉದ್ಘಾಟನಾ ಪಂದ್ಯಕ್ಕೂ ಮುನ್ನ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಮತ್ತು ಅರಿಜಿತ್ ಸಿಂಗ್ ಭರ್ಜರಿ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಮೊದಲ ಪಂದ್ಯ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಡುವೆ ನಡೆದಿತ್ತು. ಲೀಗ್ ಆರಂಭವಾದ ಕ್ರೀಡಾಂಗಣದಲ್ಲೇ ಕೊನೆಯ ಪಂದ್ಯವನ್ನೂ ಆಡಿಸಲಾಗುತ್ತಿದೆ.
2022ರ ಆವೃತ್ತಿಯಲ್ಲಿ ಕೋವಿಡ್ ಕಾರಣದಿಂದ ಇಡೀ ಲೀಗ್ ಅನ್ನು ಸೀಮಿತ ಕ್ರೀಡಾಂಗಣದಲ್ಲಿ ಆಡಿಸಲಾಗಿತ್ತು. ಮುಂಬೈ ಮತ್ತು ಪುಣೆಯಲ್ಲಿ ನಾಲ್ಕು ಸ್ಥಳಗಳಲ್ಲಿ ಆಟಗಾರರಿಗೆ ಬಯೋ ಬಬಲ್ ವ್ಯವಸ್ಥೆ ಮಾಡಿಸಿ ಆಡಿಸಲಾಗಿತ್ತು. ಈ ವರ್ಷ ಮತ್ತೆ ತವರು ಮತ್ತು ಪ್ರವಾಸಿ ಮೈದಾನದಲ್ಲಿ ಪಂದ್ಯವನ್ನು ಆಯೋಜಿಸಲಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಟೂರ್ನಿಯ ಪ್ರತಿ ಪಂದ್ಯದಲ್ಲೂ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದಾರೆ. 22ರ ಪ್ಲೇ-ಆಫ್ ಮತ್ತು ಫೈನಲ್ ಅನ್ನು ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ನಡೆಸಲಾಗಿತ್ತು.
ಪ್ರಸಕ್ತ ಆವೃತ್ತಿಯಲ್ಲಿ 10 ತಂಡಗಳಿಂದ 70 ಪಂದ್ಯಗಳನ್ನು ಆಡಿಸಲಾಗುತ್ತಿದ್ದು, ಲೀಗ್ನ ಕೊನೆಯ ಪಂದ್ಯ ಮೇ 21 ರಂದು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ.
ಗುಜರಾತ್ನಲ್ಲೇ ಫೈನಲ್ ಏಕೆ?: ಗುಜರಾತ್ನ ಮೊಟೆರಾ ಕ್ರೀಡಾಂಗಣವನ್ನು ಕೆಲ ವರ್ಷಗಳ ಹಿಂದೆ ನವೀಕರಿಸಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್ಕ್ಲೇವ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಬೇರೆ ಬೇರೆ ಕ್ರೀಡೆಗೆ ಅವಕಾಶವಿದ್ದು, ಕ್ರಿಕೆಟ್ ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಕರೆಯಲಾಗುತ್ತದೆ. ಇದು 1 ಲಕ್ಷದ 32 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಭಾರತದ ಅತಿ ದೊಡ್ಡ ಕ್ರೀಡಾಂಗಣ ಎಂಬ ಖ್ಯಾತಿಯೂ ಇದಕ್ಕಿದೆ. ಹೀಗಾಗಿ ಇಲ್ಲಿ ಅಂತಿಮ ಪಂದ್ಯ ಆಯೋಜಿಸಲಾಗಿದೆ.
ಇದನ್ನೂ ಓದಿ: ಪೊಲೀಸರಿಗೆ ಧನ್ಯವಾದ ತಿಳಿಸಿದ ಡೆಲ್ಲಿ ನಾಯಕ ಡೇವಿಡ್ ವಾರ್ನರ್