ನವದೆಹಲಿ: ಪಂದ್ಯದ ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್ 5 ಸಿಕ್ಸರ್ ಬಾರಿಸಿ ಪಂದ್ಯಕ್ಕೆ ಭರ್ಜರಿ ಟರ್ನಿಂಗ್ ನೀಡಿ ಕೆಕೆಆರ್ ತಂಡದ ಗೆಲುವಿನ ರೂವಾರಿಯಾದರು. ಈವರೆಗಿನ ಐಪಿಎಲ್ ಆವೃತ್ತಿಗಳಲ್ಲೇ 20ನೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಚೇಸ್ ಈ ಪಂದ್ಯದಲ್ಲಿ ಮೂಡಿ ಬಂದಿದೆ. ರಿಂಕು ಸಿಂಗ್ ಸತತ ಸಿಕ್ಸರ್ ಬಾರಿಸುವ ಮೂಲಕ ಈ ಹಿಂದೆ ಐಪಿಎಲ್ ಟೂರ್ನಿಯ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿದ್ದ ಕ್ರಿಸ್ ಗೇಲ್, ರಾಹುಲ್ ತೆವಾಟಿಯಾ ಮತ್ತು ರವೀಂದ್ರ ಜಡೇಜಾ ಅವರಂತಹ ಘಟಾನುಘಟಿ ಆಟಗಾರರ ಪಟ್ಟಿ ಸೇರಿದ್ದಾರೆ. ಇವರಲ್ಲಿ ಗೇಲ್ ಹಾಗೂ ರಿಂಕು ಬ್ಯಾಟ್ನಿಂದ ಸತತ ಐದು ಸಿಕ್ಸರ್ ಮೂಡಿ ಬಂದಿರುವುದು ವಿಶೇಷ.
2012ರಲ್ಲಿ ಕ್ರಿಸ್ ಗೇಲ್ ಅವರು ರಾಹುಲ್ ಶರ್ಮಾ ಬೌಲಿಂಗ್‌ನಲ್ಲಿ ಸತತ ಐದು ಸಿಕ್ಸರ್ (1, 6, 6, 6, 6, 6) ಬಾರಿಸಿದ್ದರು. 2020ರಲ್ಲಿ ಶೆಲ್ಡನ್ ಕಾಟ್ರೆಲ್ ಅವರ ಓವರ್‌ನಲ್ಲಿ ರಾಹುಲ್ ತೆವಾಟಿಯಾ ಐದು ಸಿಕ್ಸರ್ (6, 6, 6, 6, 6) ಬಾರಿಸಿ ಸ್ಫೋಟಕ ಇನ್ನಿಂಗ್ಸ್ ಪ್ರದರ್ಶಿಸಿದ್ದರು. 2021ರಲ್ಲಿ ರವೀಂದ್ರ ಜಡೇಜಾ ಅವರು ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ 5 ಸಿಕ್ಸರ್ (6, 6, NB+6, 6, 2, 6, 4) ದಾಖಲಿಸಿದ್ದರು. ನಿನ್ನೆಯ ಪಂದ್ಯದಲ್ಲಿ ಯಶ್ ದಯಾಳ್ ವಿರುದ್ಧ ರಿಂಕು ಅತ್ಯುನ್ನತ ಪ್ರದರ್ಶನ ನೀಡಿದ ವಿಶ್ವ ಕ್ರಿಕೆಟ್ ಗಮನ ಸೆಳೆದರು.
ರಶೀದ್ ಹ್ಯಾಟ್ರಿಕ್ ಸಾಧನೆ: ರಶೀದ್ ಖಾನ್ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಅಂದರೆ 4 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. 3 ಹ್ಯಾಟ್ರಿಕ್ಗಳನ್ನು ಟಿ20ಯಲ್ಲಿ ಇದುವರೆಗೂ ಐವರು ಗಳಿಸಿದ್ದಾರೆ. ಅಮಿತ್ ಮಿಶ್ರಾ, ಮೊಹಮ್ಮದ್ ಶಮಿ, ಆಂಡ್ರೆ ರಸೆಲ್, ಆಂಡ್ರ್ಯೂ ಟೈ ಮತ್ತು ಇಮ್ರಾನ್ ತಾಹೀರ್ ಹ್ಯಾಟ್ರಿಕ್ ವಿಕೆಟ್ ಸಾಧಕರು.
ಅತೀ ಹೆಚ್ಚು ರನ್ ಬಿಟ್ಟು ಕೊಟ್ಟ ಬೌಲರ್‌ಗಳು: ಯಶ್ ದಯಾಲ್ ನಿನ್ನೆ ನಾಲ್ಕು ಓವರ್‌ಗಳನ್ನು ಮಾಡಿ 69 ರನ್ ನೀಡಿದ್ದಾರೆ. ಇವರು ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಎರಡನೇ ದುಬಾರಿ ಬೌಲರ್. 2018ರಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಬೌಲರ್ ಬಾಸಿಲ್ ಥಂಪಿ 4 ಓವರ್‌ಗಳಲ್ಲಿ 70 ರನ್ ಚಚ್ಚಿಸಿಕೊಂಡಿದ್ದರು.
-
Watching this on L➅➅➅➅➅P... and we still can't believe what we just witnessed! 🤯pic.twitter.com/1tyryjm47W
— KolkataKnightRiders (@KKRiders) April 9, 2023 " class="align-text-top noRightClick twitterSection" data="
">Watching this on L➅➅➅➅➅P... and we still can't believe what we just witnessed! 🤯pic.twitter.com/1tyryjm47W
— KolkataKnightRiders (@KKRiders) April 9, 2023Watching this on L➅➅➅➅➅P... and we still can't believe what we just witnessed! 🤯pic.twitter.com/1tyryjm47W
— KolkataKnightRiders (@KKRiders) April 9, 2023
ಇದನ್ನೂ ಓದಿ: RCB vs LSG: ಆರ್ಸಿಬಿ ವಿರುದ್ಧ ಲಕ್ನೋ ಕಣಕ್ಕೆ, ತವರಲ್ಲಿ 2ನೇ ಜಯ ಕಾಣ್ತಾರಾ ಫಾಫ್ ಹುಡುಗರು