ಮುಂಬೈ: ವಾಂಖೆಡೆಯಲ್ಲಿ ಎರಡು ತಂಡಗಳು ಬೌಂಡರಿ ಮತ್ತು ಸಿಕ್ಸರ್ಗಳ ಸುರಿಮಳೆ ಸುರಿಸಿದ್ದು, ರಾಜಸ್ಥಾನ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಜಯ ಸಾಧಿಸಿದೆ.
ಪಂಜಾಬ್ ಇನ್ನಿಂಗ್ಸ್...
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಮಯಾಂಕ್ ಅಗರ್ವಾಲ್(14) ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಬಂದ ಯುನಿವರ್ಸಲ್ ಬಾಸ್ ಕ್ರಿಸ್ಗೇಲ್ ನಾಯಕ ರಾಹುಲ್ ಜೊತೆಗೂಡಿ 2ನೇ ವಿಕೆಟ್ಗೆ 67 ರನ್ಗಳ ಜೊತೆಯಾಟ ನೀಡಿದರು. ಗೇಲ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 40 ರನ್ಗಳಿಸಿ ಯುವ ಆಲ್ರೌಂಡರ್ ರಿಯಾನ್ ಪರಾಗ್ಗೆ ವಿಕೆಟ್ ಒಪ್ಪಿಸಿದರು.
-
This one went down to the wire! Sanju goes for the big shot over cover, but doesn't get all of it. Taken. @PunjabKingsIPL win by 4 runs.#VIVOIPL #RRvPBKS pic.twitter.com/HklxqlAGY2
— IndianPremierLeague (@IPL) April 12, 2021 " class="align-text-top noRightClick twitterSection" data="
">This one went down to the wire! Sanju goes for the big shot over cover, but doesn't get all of it. Taken. @PunjabKingsIPL win by 4 runs.#VIVOIPL #RRvPBKS pic.twitter.com/HklxqlAGY2
— IndianPremierLeague (@IPL) April 12, 2021This one went down to the wire! Sanju goes for the big shot over cover, but doesn't get all of it. Taken. @PunjabKingsIPL win by 4 runs.#VIVOIPL #RRvPBKS pic.twitter.com/HklxqlAGY2
— IndianPremierLeague (@IPL) April 12, 2021
ಗೇಲ್ ನಂತರ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ದೀಪಕ್ ಹೂಡ ರಾಯಲ್ಸ್ ಬೌಲರ್ಗಳ ದಾಳಿಯನ್ನು ಪುಡಿಗಟ್ಟಿದರು. ಅವರು ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಒಟ್ಟಾರೆ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ಗಳ ನೆರವಿನಿಂದ 64 ರನ್ ಸಿಡಿಸಿ ಕ್ರಿಸ್ ಮೋರಿಸ್ಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮುನ್ನ ನಾಯಕ ರಾಹುಲ್ ಜೊತೆಗೂಡಿ 3ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 46 ಎಸೆತಗಳಲ್ಲಿ 105 ರನ್ಗಳ ಕಾಣಿಕೆ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಕೊನೆಯಲ್ಲಿ ಅಬ್ಬರಿಸಿದ ರಾಹುಲ್ 50 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ 91 ರನ್ ಸಿಡಿಸಿ ಯುವ ಬೌಲರ್ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿ ಕೇವಲ 9 ರನ್ಗಳಿಂದ ಶತಕವಂಚಿತರಾದರು. ಉಳಿದಂತೆ ಪೂರನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಶಾರುಖ್ 6ರನ್ಗಳಿಸಿದರು. ಒಟ್ನಲ್ಲಿ ಪಂಜಾಬ್ ತಂಡ ನಿಗದಿತ 20 ಓವರ್ಗಳಿಗೆ 6 ವಿಕೆಟ್ಗಳನ್ನು ಕಳೆದುಕೊಂಡು 221 ರನ್ಗಳನ್ನು ಗಳಿಸಿತು.
ಪಂಜಾಬ್ ಅಬ್ಬರದ ನಡುವೆ ರಾಜಸ್ಥಾನ ತಂಡದಲ್ಲಿ ಮಿಂಚಿದ 23 ವರ್ಷದ ಚೇತನ್ ಸಕಾರಿಯಾ 31 ರನ್ ನೀಡಿ 3 ವಿಕೆಟ್ ಪಡೆದರು. ಮೋರಿಸ್ 41 ರನ್ ನೀಡಿ 2 ವಿಕೆಟ್ ಪಡೆದರೆ, ಪಾರ್ಟ್ ಟೈಮ್ ಬೌಲರ್ ಪರಾಗ್ ಒಂದು ವಿಕೆಟ್ ಪಡೆದರು.
ರಾಜಸ್ಥಾನ ಇನ್ನಿಂಗ್ಸ್...
ಪಂಜಾಬ್ ನೀಡಿದ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ತಾನಕ್ಕೆ ಆರಂಭಿಕ ಆಘಾತ ಎದುರಾಯ್ತು. ಖಾತೆ ತೆರೆಯುವ ಮುನ್ನವೇ ಶೆಮಿಗೆ ವಿಕೆಟ್ವೊಪ್ಪಿಸಿ ಬೆನ್ ಸ್ಟೋಕ್ಸ್ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಬಂದ ಮನನ್ ವೋಹ್ರಾ 12 ರನ್ಗಳನ್ನು ಗಳಿಸಿ ಅರ್ಷದೀಪ್ಗೆ ವಿಕೆಟ್ ನೀಡಿದರು. ಆರಂಭಿಕ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಆಸರೆಯಾದರು.
ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಜೊತೆಗೂಡಿದ ಬಟ್ಲರ್ ತಂಡದ ಮೊತ್ತವನ್ನು ಹೆಚ್ಚುಸುವಲ್ಲಿ ಸಫಲವಾದರು. ರಿಚರ್ಡ್ಸನ್ ಬೌಲಿಂಗ್ನಲ್ಲಿ 25 ರನ್ಗಳನ್ನು ಗಳಿಸಿದ್ದ ಬಟ್ಲರ್ ಔಟಾದರು. ಬಳಿಕ ಬಂದ ಶಿವಂ ದುಬೆ 15 ಎಸೆತಕ್ಕೆ 23 ರನ್ಗಳನ್ನು ಗಳಿಸಿ ಅರ್ಷದೀಪ ಸಿಂಗ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ಯುವ ಆಟಗಾರ ರಿಯಾನ್ ಪರಾಗ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಾಗ್ 11 ಎಸೆತಕ್ಕೆ 25 ರನ್ಗಳನ್ನು ಗಳಿಸಿ ಶೆಮಿಗೆ ವಿಕೆಟ್ವೊಪ್ಪಿಸಿ ಪೆವಿಲಿಯನ್ ಸೇರಿದರು.
ಒಂದು ಕಡೆಯಿಂದ ರಾಜಸ್ಥಾನ ಆಟಗಾರರು ಅಬ್ಬರದ ಬ್ಯಾಟಿಂಗ್ ನಡೆಸಿ ಪೆವಿಲಿಯನ್ ಹಾದಿ ಹಿಡಿಯುತ್ತಿದ್ದರೇ, ಇನ್ನೊಂದೆಡೆ ನಾಯಕ ಗ್ರಿಸ್ನಲ್ಲೇ ಇದ್ದು ಜವಾಬ್ದಾರಿಯುತ ಮತ್ತು ಅಬ್ಬರದ ಆಟವನ್ನು ಆಡುತ್ತಾ ತಂಡವನ್ನು ಗೆಲುವಿನ ದಡ ಸೇರಿಸಲು ಯತ್ನಿಸುತ್ತಿದ್ದರು. ಆದ್ರೆ ಕೊನೆಕ್ಷಣದಲ್ಲಿ ಪಂದ್ಯ ಬದಲಾಯಿತು.
ಹೌದು, ಕೊನೆಯ ಓವರ್ನಲ್ಲಿ ತಂಡದ ಗೆಲುವಿಗೆ 13 ರನ್ಗಳು ಬೇಕಾಗಿತ್ತು. ಗ್ರೀಸ್ನಲ್ಲಿದ್ದ ನಾಯಕ ಸಂಜು ಸ್ಯಾಮ್ಸನ್ ಅರ್ಷದೀಪ್ನ ಮೊದಲ ಎಸೆತ ಡಾಟ್ ಮಾಡಿದರು. ಎರಡನೇ ಎಸೆತ ಒಂದು ರನ್ ತೆಗೆದು ಕ್ರಿಸ್ ಮೋರಿಸ್ಗೆ ಬ್ಯಾಟಿಂಗ್ ನೀಡಿದರು. ಕ್ರಿಸ್ ಮೋರಿಸ್ ಮೂರನೇ ಎಸೆತದಲ್ಲಿ ಒಂದು ರನ್ ತೆಗೆದು ಸಂಜಗೆ ಬ್ಯಾಟಿಂಗ್ ನೀಡಿದರು.
ಅರ್ಷದೀಪ್ನ ನಾಲ್ಕನೇ ಎಸೆತದಲ್ಲಿ ಸಂಜು ಸಿಕ್ಸ್ ಬಾರಿಸಿದರು. ಈ ವೇಳೆ ರಾಜಸ್ಥಾನ ತಂಡಕ್ಕೆ ಗೆಲುವಿನ ಭರವಸೆ ಹೆಚ್ಚಾಯ್ತು. ಐದನೇ ಎಸೆತದಲ್ಲಿ ಸಂಜು ರನ್ ತೆಗೆದುಕೊಳ್ಳದೇ ಕ್ರೀಸ್ನಲ್ಲೇ ಉಳಿದರು. ಆದ್ರೆ ಅರ್ಷದೀಪ್ನ ಕೊನೆಯ ಎಸೆತದಲ್ಲಿ ನಾಯಕ ಸಂಜು ದೀಪಕ್ ಹೂಡಾಗೆ ಕ್ಯಾಚ್ ನೀಡಿ ಔಟಾದರು. ಈ ಮೂಲಕ ರಾಜಸ್ಥಾನ ತಂಡ ನಾಲ್ಕು ರನ್ಗಳಿಂದ ಸೋಲನ್ನಪ್ಪಿತು. ಇನ್ನು ಸಂಜು ಸ್ಯಾಮ್ಸನ್ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ಗಳನ್ನು ಸಿಡಿಸಿ 119 ರನ್ಗಳನ್ನು ಕಲೆ ಹಾಕುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು.
ರಾಜಸ್ಥಾನ ರಾಯಲ್ಸ್ ವಿರುದ್ಧ ಪಂಜಾಬ್ ತಂಡ 4 ರನ್ಗಳ ರೋಚಕ ಜಯ ಸಾಧಿಸಿತು. ಮಂಗಳವಾರ ರಾತ್ರಿ 7.30ಕ್ಕೆ ಚೆನ್ನೈನಲ್ಲಿ ಎರಡು ಬಾರಿ ಐಪಿಎಲ್ ಟ್ರೋಫಿ ಪಡೆದಿರುವ ಕೊಲ್ಕತ್ತಾ ವಿರುದ್ಧ ಐದು ಬಾರಿ ಐಪಿಎಲ್ ಪಟ್ಟ ಪಡೆದಿರುವ ಮುಂಬೈ ಸೆಣಸಲಿದೆ.