ETV Bharat / sports

RCB vs CSK: ಕಾನ್ವೆ-ದುಬೆ ಭರ್ಜರಿ ಬ್ಯಾಟಿಂಗ್​, ಆರ್​ಸಿಬಿಗೆ 227 ರನ್​ ಬೃಹತ್​ ಗುರಿ - ರಾಯಲ್ ಚಾಲೆಂಜರ್ಸ್​ ಬೆಂಗಳೂರು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್​ ಗೆದ್ದ ಆರ್‌ಸಿಬಿ ನಾಯಕ ಫಾಫ್​ ಡುಪ್ಲೆಸಿಸ್‌ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿದ್ದರು.

Royal Challengers Bangalore vs Chennai Super Kings
RCB vs CSK: ಸಿಎಸ್​ಕೆ ವಿರುದ್ಧ ಬೌಲಿಂಗ್​ ಆಯ್ಕೆ ಮಾಡಿಕೊಂಡ ಫಾಫ್​
author img

By

Published : Apr 17, 2023, 7:16 PM IST

Updated : Apr 17, 2023, 9:30 PM IST

ಬೆಂಗಳೂರು: ಡೆವೊನ್ ಕಾನ್ವೆ ಮತ್ತು ಶಿವಂ ದುಬೆ ಅವರ ಅಬ್ಬರದ ಅರ್ಧಶತಕದಾಟದ ನೆರವಿನಿಂದ ಚೆನ್ನೈ ಸೂಪರ್​ ಕಿಂಗ್ಸ್​ ನಿಗದಿತ ಓವರ್‌ಗಳ​ ಅಂತ್ಯಕ್ಕೆ 6 ವಿಕೆಟ್​ ನಷ್ಟದಿಂದ 226 ರನ್​ ಗಳಿಸಿತು. ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಉತ್ತಮ ಬೌಲಿಂಗ್​ ನಿರ್ವಹಿಸಿದ್ದ ವಿಜಯ್​ ಕುಮಾರ್​ ವೈಶಾಕ್​ ನಾಲ್ಕು ಓವರ್​ನಲ್ಲಿ 62 ರನ್​ ಬಿಟ್ಟು ಕೊಟ್ಟು ಒಂದು ವಿಕೆಟ್​ ಪಡೆದು ದುಬಾರಿ ಬೌಲರ್‌ ಎನಿಸಿಕೊಂಡರು. ಆರ್​ಸಿಬಿ ಗೆಲುವಿಗೆ 227 ರನ್​ ಬೇಕಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಬಂದ ಚೆನ್ನೈ ಸೂಪರ್​ ಕಿಂಗ್ಸ್​ ಆರಂಭಿಕ ಆಘಾತ ಎದುರಿಸಿತು. 3 ರನ್​ ಗಳಿಸಿದ ರುತುರಾಜ್ ಗಾಯಕ್ವಾಡ್ ಅವರನ್ನು ಸಿರಾಜ್​ ಪೆವಿಲಿಯನ್​ಗೆ ಅಟ್ಟಿದರು. ನಂತರ ಬಂದ ಅಜಿಂಕ್ಯ ರಹಾನೆ ಮತ್ತೊಬ್ಬ ಆರಂಭಿಕ ಡೆವೊನ್ ಕಾನ್ವೆ ಜೊತೆಗೂಡಿದರು. ಈ ಜೋಡಿ 74 ರನ್ ಜೊತೆಯಾಟ ನೀಡಿತು. ರಹಾನೆ ತಮ್ಮ ಫಾರ್ಮ್ ಮುಂದುವರೆಸಿದರು. 20 ಬಾಲ್ ಎದುರಿಸಿದ ಅವರು 3 ಬೌಂಡರಿ ಮತ್ತು ಎರಡು ಸಿಕ್ಸ್​ನಿಂದ 37 ರನ್​ ಕಲೆ ಹಾಕಿದರು.

ರಹಾನೆ ವಿಕೆಟ್​ ಬಳಿಕ ಬಂದ ಶಿವಂ ದುಬೆ ಅಬ್ಬರದ ಬ್ಯಾಟಿಂಗ್‌ಗೆ ಮುಂದಾದರು. ಅತ್ತ ಆರಂಭಿಕ ಆಟಗಾರ ಕಾನ್ವೆ ಆರ್​ಸಿಬಿ ಬೌಲರ್​ಗಳನ್ನು ಸರಿಯಾಗಿ ದಂಡಿಸುತ್ತಿದ್ದರು. ಅವರ ಜೊತೆ ಸೇರಿದ ದುಬೆಯೂ ಸಹ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲೆಮೂಲೆಗೆ ಚೆಂಡನ್ನಟ್ಟಿದರು. ಡೆವೊನ್ ಕಾನ್ವೆ 17 ರನ್​ನಿಂದ ಶತಕ ವಂಚಿತರಾಗಿ ಪೆವಿಲಿಯನ್​ಗೆ ಮರಳಿದರು. ಈ ಇನ್ನಿಂಗ್ಸ್​ನಲ್ಲಿ ಕಾನ್ವೆ 45 ಬಾಲ್​ ಎದುರಿಸಿ 6 ಬೌಂಡರಿ ಮತ್ತು ಸಿಕ್ಸ್​ನಿಂದ 83 ರನ್​ ಕಲೆ ಹಾಕಿದರು.

ಕಾನ್ವೆ ವಿಕೆಟ್​ ನಂತರ ದುಬೆ ತಮ್ಮ ರನ್​ ವೇಗ ಹೆಚ್ಚಿಸಿದರು. ಕೇವಲ 27 ಬಾಲ್​ ಎದುರಿಸಿದ​ ಅವರು 5 ಸಿಕ್ಸ್​ ಮತ್ತು 2 ಬೌಂಡರಿಯಿಂದ 52 ರನ್​ ಕಲೆಹಾಕಿ ಔಟಾದರು. ರಾಯುಡು (14) ಮತ್ತು ಜಡೇಜಾ (10) ಕೊಡುಗೆ ನೀಡಿದರು. ಕೊನೆಯಲ್ಲಿ ಅಲಿ (19) ಮತ್ತು ಧೋನಿ (1) ಅಜೇಯರಾಗುಳಿದರು.

ಬೆಂಗಳೂರು ಪರ ಹರ್ಷಲ್ ಪಟೇಲ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್​ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಒಂದು ವಿಕೆಟ್​ ಪಡೆದರು.

ತಂಡಗಳು ಇಂತಿವೆ..: ಚೆನ್ನೈ ಸೂಪರ್​ ಕಿಂಗ್ಸ್: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ನಾಯಕ/ವಿಕೆಟ್​ ಕೀಪರ್​​), ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್(ವಿಕೆಟ್​ ಕೀಪರ್​), ಹರ್ಷಲ್ ಪಟೇಲ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್​

ಇದನ್ನೂ ಓದಿ: ಹೊಡಿಬಡಿ ಕ್ರಿಕೆಟ್​ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರಿವರು!

Last Updated : Apr 17, 2023, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.