ETV Bharat / sports

IPL 2023: 10 ರನ್​ಗಳಿಂದ ರಾಜಸ್ಥಾನ ರಾಯಲ್ಸ್​ ಮಣಿಸಿದ ಕೆಎಲ್​ ರಾಹುಲ್​ ಪಡೆ

author img

By

Published : Apr 20, 2023, 12:40 AM IST

ಜೈಪುರದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡವನ್ನು ಲಖನೌ ಸೂಪರ್ ಜೈಂಟ್ಸ್ ತಂಡ ಮಣಿಸಿದೆ.

Etv Bharat
Etv Bharat

ಜೈಪುರ (ರಾಜಸ್ಥಾನ): ಐಪಿಎಲ್​ 16ನೇ ಆವೃತ್ತಿಯಲ್ಲಿ ಕೆಎಲ್​ ರಾಹುಲ್​ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ ರಾಯಲ್ಸ್​ ತಂಡದ ವಿರುದ್ಧ 10 ರನ್​ಗಳಿಂದ ಗೆಲುವು ಸಾಧಿಸಿದೆ. ಲಖನೌ ನೀಡಿದ್ದ 155 ರನ್​ಗಳ​ ಟಾರ್ಗೆಟ್​​ ಬೆನ್ನಟ್ಟಿದ್ದ ರಾಜಸ್ಥಾನ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 144 ರನ್​ ಮಾತ್ರ ಕಲೆ ಹಾಕಿ ಸೋಲೊಪ್ಪಿಕೊಂಡಿತು.

ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡ ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ದುಕೊಂಡಿತ್ತು. ಇದರಿಂದ ಬ್ಯಾಟಿಂಗ್​ಗೆ ಇಳಿದ ಲಖನೌ ಸೂಪರ್ ಜೈಂಟ್ಸ್ ನಿಗದಿತ 20 ಓವರ್​ಗಳಲ್ಲಿ ಏಳು ವಿಕೆಟ್​ ನಷ್ಟಕ್ಕೆ 154 ರನ್​ ಕಲೆ ಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆಎಲ್ ರಾಹುಲ್ ಹಾಗೂ ಕೈಲ್ ಮೇಯರ್ಸ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 82 ರನ್ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿತು. ಆದರೆ, ರನ್ ರೇಟ್ ಮಾತ್ರ ಕಡಿಮೆ ಇತ್ತು. 82 ರನ್​ ಗಳಿಸಲು ಈ ಬ್ಯಾಟರ್​ಗಳು 11.4 ಓವರ್​​ಗಳನ್ನು​​ ಬಳಸಿಕೊಂಡರು.

ನಾಯಕ ರಾಹುಲ್ 32 ಎಸೆತದಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್​ ಸಮೇತ 39 ರನ್ ಸಿಡಿಸಿ ವಿಕೆಟ್​ ಒಪ್ಪಿಸಿದರು. ನಂತರ ಬಂದ ಆಯುಷ್ ಬದೋನಿ (1) ಮತ್ತು ದೀಪಕ್ ಹೂಡಾ (2) ಬೇಗ ಪೆವಿಲಿಯನ್​ ಸೇರಿದರು. ಮತ್ತೊಂದೆಡೆ, ಮೇಯರ್ಸ್ 42 ಬಾಲ್​ಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್​ ನೆರವಿನಿಂದ 51 ರನ್​ ಬಾರಿಸಿ ಔಟಾದರು. ಇದರ ನಡುವೆ ಮಾರ್ಕಸ್ ಸ್ಟೊಯ್ನಿಸ್ (21) ಮತ್ತು ನಿಕೋಲ್ ಪೂರನ್ 29 ರನ್​ಗಳ ಕಾಣಿಕೆ ನೀಡಿದರು. ಯುಧವೀರ್​ ಸಿಂಗ್​ 1 ರನ್​ ಹಾಗಾ ಕೃನಾಲ್ ಪಾಂಡ್ಯ 4* ರನ್​ ಬಾರಿಸಿದರು.

ರಾಜಸ್ಥಾನ ರಾಯಲ್ಸ್​ ಪರ ಆರ್​.ಅಶ್ಚಿನ್ ​2 ವಿಕೆಟ್​ ಹಾಗೂ, ಟ್ರೆಂಟ್ ಬೌಲ್ಟ್, ಸಂದೀಪ್​ ಶರ್ಮಾ, ಜಾನ್ಸನ್​ ಹೋಲ್ಡರ್ ತಲಾ 1 ವಿಕೆಟ್​​ ಪಡೆದರು. ನಂತರ 155 ರನ್​ಗಳ ಸಂಜು ಸ್ಯಾಮ್ಸನ್ ಪಡೆ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 144 ರನ್​ ಮಾತ್ರ ಕಲೆ ಹಾಕಲು ಶಕ್ತವಾಯಿತು.

ರಾಜಸ್ಥಾನ ರಾಯಲ್ಸ್​ ಪರ ಇನ್ನಿಂಗ್ಸ್​ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಉತ್ತಮ ಆರಂಭವನ್ನೇ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 87 ರನ್ ಜೊತೆಯಾಟ ನೀಡಿತು. 35 ಬಾಲ್​ಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ ಸಮೇತ ಜೈಸ್ವಾಲ್ 44 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ ಕೇವಲ 2 ರನ್​ಗೆ ರನೌಟ್‌ ಬಲಿಗೆ ಸಿಲುಕಿದರು.

ಸ್ವಲ್ಪ ಹೊತ್ತಲ್ಲೇ ಜೋಸ್​ ಬಟ್ಲರ್ 41 ಎಸೆತಗಳಲ್ಲಿ ನಾಲ್ಕು ಬೌಂಡರಿ, ಒಂದು ಸಿಕ್ಸರ್​ 40 ರನ್ ಸಿಡಿಸಿ ನಿರ್ಗಮಿಸಿದರು. ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಆಟ ಆರಂಭಿಸಿದರೆ, ಶಿಮ್ರೊನ್ ಹೆಟ್ಮೆಯರ್ ಕೇವಲ 2 ರನ್​ಗೆ ವಿಕೆಟ್​ ಒಪ್ಪಿಸಿದರು. ಪಡಿಕ್ಕಲ್ ಹಾಗೂ ರಿಯಾನ ಪರಾಗ್ ಹೋರಾಟದಿಂದ ರಾಜಸ್ಥಾನಕ್ಕೆ ಗೆಲುವಿನ ನಿರೀಕ್ಷೆ ಹೆಚ್ಚಿಸಿತ್ತು. ಕೊನೆಯ ಓವರ್​ನಲ್ಲಿ 19 ರನ್​ಗಳ ಅಗತ್ಯವಿತ್ತು. ಆದರೆ, 26 ರನ್​ ಗಳಿಸಿದ್ದ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ (0) ಅವರ ಸತತವಾಗಿ ಎರಡು ವಿಕೆಟ್​ಗಳ ಬಿದ್ದವು. ಇದರಿಂದ ಅಂತಿಮವಾಗಿ 144 ರನ್​ ಮಾತ್ರ ಸಿಡಿಸಲು ಸಾಧ್ಯವಾಯಿತು. ಇದರೊಂದಿಗೆ ಕೆಎಲ್ ರಾಹುಲ್​ ಪಡೆ 10 ರನ್​ಗಳ ಗೆಲುವು ಸಾಧಿಸಿತು. ರಿಯಾನ ಪರಾಗ್ (14), ಆರ್.ಅಶ್ವಿನ್​ (4) ಅಜೇಯವಾಗಿ ಉಳಿದರು.

ಇನ್ನು, ಈ ಟೂರ್ನಿಯಲ್ಲಿ ರಾಜಸ್ಥಾನ ಮತ್ತು ಲಖನೌ ತಂಡಗಳು ತಲಾ 6 ಪಂದ್ಯಗಳನ್ನು ಆಡಿದ್ದು, ಈ ಪೈಕಿ ತಲಾ ನಾಲ್ಕು ಪಂದ್ಯಗಳನ್ನು ಗೆದ್ದಿವೆ. ಅಂಕಪಟ್ಟಿಯಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿ ಮಂದುವರಿದರೆ, ಲಖನೌ ಎರಡನೇ ಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.