ETV Bharat / sports

ಐಪಿಲ್​ 2023 : ಚೆನ್ನೈ ಸೂಪರ್​ ಕಿಂಗ್ಸ್​​ಗೆ 203 ರನ್​ ಟಾರ್ಗೆಟ್​ ನೀಡಿದ ರಾಜಸ್ಥಾನ ರಾಯಲ್ಸ್​

author img

By

Published : Apr 27, 2023, 10:24 PM IST

Updated : Apr 27, 2023, 10:36 PM IST

ಸವಾಯಿ ಮಾನಸಿಂಗ್​ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್​ ನಡುವೆ ಪಂದ್ಯ ನಡೆಯುತ್ತಿದೆ.

Rajasthan Royals and Chennai Super Kings
ರಾಜಸ್ತಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್

ಜೈಪುರ (ರಾಜಸ್ಥಾನ) : ಸವಾಯಿ ಮಾನಸಿಂಗ್​ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಐಪಿಲ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​​ ತಂಡಗಳು ಮುಖಾಮುಖಿಯಾಗಿವೆ. ಟಾಸ್​ ಗೆದ್ದ ರಾಜಸ್ಥಾನ ತಂಡವು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು. ರಾಜಸ್ಥಾನ ತಂಡವು 5 ವಿಕೆಟ್​ ನಷ್ಟಕ್ಕೆ 202 ಕಲೆಹಾಕಿ ಚೆನ್ನೈ ಗೆಲುವಿಗೆ 203 ರನ್​ ಟಾರ್ಗೆಟ್​ ನೀಡಿದೆ.

ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗು ಜೋಸ್ ಬಟ್ಲರ್ ಪವರ್​ ಫ್ಲೇನಲ್ಲಿ ಉತ್ತಮ ಆಟವಾಡುವ ಮೂಲಕ ತಂಡದ ಮೊತ್ತ 50 ರನ್​ ಗಡಿ ದಾಟಿಸಿದರು.

ಹೀಗೆ ಆರ್ಕಷಕ ಬೌಂಡರಿ ಸಿಕ್ಸರ್​ ಹೊಡೆಯುತ್ತಿದ್ದ ಈ ಜೋಡಿಯನ್ನು 9ನೇ ಓವರ್​ನಲ್ಲಿ ರವೀಂದ್ರ ಜಡೇಜಾ ಬೌಲಿಂಲಿಗ್ ಮಾಡಿ ಜೋಸ್ ಬಟ್ಲರ್​ನನ್ನು ಔಟ್​ ಮಾಡುವ ಮೂಲಕ ಬೇರ್ಪಡಿಸಿದರು. ಜೋಸ್ ಬಟ್ಲರ್ 21 ಬಾಲ್​ನಲ್ಲಿ 27 ರನ್ ಗಳಿಸಿ ಶಿವಂ ದುಬೆಗೆ ಕ್ಯಾಚ್​ ಕೊಟ್ಟು ಪೆವಿಲಿಯನ್​ಯತ್ತ ಹೆಜ್ಜೆಹಾಕಿದರು. ಬಳಿಕ ಬಂದ ರಾಜಸ್ಥಾನ ನಾಯಕ ಸಂಜು ಸಾಮ್ಸನ್​ ಉತ್ತಮ ಆಟ ಆಡುವ ಭರವಸೆ ಮೂಡಿಸಿ ಮತ್ತ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಬಿಗಿ ಬೌಲಿಂಗ್​ ದಾಳಿ ಮುಂದುವರಿಸಿದ ​ತುಷಾರ್ ದೇಶಪಾಂಡೆ 13ನೇ ಓವರ್​ನಲ್ಲಿ ಸಂಜು ಸಾಮ್ಸನ್​ರನ್ನು (17) ಹಾಗು ಅದೇ ಓವರ್​ನಲ್ಲಿ ಮತ್ತೊಬ್ಬ ಆರಂಭಿಕ ಸ್ಫೋಟಕ ಬ್ಯಾಟ್​ಮನ್​ ಯಶಸ್ವಿ ಜೈಸ್ವಾಲ್ (77) ರನ್​ಗೆ ಕಟ್ಟಿ ಹಾಕಿದರು.

ಶಿಮ್ರಾನ್ ಹೆಟ್ಮೆಯರ್ ಹಾಗು ಧ್ರುವ್ ಜುರೆಲ್ ಜೋಡಿ ತಂಡದ ಮೊತ್ತವನ್ನು ಹೆಚ್ಚಿಸುವ ಸೂಚನೆ ನೀಡಿತ್ತು. ಆದರೆ 17ನೇ ಓವರ್​ ಎಸೆದ ಮತೀಶ ಪತಿರಾನ ಬೌಲಿಂಗ್​ನಲ್ಲಿ ಹೆಟ್ಮೆಯರ್ (8) ಸದ್ದಿಲ್ಲದೆ ಕ್ಲೀನ್​ ಬೌಲ್ಡ್​ ಆಗಿ ಪೆವಿಲಿಯನ್​ ಹಾದಿ ಹಿಡಿದರು. ನಂತರ ಧ್ರುವ್ ಜುರೆಲ್​ಗೆ ಜೊತೆಯಾದ ದೇವದತ್ ಪಡಿಕ್ಕಲ್ ಜೋಡಿ ತಂಡದ ರನ್​ ಹೆಚ್ಚಿಸಲು ಚೆನ್ನೈ ಬೌಲರ್ಸ್ ಮೇಲೆ ಸವಾರಿ ಮಾಡಿ 200 ಪ್ಲಸ್ ರನ್​ ತಲುಪಲು ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಕೊನೆಯ ಓವರ್​ನಲ್ಲಿ ರನ್​ ಕದಿಯಲು ಹೋದ ಧ್ರುವ್ ಜುರೆಲ್ (34) ರನ್​ ಔಟ್​ಗೆ ಬಲಿಯಾಗಬೇಕಾಯಿತು. ನಂತರ ರವಿಚಂದ್ರನ್​ ಆಶ್ವಿನ್​ ಹಾಗು ದೇವದತ್ ಪಡಿಕ್ಕಲ್ ಆಟದಿಂದಾಗಿ ರಾಜಸ್ಥಾನ ತಂಡವು 5 ವಿಕೆಟ್​ ನಷ್ಟಕ್ಕೆ 202 ಕಲೆಹಾಕಿ ಚೆನ್ನೈ ಗೆಲುವಿಗೆ 203 ರನ್​ ಟಾರ್ಗೆಟ್​ ನೀಡಿದೆ.

ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ ರಾರಾಜಿಸಿದ KGF Vs RRR... ಪಂದ್ಯ ಸೋತರೂ ದಾಖಲೆ ಬರೆದ ಕಿಂಗ್​ ಕೊಹ್ಲಿ..!

Last Updated : Apr 27, 2023, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.