ಮೊಹಾಲಿ (ಪಂಜಾಬ್): ಕಳೆದ ಪಂದ್ಯಗಳಲ್ಲಿ ಸೋಲು ಕಂಡಿರುವ ತಂಡಗಳಾದ ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಇಂದು ಎದುರಾಗಲಿವೆ. ತವರು ನೆಲವಾದ ಮೊಹಾಲಿಯಲ್ಲಿ ಪಂಜಾಬ್ ಎರಡನೇ ಗೆಲುವು ದಾಖಲಿಸಲು ಕಾತುರವಾಗಿದ್ದರೆ, ರಿಂಕು ಸಿಂಗ್ ಅಬ್ಬರಕ್ಕೆ ಕೊನೆಯಲ್ಲಿ ಅಚ್ಚರಿಯ ಸೋಲುಂಡಿದ್ದ ಟೈಟಾನ್ಸ್ ಗೆಲುವಿನ ಹಳಿಗೆ ಮರಳಲು ಸಜ್ಜಾಗಿದೆ.
ಪಂಜಾಬ್ ಆಡಿರುವ ಮೂರು ಪಂದ್ಯಗಳಲ್ಲಿ 2 ರಲ್ಲಿ ಗೆದ್ದು 1 ರಲ್ಲಿ ಸೋಲು ಕಂಡಿದೆ. ಗುಜರಾತ್ ಕೂಡ ಇದೇ ಫಲಿತಾಂಶ ಕಂಡಿದೆ. ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡಿ 99 ರನ್ ಗಳಿಸಿ 1 ರನ್ನಿಂದ ಶತಕ ತಪ್ಪಿಸಿಕೊಂಡಿದ್ದರು. ಉಳಿದ ಬ್ಯಾಟರ್ಗಳು ಸ್ಥಿರ ಪ್ರದರ್ಶನ ನೀಡದೇ ಇರುವುದು ತಂಡಕ್ಕೆ ತಲೆನೋವು ತಂದಿದೆ.
-
ARSHID! 🤝☺️#JazbaHaiPunjabi #SaddaPunjab #PunjabKings #TATAIPL | @arshdeepsinghh @rashidkhan_19 pic.twitter.com/w7MQ7gwSoD
— Punjab Kings (@PunjabKingsIPL) April 12, 2023 " class="align-text-top noRightClick twitterSection" data="
">ARSHID! 🤝☺️#JazbaHaiPunjabi #SaddaPunjab #PunjabKings #TATAIPL | @arshdeepsinghh @rashidkhan_19 pic.twitter.com/w7MQ7gwSoD
— Punjab Kings (@PunjabKingsIPL) April 12, 2023ARSHID! 🤝☺️#JazbaHaiPunjabi #SaddaPunjab #PunjabKings #TATAIPL | @arshdeepsinghh @rashidkhan_19 pic.twitter.com/w7MQ7gwSoD
— Punjab Kings (@PunjabKingsIPL) April 12, 2023
ಇತ್ತ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್, ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊನೆಯಲ್ಲಿ ಶಾಕಿಂಗ್ ಸೋಲು ಕಂಡಿತ್ತು. ನಾಯಕ ಹಾರ್ದಿಕ್ ಪಾಂಡ್ಯ ಅನಾರೋಗ್ಯಕ್ಕೀಡಾದ ಕಾರಣ ಸ್ಪಿನ್ನರ್ ರಶೀದ್ ಖಾನ್ ತಂಡ ಮುನ್ನಡೆಸಿದ್ದರು. 200 ಅಧಿಕ ರನ್ ಗಳಿಸಿದಾಗ್ಯೂ ತಂಡ ರಿಂಕು ಸಿಂಗ್ರ ಅಬ್ಬರದ ಸತತ 5 ಸಿಕ್ಸರ್ಗಳಿಂದಾಗಿ ಸೋಲು ಕಂಡಿತ್ತು. ಕೆಕೆಆರ್ ಎದುರಿನ ಸೋಲಿನ ಬಳಿಕ ತಂಡ ಡೆತ್ ಓವರ್ಗಳನ್ನು ಬಲಪಡಿಸಬೇಕಿದೆ.
ಪಂಜಾಬ್ಗೆ ವಿದೇಶಿಯರ ಬಲ: ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ತಂಡ ಸೇರಿಕೊಂಡಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ ಸ್ಥಾನ ಪಡೆಯಬಹುದು. ಕಳೆದ ಪಂದ್ಯದಲ್ಲಿ ಸಿಕಂದರ್ ರಾಜಾ ವಿಫಲವಾಗಿದ್ದು, ಭಾನುಕಾ ರಾಜಪಕ್ಸೆಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ. ನಾಥನ್ ಎಲ್ಲಿಸ್ ಅಥವಾ ಕಗಿಸೊ ರಬಾಡ ಬೌಲಿಂಗ್ಗೆ ಬಲ ನೀಡಲಿದ್ದಾರೆ. ಗಿಲ್ ಅವರ ವಿರುದ್ಧ ರಬಾಡ ಪರಿಣಾಮಕಾರಿಯಾಗಿದ್ದು, ಕಣಕ್ಕಿಳಿಯುವ ಸಾಧ್ಯತೆ ಇದೆ.
-
Buckle up and brace yourself for a fierce battle in the kingdom of Shers! 🤩
— Gujarat Titans (@gujarat_titans) April 12, 2023 " class="align-text-top noRightClick twitterSection" data="
Watch our match preview for #PBKSvGT powered by @atherenergy ⚡#AavaDe | TATAIPL 2023 pic.twitter.com/4HyKEqpsZz
">Buckle up and brace yourself for a fierce battle in the kingdom of Shers! 🤩
— Gujarat Titans (@gujarat_titans) April 12, 2023
Watch our match preview for #PBKSvGT powered by @atherenergy ⚡#AavaDe | TATAIPL 2023 pic.twitter.com/4HyKEqpsZzBuckle up and brace yourself for a fierce battle in the kingdom of Shers! 🤩
— Gujarat Titans (@gujarat_titans) April 12, 2023
Watch our match preview for #PBKSvGT powered by @atherenergy ⚡#AavaDe | TATAIPL 2023 pic.twitter.com/4HyKEqpsZz
ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ರಶೀದ್ ಖಾನ್ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ. ಇನ್ನು 2018 ರಿಂದ ಪಂಜಾಬ್ ಕಿಂಗ್ಸ್ ಮೊಹಾಲಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 9 ರಲ್ಲಿ ಗೆಲುವು ದಾಖಲಿಸಿದೆ.
100 ವಿಕೆಟ್ ಹೊಸ್ತಿಲಲ್ಲಿ ರಬಾಡ: ಈ ಪಂದ್ಯದಲ್ಲಿ ಕಗಿಸೊ ರಬಾಡ ಆಡಿ 1 ವಿಕೆಟ್ ಪಡೆದರೆ ಐಪಿಎಲ್‌ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ. 63 ಪಂದ್ಯಗಳಲ್ಲಿ 99 ವಿಕೆಟ್ ಕಿತ್ತಿರುವ ದಕ್ಷಿಣ ಆಫ್ರಿಕಾದ ಬೌಲರ್, ಐಪಿಎಲ್‌ನಲ್ಲಿ ಅತಿ ವೇಗವಾಗಿ ಶತಕದ ವಿಕೆಟ್ ಗಳಿಸಿದ ಲಸಿತ್ ಮಾಲಿಂಗ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಮಾಲಿಂಗ 70 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
ಪಂಜಾಬ್ ವಿರುದ್ಧ ಪರಿಣಾಮಕಾರಿ ಬ್ಯಾಟಿಂಗ್ ಮಾಡಿರುವ ಶುಭಮನ್ ಗಿಲ್ ಈ ಪಂದ್ಯದಲ್ಲೂ ಅಬ್ಬರಿಸುತ್ತಾರಾ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಪಂಜಾಬ್ ವಿರುದ್ಧ ಆಡಿರುವ 9 ಇನ್ನಿಂಗ್ಸ್‌ಗಳಲ್ಲಿ 139.24 ಸ್ಟ್ರೈಕ್ ರೇಟ್ ಮತ್ತು 55 ರ ಸರಾಸರಿಯಲ್ಲಿ 330 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧ ಶತಕಗಳು ಇದ್ದು, ಅವರ ಐಪಿಎಲ್ನ ಬೆಸ್ಟ್ ಸ್ಕೋರ್ 96 ಸಹ ಪಂಜಾಬ್ ವಿರುದ್ಧವೇ ಆಗಿದೆ.
ಸಂಭಾವ್ಯ ತಂಡಗಳು ಇಂತಿವೆ..: ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರಾನ್ ಸಿಂಗ್, ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಸಿಕಂದರ್ ರಜಾ/ಭಾನುಕಾ ರಾಜಪಕ್ಸೆ, ಸ್ಯಾಮ್ ಕರ್ರನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ನಾಥನ್ ಎಲ್ಲಿಸ್/ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಜೋಶುವಾ ಲಿಟಲ್.
ಇದನ್ನೂ ಓದಿ: CSK vs RR: ಬಟ್ಲರ್ 3000 ರನ್ ಮೈಲಿಗಲ್ಲು, ಚೆನ್ನೈಗೆ 176 ರನ್ನ ಸಾಧಾರಣ ಗುರಿ